ಕುಮಟಾ : ವಿದ್ಯಾರ್ಥಿ ಮಾರ್ಗದರ್ಶನ ಕೇಂದ್ರ, ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಕುಮಟಾ ಇವರು ದೇಶಪಾಂಡೆ ಸ್ಕಿಲ್ಲಿಂಗ್, ಹುಬ್ಬಳ್ಳಿ ಇವರ ಸಭಾಗಿತ್ವದಲ್ಲಿ (24)7 ಎ.ಎ ಕಂಪನಿಗಾಗಿ ಏ. 22 ರಂದು ಬೆಳಿಗ್ಗೆ 9.30 ಗಂಟೆಗೆ ಡಾ. ಎ. ವಿ. ಬಾಳಿಗಾ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.

RELATED ARTICLES  ಅಗಲಿದ ಮಂಜುನಾಥ ಗೌಡ ವಾಲಗಳ್ಳಿ ಅವರಿಗೆ ಆನ್ ಲೈನ್ ಶೃದ್ದಾಂಜಲಿ ಕಾರ್ಯಕ್ರಮ.

ಯಾವುದೇ ಪದವಿ ಪಾಸಾದ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು. ಕಸ್ಟಮರ್ ಕೇರ್ ಎಕ್ಸಿಕ್ಯುಟಿವ್ ಅಧಿಕಾರಿ ಹುದ್ದೆಗಳಿಗೆ ಸಂದರ್ಶನ ನಡೆಸಲಾಗುವದು. ಕೆಲಸದ ಸ್ಥಳ ಬೆಂಗಳೂರು ಆಗಿದ್ದು, 2.90 ಲಕ್ಷ ರು. ದಿಂದ 3.50 ಲಕ್ಷ ರು. ವರೆಗೆ ವೇತನ ನೀಡಲಾಗುವುದು. ಜೊತೆಗೆ ಆಕರ್ಷಕ ಪ್ರೋತ್ಸಾಹಧನ, ಉಚಿತ ಆರೋಗ್ಯ ವಿಮೆ ಇರುತ್ತದೆ. 

RELATED ARTICLES  ಶಿಕ್ಷಕರಾಗಬಯಸುವವರಿಗೆ ಗುಡ್ ನ್ಯೂಸ್..!

ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ಅಂಕಪಟ್ಟಿ, ಆಧಾರ್ ಕಾರ್ಡ್, ಗುರುತು ಪತ್ರ, ಪಾನ್ ಕಾರ್ಡ್‍ಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು ಎಂದು ಕಾಲೇಜಿನ ಪ್ರಾಚಾರ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.