ಕುಮಟಾ : ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಹಾಗೂ ವಿಧಾತ್ರಿ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು ಕಾಲೇಜಿನ ವಿದ್ಯಾರ್ಥಿನಿ ಶ್ರಾವ್ಯಾ ಶ್ರೀಧರ ಭಟ್ಟ ಈಕೆಯು ದ್ವಿತೀಯ ಪಿ.ಯು.ಸಿಯಲ್ಲಿ ಈ ಹಿಂದೆ ರಾಜ್ಯಕ್ಕೆ ಏಳನೇ ರ್ಯಾಂಕ್ ಬರುವ ಮೂಲಕ ಸಾಧನೆ ಮಾಡಿದ್ದಳು. 

ಆದರೆ ಈಕೆ ಇಂಗ್ಲೀಷ್ ವಿಷಯದಲ್ಲಿ ತನಗೆ ಇನ್ನೂ ಹೆಚ್ಚಿನ ಅಂಕ ಬರಬೇಕೆಂಬ ಅಚಲ ವಿಶ್ವಾಸದಲ್ಲಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದಳು. ಶುಕ್ರವಾರ ಮರುಮೌಲ್ಯಮಾಪನದ ಅಂಕ ಪ್ರಕಟವಾಗಿದ್ದು, ಇಂಗ್ಲೀಷ್ ಭಾಷಾ ವಿಷಯದಲ್ಲಿ 2 ಅಂಕಗಳನ್ನು ಹೆಚ್ಚುವರಿಯಾಗಿ ಪಡೆಯುವುದರ ಮೂಲಕ ಈಕೆಯು ಕಾಲೇಜಿಗೆ, ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್ಯಾಂಕ್ ಪಡೆದು, ತನ್ನ ಸಾಧನೆಯನ್ನು ಹೆಚ್ಚಿಸಿಕೊಂಡಿದ್ದಾಳೆ.

RELATED ARTICLES  ಬಂದ್ ಆಗಲ್ಲ ಶಿರಸಿ ಕುಮಟಾ ರಸ್ತೆ : ಖಡಕ್ ವಾರ್ನ ನೀಡಿದ ಮಂಕಾಳ ವೈದ್ಯ.

ಈಕೆಯು ಭೌತಶಾಸ್ತ್ರದಲ್ಲಿ 97, ರಸಾಯನ ಶಾಸ್ತ್ರ 100, ಗಣಿತ 100, ಜೀವಶಾಸ್ತ್ರ 100, ಇಂಗ್ಲೀಷ್ 97 (95+2), ಸಂಸ್ಕೃತ 100 ಅಂಕಗಳೊಂದಿಗೆ ಒಟ್ಟೂ‌ 600 ಅಂಕಗಳಲ್ಲಿ 594 ಅಂಕ ಗಳಿಸಿ ವಿಜ್ಞಾನ ವಿಭಾಗದಲ್ಲಿ ಬಹುದೊಡ್ಡ ಸಾಧನೆ ಮಾಡಿದ್ದಾಳೆ. 

RELATED ARTICLES  ರೋಟರಿ ಪರಿವಾರದ ಡಾಕ್ಟರ್ ಹಾಗೂ ಸಿ.ಎ ಗಳಿಗೆ ವಿಧಾತ್ರಿ ಅಕಾಡೆಮಿಯಿಂದ ಸನ್ಮಾನ.

ಈ ಸಂದರ್ಭದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಶ್ರಾವ್ಯಾ ಭಟ್ಟ ಪರೀಕ್ಷೆಯ ಫಲಿತಾಂಶ ಪ್ರಕಟವಾದ ನಂತರದಲ್ಲಿ ನನಗೆ ಇನ್ನೂ ಹೆಚ್ಚಿನ ಅಂಕ ಬರಬೇಕಿತ್ತು ಆದರೆ ಅಂಕ ಕಡಿಮೆಯಾಗಿದೆ ಎಂಬ ಬಗ್ಗೆ ನೋವಿತ್ತು, ಇದೀಗ ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಬಂದಿರುವುದು ಸಂತಸ ತಂದಿದೆ ಎಂದರು.

ಈಕೆಯ ಸಾಧನೆಗೆ ಕುಟುಂಬ ವರ್ಗದವರು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದದವರು ಶುಭಾಶಯ ಕೋರಿದ್ದಾರೆ.