ಭಟ್ಕಳ: ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವೂ ತಾಲೂಕಿನ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ಸಭಾಭವನ ಆಸರಕೇರಿಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೇ ಕಾರ್ಮಿಕ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ರೈತರು ಹೇಗೆ ಅವಶ್ಯಕವೋ ಅದೇ ರೀತಿ ಕೂಲಿ ಕಾರ್ಮಿಕರು ಸಹ ಮುಖ್ಯ. ರೈತ ದೇಶದ ಬೆನ್ನೆಲುಬಾದರೆ ಕಾರ್ಮಿಕ ದೇಶದ ಕೈಕಾಲು ಇದ್ದಂತೆಯೇ. ಈ ನಿಟ್ಟನಲ್ಲಿ ಭಟ್ಕಳದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಉತ್ತಮ ಕಾರ್ಯ ಮಾಡುತ್ತಿದ್ದು, ಅವರ ಕಾರ್ಯವನ್ನು ಮೆಚ್ಚಬೇಕಾಗಿದೆ. ಭಟ್ಕಳ ಭಾಗದಲ್ಲಿ ಸಂಘದ ಬಗೆಗಿನ ಮಾಹಿತಿಯ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಮನೆ ಮನೆ ತೆರಳಿ ಮಾಹಿತಿ ನೀಡುವಂತಹ ಕಾರ್ಯ ಆಗಬೇಕಾಗಿದೆ. ದುಡಿಯುವ ಎಲ್ಲಾ ಕಾರ್ಮಿಕರು ಅವರ ಭವಿಷ್ಯಕ್ಕಾಗಿ ಕಾರ್ಮಿಕರ ಸಂಘದಿಂದ ಕಾರ್ಡ ಮಾಡಿಸಿಕೊಳ್ಳಬೇಕು. ಇನ್ನು ಸಂಘಕ್ಕೆ ಬೇಕಾದ ಉಪಯೋಗವನ್ನು ರಾಜಕಾರಣಗಳಿಂದ ಮಾಡಿಕೊಳ್ಳಬೇಕು. ಯಾಕೆಂದರೆ ನಮ್ಮಿಂದ ಆಯ್ಕೆಯಾದವರು ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಮುಖ್ಯವಾಗಿ ಕಾರ್ಮಿಕರು ಯಾವುದೇ ಜಾತಿ ಧರ್ಮ ಪಕ್ಷ ಬೇದವನ್ನು ಇಟ್ಟುಕೊಳ್ಳಬಾರದು. ಸಂಘದ ಪರವಾದ ಯಾವುದೇ ಹೋರಾಟಕ್ಕೂ ನಾನು ಸಿದ್ಧ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಹುಬ್ಬಳ್ಳಿ ಧಾರವಾಡ ವಿಭಾಗದ ಅಸಿಸ್ಟೆಂಟ್ ಲೇಬರ್ ಕಮೀಷನರ್ ಶ್ರೀಮತಿ ಮೀನಾ ಪಾಟೀಲ್ “ ರೈತ ಎಲ್ಲರಿಗೂ ಅನ್ನ ನೀಡುವುದರ ಜೊತೆಗೆ ಕೆಲವು ಕಚ್ಚಾ ವಸ್ತುಗಳನ್ನು ಒದಗಿಸುತ್ತಾನೆ. ಅದೇ ಕಾರ್ಮಿಕರು ಸಿಕ್ಕ ಕಚ್ಚಾ ವಸ್ತುಗಳನ್ನು ಸಿದ್ದ ವಸ್ತುಗಳನ್ನಾಗಿ ಮಾರ್ಪಡಿಸಿ ಎಲ್ಲರೂ ನಾಗರೀಕ ಜೀವನ ನಡೆಸುವಂತಹ ಜವಾಬ್ದಾರಿಯುತ ಕಾರ್ಯ ಮಾಡುತ್ತಾರೆ. ಸಮಾಜದಲ್ಲಿ ಎಲ್ಲರು ಉಪಯೋಗಿಸುವ ವಸ್ತುವನ್ನು ಕಾರ್ಮಿಕರು ತಮ್ಮ ಶ್ರಮದಿಂದ ತಯಾರಿಸದ್ದಾಗಿದೆ. ಇನ್ನು ಕೇವಲ 100 ರಲ್ಲಿ 8 ಶೇಕಡಾ ಮಾತ್ರ ಸಂಘಟನೆ ಕಾರ್ಮಿಕರಾಗಿದ್ದು, ಉಳಿದ 96ರಷ್ಟು ಅಸಂಘಟಿತ ಕಾರ್ಮಿಕರಾಗಿದ್ದಾರೆ. ಕಲಿತ ಅಲ್ಪ ಸ್ವಲ್ಪ ವಿದ್ಯೆಯಲ್ಲಿಯೇ ಸಮಾಜ ಕಟ್ಟುವ ಕಾರ್ಯ ಮಾಡುತ್ತಾರೆ. ಆದರೆ ಕಾರ್ಮಿಕರ ಮಕ್ಕಳು ಕಾರ್ಮಿಕರಾಗದೇ ವಿದ್ಯಾವಂತರಗಬೇಕು ಎನ್ನುವ ಉದ್ದೇಶ ಇಲಾಖೆಯದ್ದಾಗಿದೆ. ಮುಂದಿನ ದಿನಗಳಲ್ಲಿ ಕಾರ್ಮಿಕರ ಅಭಿವೃದ್ಧಿಗೆ ಸಹಾಯಕವಾಗುವ ರೀತಿಯಲ್ಲಿ ಇಲಾಖೆಯಿಂದ ಬೇಕಾದ ಯಾವುದೇ ಸಲಹೆ, ಸೂಚನೆ ಹಾಗೂ ಉಪಯೋಗಗಳಿಗೆ ಇಲಾಕೆ ಹಾಗೂ ಅಧಿಕಾರಿಗಳು ಸಿದ್ದರಿದ್ದೇವೆಂದು ಭರವಸೆಯನ್ನು ನೀಡಿದರು.
