ಕುಮಟಾ : ಬಾಡ ಗ್ರಾಮದ ಮಾದರಿ ರಸ್ತೆಯಲ್ಲಿ ಗ್ರಾಮದೊಳಗೆ ನುಗ್ಗಿದ್ದ ಬಲಾಢ್ಯ ಚಿರತೆಯೊಂದು ಮೂವರ ಮೇಲೆ ದಾಳಿ ನಡೆಸಿ ನಿನ್ನೆ ರಾತ್ರಿಯಿಂದ ಮನೆ ಒಳಗೆ ಅವಿತುಕೊಂಡಿದ್ದು, ಕಾರ್ಯಾಚರಣೆ ಇನ್ನೂ ಮುಗಿಯದೇ ಮನೆಯೊಳಗೇ ಬಂಧಿಯಾಗಿದೆ.

ಮಾದರಿ ರಸ್ತೆಯಲ್ಲಿ ನಿನ್ನೆ ಸಂಜೆ ರಾಜಾರೋಷವಾಗಿ ಬಂದ ಚಿರತೆ ಮಹಾಬಲೇಶ್ವರ ನಾಯ್ಕ ಅವರ ಮನೆ ಒಳಗೆ ನುಗ್ಗಿ ಅವರ ಮೇಲೆ‌ ಹಲ್ಲೆ ಮಾಡಿತ್ತು. ಬಳಿಕ ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಬೋನಿಗೆ ಕೆಡವಲು ಅದೆಷ್ಟೇ ಪ್ರಯತ್ನ ಮಾಡಿದರು ಸಾಧ್ಯವಾಗಿಲ್ಲ. ನಿನ್ನೆ ರಾತ್ರಿಯಿಂದ ಚಿರತೆ ಮಹಾಬಲೇಶ್ವರ ಅವರ ಮನೆಯ ಕೋಣೆಯೊಂದರೊಳಗೆ ಸೇರಿಕೊಂಡಿದೆ.

RELATED ARTICLES  ದಿನಕರ ಶೆಟ್ಟಿ ಜನಪ್ರಿಯತೆ ಸಹಿಸದವರಿಂದ ಅಪಪ್ರಾಚಾರದ ಹುನ್ನಾರ : ಯೋಗೇಶ್ ಪಟಗಾರ.

ಇನ್ನೂ ಕೋಣೆಗೆ ಹೊರಗಡೆಯಿಂದ ಬೀಗ ಹಾಕಲಾಗಿದ್ದು, ಕೋಣೆಯೊಳಗೆ ಇರುವ ಚಿರತೆಯ ಚಲನವಲನ ಗಮನಿಸಲು ಮನೆಯ ಗೋಡೆಗೆ ರಂಧ್ರಕೊರೆಯಲಾಗಿದೆ. ಇದುವರೆಗೂ ಸಹ ಆ ಚಿರತೆ ಒಳಗಡೆಯಿಂದಲ್ಲೆ ಘರ್ಜನೆ ಮುಂದುವರೆಸಿದೆ. ಮಾದರಿ ರಸ್ತೆಯ ಸುತ್ತಮುತ್ತಲಿನ ಮನೆಯವರು ರಾತ್ರಿಯಿಂದ ಆತಂಕದಲ್ಲೇ ಕಾಲ‌‌ ಕಳೆಯುತ್ತಿದ್ದು, ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ

RELATED ARTICLES  ಬಸ್ ನಲ್ಲಿ ಯುವತಿಯ ಫೋಟೋ ತೆಗೆದಾತನಿಗೆ ಬಿತ್ತು ಧರ್ಮದೇಟು.

ಇನ್ನೂ ಚಿರತೆ ಸೆರೆ ಹಿಡಿಯಲು ಶಿವಮೊಗ್ಗದಿಂದ ಅರವಳಿಕೆ ತಜ್ಞರು ಬಾಡಕ್ಕೆ ಆಗಮಿಸುತ್ತಿದ್ದು, ಅವರು ಬಂದ ಬಳಿಕವೆ ಚಿರತೆ ಬೋನಿಗೆ ಬಿಳಬೇಕಿದೆ. ಸ್ಥಳದಲ್ಲೆ ಕುಮಟಾ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೆ ಬೀಡುಬಿಟ್ಟಿದ್ದಾರೆ.