ಕುಮಟಾ : ತನ್ನದೇ ಐತಿಹ್ಯ ಹೊಂದಿರುವ ಹಾಗೂ ಅತಿ ಪುರಾತನವಾದ ತಾಲೂಕಿನ ಊರಕೇರಿಯ ತಲಗೋಡಿನ ಶ್ರೀ ಜನಾರ್ದನ ದೇವಸ್ಥಾನದ ನೂತನ ಶಿಲಾದೇಗುಲದಲ್ಲಿ ಜನಾರ್ದನ ಸ್ವಾಮಿಯ ‘ಪ್ರತಿಷ್ಠಾ ಮಹೋತ್ಸವ ಹಾಗೂ ಗುರುಭಿಕ್ಷಾ ಸೇವೆ’ ಕಾರ್ಯಕ್ರಮವು ಏ.29 ರಿಂದ ಮೇ. ೩ ರ ವರೆಗೆ ನಡೆಯಲಿದೆ.

ಮೇ.೧ ರಂದು ಚೈತ್ರ ಕೃಷ್ಣ ಅಷ್ಟಮಿ ಬುಧವಾರ ಮಿಥುನಲಗ್ನ ಇಷ್ಟಾಂಶದಲ್ಲಿ ಶ್ರೀ ರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಹಾಗೂ ಮಾರ್ಗದರ್ಶನದಲ್ಲಿ ರತ್ನನ್ಯಾಸಪೂರ್ವಕವಾಗಿ ಶ್ರೀ ಜನಾರ್ದನ ಸ್ವಾಮಿಯ ಪ್ರತಿಷ್ಠಾ ಮಹೋತ್ಸವ ಸಂಪನ್ನಗೊಳ್ಳಲ್ಲಿದೆ. 

ಅಂತೆಯೇ ಮೇ.೩ ರಂದು ಶಂಕರಾಚಾರ್ಯ ಶ್ರೀ ಶ್ರೀ ಬ್ರಹ್ಮಾನಂದಸರಸ್ವತೀ ಮಹಾಸ್ವಾಮಿಗಳು ಶ್ರೀಲಕ್ಷ್ಮೀನೃಸಿಂಹಪೀಠ ಹರಕಡೆ, ಕುಮಟಾ ಇವರಿಂದ ಶ್ರೀ ದೇವರ ಶಿಖರಕಲಶಾಭಿಷೇಕ ನೆರವೇರಲಿದೆ. 

ಪ್ರತಿಷ್ಠಾ ಮಹೋತ್ಸವ ಹಾಗೂ ಗುರುಭಿಕ್ಷಾ ಸೇವೆಯ ಕಾರ್ಯಕ್ರಮದ ಅಂಗವಾಗಿ ಏ.೨೯ ಸೋಮವಾರ ದೇವತಾಪ್ರಾರ್ಥನೆ, ಬ್ರಹ್ಮಕೂರ್ಚಹವನ, ಮಹಾಸಂಕಲ್ಪ, ಗಣಪತಿಪೂಜೆ, ಪುಣ್ಯಾಹ, ದೇವನಾಂದಿ-ಸಮಾರಾಧನೆ, ಕೌತುಕಬಂಧನ, ಮಹಾಗಣಪತಿಹವನ, ಸುದರ್ಶನಹವನ, ಶ್ರೀಚಕ್ರಹವನ, ಆಲಯಪರಿಗ್ರಹ, ಮೃತ್ತಿಕಾಹರಣ, ಉದಕಶಾಂತಿ, ಪ್ರಾಸಾದಶುದ್ಧಿ, ರಾಕ್ಷಧ್ರಹವನ, ವಾಸ್ತುಶಾಂತಿ, ಬಾಲಾಲಯದಿಂದ ಶ್ರೀ ದೇವರ ನಿಷ್ಕ್ರಮಣ, ಖಲಾಧಿವಾಸ, ಬೀಜವಾಪನ ನಡೆಯಲಿದೆ.

RELATED ARTICLES  ಮಳೆಗೆ ಮನೆ ಕಳೆದುಕೊಂಡ ಕುಟುಂಬ

ಏ.೩೦ ಮಂಗಳವಾರ ಗಣಪತಿ ಪೂಜೆ, ಪುಣ್ಯಾಹ, ಪವಮಾನಶಾಂತಿ, ಬಿಂಬಶುದ್ಧಿಕಲಶಸ್ಥಾಪನೆ, ಬಿಂಬಶುದ್ಧಿ ಹಾಗೂ ಸಂಜೆ  ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಪುರಪ್ರವೇಶ -ಸ್ವಾಗತ ಧೂಳೀಪೂಜೆ, ಚಂದ್ರಮೌಳೀಶ್ವರ, ರಾಜರಾಜೇಶ್ವರೀ ಸಹಿತ ಶ್ರೀರಾಮ ದೇವರಪೂಜೆ, ಶಾಂತಿಪಾಠ, ಯಾಗಶಾಲಾಪ್ರವೇಶ, ಕುಂಡ-ಮಂಟಪಸಂಸ್ಕಾರ, ದಿಗ್‌ ಬಲಿ, ಕುಂಭೇಶಪೂಜೆ, ಅಗ್ನಿಜನನ, ಸಪ್ತಾಧಿವಾಸ, ಅಧಿವಾಸಹವನ, ಶಯ್ಯಾಕಲ್ಪನೆ ನಡೆಯಲಿದೆ.