ಇದೇ ಸಂಧರ್ಭದಲ್ಲಿ ಇನ್ನೋರ್ವ ಅತಿಥಿ ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ “ ಭಟ್ಕಳ ಕಟ್ಟಡ ಕೂಲಿ ಕಾರ್ಮಿಕರ ಸಂಘದವೂ ತಮ್ಮ ಸದಸ್ಯರ ಸಮಸ್ಯೆ ತೊಂದರೆಗೆ ಸ್ಪಂದಿಸುವ ಕಾರ್ಯದ ಜೊತೆಗೆ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಬೆವರಿನ ಬೆಲೆ ಸರ್ಕಾರ ಅರಿತು ಅವರ ಅನೂಕೂಲಕ್ಕಾಗಿ ಆಲೋಚಿಸಬೇಕಾಗಿದೆ. ಇಂದು ಕಾರ್ಯಕ್ರಮದಲ್ಲಿಯೂ ಸಮಾಜದ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸಿರುವುದ ಕಾರ್ಮಿಕರು ಸಮಾಜದ ಮೇಲಿಟ್ಟ ಗಮನ ಅರ್ಥವಾಗುತ್ತದೆ.” ಎಂದರು.
ಕಳೆದ ದಿನಗಳ ಹಿಂದೆ ಕಟ್ಟಡ ಕೆಲಸ ಮಾಡುತ್ತಿದ್ದ ವೇಳೆ ಕಟ್ಟಡ ಕುಸಿದು ನೆಲಕ್ಕೆ ಬಿದ್ದು ಜೀವ ಕಳೆದುಕೊಂಡ ಕೋಟಖಂಡ ಗ್ರಾಮದ ಲೋಕೇಶ ಮಾಸ್ತಿ ಗೊಂಡ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನಾಚರಣೆ ಸಲ್ಲಿಸಲಾಯಿತು. ಅದೇ ರೀತಿ ಮೃತ ಕಾರ್ಮಿಕನ ಕುಟುಂಬಕ್ಕೆ ಅನೂಕೂಲವಾಗುವ ದೃಷ್ಟಿಯಿಂದ ಕಾರ್ಯಕ್ರಮದ ವೇದಿಕೆಯ ಕೆಳಗೆ ಸಹಾಯಧನ ನಿಧಿಯನ್ನು ಇಡಲಾಗಿದ್ದು, ಕಾರ್ಯಕ್ರಮಕ್ಕೆ ಬಂದಂತಹ ಜನರು ತಮ್ಮ ಕೈಲಾದಷ್ಟು ಸಹಾಯ ಮಾಡಿದರು. ಇದೇ ಸಂಧರ್ಭಧಲ್ಲಿ ಪೌರ ಕಾರ್ಮಿಕ ರಾಜು ಅಬ್ಬು, ರಾಬಿತಾ ಸೋಸೈಟಿಯ ಅಂಬುಲೆನ್ಸ ಚಾಲಕ ಖಾಜಾ ಕುಲವಾಡಿ ಹಾಗೂ ದೇಹದಾನಿ ಮಾಡಿದ ದಂಪತಿಗಳಾದ ರಾಮ ಮಂಜು ನಾಯ್ಕ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂಧರ್ಭದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೇ ಕಾರ್ಮಿಕ ಒಕ್ಕೂಟ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ, ಹುಬ್ಬಳ್ಳಿ ಧಾರವಾಡ ವಿಭಾಗದ ಅಸಿಸ್ಟೆಂಟ್ ಲೇಬರ್ ಕಮೀಷನರ್ ಶ್ರೀಮತಿ ಮೀನಾ ಪಾಟೀಲ್, ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ, ಭಟ್ಕಳ ವಕೀಲ ಮಂಜುನಾಥ ಗೊಂಡ ಅವರಿಗೂ ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಭಟ್ಕಳ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಶ್ರೀಧರ ಮಂಜುನಾಥ ನಾಯ್ಕ, ಭಟ್ಕಳ ನಾಮಧಾರಿ ಸಮಾಜದ ಅಧ್ಯಕ್ಷ ಎಮ್.ಆರ್.ನಾಯ್ಕ, ಜಿ.ವಿ.ಎಸ್.ಎಸ್. ಸಂಘದ ಜಾಲಿಯ ಸಿ.ಇ.ಓ. ಶಾಂತಾರಾಮ ನಾಯ್ಕ, ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಡಾ.ಇ.ಎ.ಇಸ್ಮಾಯಿಲ್ ಪಾರುಜೀ, ಪುರಸಭೆ ಸದಸ್ಯರು ಹಾಗೂ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಭಟ್ಕಳ ಪೇಂಟಿಂಗ್ ಸಂಘದ ಅಧ್ಯಕ್ಷ ನಾಗರಾಜ ತಿಮ್ಮಯ್ಯ ನಾಯ್ಕ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.