ಮೇ ೧ ರಂದು ಗಣಪತಿಪೂಜೆ, ಮಣ್ಯಾಹ, ಸಪ್ತಾಧಿವಾಸಹವನ, ನವಗ್ರಹಶಾಂತಿ, ಪ್ರತಿಷ್ಠಾಹವನ, ಪೂರ್ವಾಹ್ನ 10-20ರ ಮಿಥುನಲಗ್ನದಲ್ಲಿ ರತ್ನನ್ಯಾಸಪೂರ್ವಕ ಶ್ರೀದೇವರ ಪ್ರತಿಷ್ಠೆ. ಜೀವಕಲಶಾಭಿಷೇಕ, ಪರಿವಾರಪ್ರತಿಷ್ಠೆ, ಶಿಖರಪ್ರತಿಷ್ಠೆ, ಧ್ವಜಪ್ರತಿಷ್ಠೆ, ವಾಹನಹೋಮ, ಅಸ್ತ್ರಹೋಮ, ಧ್ವಜಾರೋಹಣ, ಧ್ವಜಬಲಿ, ಕಲಾನ್ಯಾಸ ತತ್ತ್ವನ್ಯಾಸಹೋಮ, ಶಕ್ತಿಹವನ, ಪ್ರಾಣಪ್ರತಿಷ್ಠಾಹವನ, ಶ್ರೀಗಳಿಂದ ಆಶೀರ್ವಚನ ಸಂದೇಶ. ಸಂಜೆ – ಶಾಂತಿಪಾಠ, ನೇತ್ರೋನ್ಮಿಲನ, ನಿರೀಕ್ಷೆ, ಭೇರಿತಾಡನ, ಭೂತಬಲಿ, ರಾಜೋಪಚಾರ ಸೇವೆ ನಡೆಯಲಿದೆ.

RELATED ARTICLES  ಜೆ.ಇ.ಇ ಮೈನ್ಸ್ ಪೇಪರ್ -೨ ನಲ್ಲಿ ಸೋನಾಲಿ ಶೇಟ್ ಸಾಧನೆ.

ಮೇ. ೨ ರಂದು ಗಣಪತಿಪೂಜೆ, ಮಣ್ಯಾಹ, ಮಹಾಶಾಂತಿ, ಮಹೋಗ್ರದೋಷಪ್ರಾಯಶ್ಚಿತ್ತಹವನ, ಪಂಚಬ್ರಹ್ಮಹವನ, ಪರಿವಾರಹವನ, ಸೂಕ್ತಹವನ, ಧನ್ವಂತರಿಹವನ, ಶಾಂತಿಪಾಠ, ಬ್ರಹ್ಮಘಟಸ್ಥಾಪನೆ, ಬಲಿಉತ್ಸವ, ರಾಜೋಪಚಾರಸೇವೆ ನಡೆಯಲಿದೆ. ಮೇ.೩ ರಂದು ಶುಕ್ರವಾರ ಬೆಳಗ್ಗೆ ಗಣಪತಿಪೂಜೆ, ಪುಣ್ಯಾಹವಾಚನ, ಶಾಂತಿಪ್ರಾಯಶ್ಚಿತ್ತಹವನ, ಅವಶಿಷ್ಟಹವನ, ಮೂಲಮಂತ್ರಹವನ, ಮಹಾಪೂರ್ಣಾಹುತಿ, ಧ್ವಜಅವರೋಹಣ, ಬ್ರಹ್ಮಕಲಶಾಭಿಷೇಕ, ಶ್ರೀ ದೇವರಿಗೆ ಪೂರ್ಣಕಲಾಸಾನ್ನಿಧ್ಯ, ಬಲಿಉತ್ಸವ, ಮಹಾಪೂಜೆ, ಅಂಕುರಾರ್ಪಣ, ಪ್ರಸಾದವಿತರಣೆ, ತಾಂತ್ರಿಕರಿಂದ ಆಶೀರ್ಗ್ರಹಣ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಆಸ್ತಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆಯಬೇಕೆಂದು ಶ್ರೀ ಜನಾರ್ಧನ ಪ್ರತಿಷ್ಠಾ ಸಮಿತಿ ಸದಸ್ಯರು ವಿನಂತಿಸಿಕೊಂಡಿದ್ದಾರೆ.