ಹೊನ್ನಾವರ : ವಿಶ್ವಾಸಮಾನ್ಯ ಸೇವೆ ಅನನ್ಯ ಎಂಬ ನುಡಿಯೊಂದಿಗೆ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನೀಚರ್ಸ್ ಉತ್ಪನ್ನಗಳ ಮಾರಾಟ ಹಾದಿಯಲ್ಲಿ ಉತ್ಕೃಷ್ಟ ಸೇವೆಗಳ ಮೂಲಕ ಹಾಗೂ ಗ್ರಾಹಕರಿಗೆ ಆಕರ್ಷಕ ಬೆಲೆಗಳ ಮೂಲಕ ಜಿಲ್ಲೆಯಲ್ಲಿಯೇ ಮನೆಮಾತಾಗಿರುವ ತರಂಗ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಹೊನ್ನಾವರದಲ್ಲಿ ನೂತನ -ಸುಸಜ್ಜಿತ – ವಿಶಾಲ ಕಟ್ಟಡದಲ್ಲಿ ನೂತನ ಶೋರೂಮ್ ಪ್ರಾರಂಭಿಸುತ್ತಿದ್ದು, ಹೊನ್ನಾವರ ಪಟ್ಟಣದಲ್ಲಿ, ವಿನಾಯಕ ಛೇಂಬರ್ಸ್, ಬ್ಯಾಂಕ್ ರಸ್ತೆ, ಮಲ್ಲಿಕಾರ್ಜುನ ಸಿಲ್ಕ್ಸ್ ಹತ್ತಿರದಲ್ಲಿ ನೂತನ ಶೋರೂಮ್ ನಾಳೆ ಮೇ.೯ ರಂದು ಶುಭಾರಂಭಗೊಳ್ಳಲಿದೆ.
ನಿವೃತ್ತ ಇಂಜನಿಯರ್ ಶ್ರೀ ಕಾಮೇಶ್ವರ ಟಿ. ಭಟ್ಟ ತುಂಬ್ಲೆಮಠ ಮಳಿಗೆ ಉದ್ಘಾಟಿಸುವರು. ಉದ್ಯಮಿಗಳಾದ ಜಗದೀಶ ಟಿ. ಪೈ ಕೃಷ್ಣಮೂರ್ತಿ ಭಟ್ಟ ಶಿವಾನಿ, ರಾಜೇಶ ಸಾಳೆಹಿತ್ತಲ, ಮಂಜುನಾಥ ಶೆಟ್ ಅತಿಥಿಗಳಾಗಿ ಇರುವರು. ಎಲ್ಲಾ ಗ್ರಾಹಕರನ್ನು ಹಾಗೂ ಸಾರ್ವಜನಿಕರನ್ನು ತರಂಗ ಎಲೆಕ್ಟ್ರಾನಿಕ್ಸ್ ನ ಮಾಲಕರಾದ ಶ್ರೀಕಾಂತ ಭಟ್ಟ, ವಸಂತ ಭಟ್ಟ, ಜಯಂತ ಭಟ್ಟ ತುಂಬ್ಲೆಮಠ ಕುಟುಂಬ ಮತ್ತು ಸಿಬ್ಬಂದಿಗಳು ಹಾರ್ದಿಕವಾಗಿ ಸ್ವಾಗತಿಸಿದ್ದಾರೆ.
ಪ್ರತಿಷ್ಠಿತ ತರಂಗ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್ ಶುಭಾರಂಭದ ಹಿನ್ನೆಲೆಯಲ್ಲಿ 45 % ವರೆಗೆ ವಿನಾಯಿತಿ, ಪ್ರತೀ ಖರೀದಿಗೆ ಉಚಿತ ಗಿಫ್ಟ್ ಗಳು, ಉಚಿತ ಹೋಮ್ ಡೆಲಿವರಿ, ಮೆಗಾ ಎಕ್ಸ್ಚೇಂಜ್ ಆಫರ್ ಗಳನ್ನು ನೀಡಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಲು ಸಂಸ್ಥಾಪಕರು ವಿನಂತಿಸಿಕೊಂಡಿದ್ದಾರೆ.
ಶ್ರೀ ಕೆ.ಟಿ ಭಟ್ಟರಿಂದ 1968 ರಲ್ಲಿ ಪ್ರಾರಂಭವಾದ ಶ್ರೀ ಗಜಾನನ ರೇಡಿಯೋ ಮತ್ತು ಎಲೆಕ್ಟ್ರಿಕಲ್ ನಿಂದ ನಂತರದಲ್ಲಿ ಹೆಮ್ಮರವಾಗಿ ಬೆಳೆಯುತ್ತಾ ಹೊನ್ನಾವರ ಶಿರಸಿಯಲ್ಲಿ ಶಾಖೆಗಳನ್ನೂ ಪ್ರಾರಂಭಿಸಿ ಮುನ್ನಡೆಯುತ್ತಿದೆ.
1982ರಲ್ಲಿ ಮೊದಲ ಬಾರಿ ಕುಮಟಾ ಪಟ್ಟಣಕ್ಕೆ ತರಂಗ ಇಲೆಕ್ಟ್ರಾನಿಕ್ಸ್ ಟಿ.ವಿ ಮಾರಾಟದ ಮೂಲಕ ಗ್ರಾಹಕರ ಗಮನ ಸೆಳೆದ ಶ್ರೀಕಾಂತ ಭಟ್ಟ ಮತ್ತು ವಸಂತ್ ಭಟ್ಟ ಸಹೋದರರು ಇಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಅಣಿಯಾದರು. ವಸ್ತುಗಳ ಬೆಲೆ, ಗುಣಮಟ್ಟದಲ್ಲಿ ಇನ್ನೊಂದೆಡೆ ಗ್ರಾಹಕರು ವಿಚಾರಿಸದೇ ಸಂತೃಪ್ತಪಡುವಂತೆ ಮಾಡಿ ತನ್ನ ವ್ಯಾಪಾರ, ವ್ಯವಹಾರವನ್ನು ವಿಸ್ತರಿಸಿಕೊಂಡರು.
ಸದ್ಯ ಉನ್ನತ ಶ್ರೇಣಿಯ ಪ್ರಖ್ಯಾತ ಬ್ರ್ಯಾಂಡ್ ಹೊಂದಿರುವ ಸೋನಿ, ಸ್ಯಾಮ್ಸಂಗ್, ಎಲ್.ಜಿ, ಸ್ಯಾನ್ಸುಯಿ, ವಿಡಿಯೋಕಾನ್, ಒನಿಡಾ, ವರ್ಲಪೂಲ್ ಮತ್ತು ಗೋಡ್ರೇಜ್‌ನಂತಹ ಉತ್ಪನ್ನಗಳ ಮಾರಾಟ ಹಾಗೂ ವಿತರಣೆಯಲ್ಲಿ ಹಿಡಿತ ಸಾಧಿಸಿರುವ ತರಂಗ ಇಲೆಕ್ಟ್ರಾನಿಕ್ಸ್ ಬಾಷ್, ಬಟರ್‌ಫ್ಲೈ, ವಿ-ಗಾರ್ಡ್ ಕಂಪನಿಗಳ ಎ.ಸಿ, ಏರ್ ಕೂಲರ್ ಅಲ್ಲದೇ ಹಲವಾರು ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿಯಲ್ಲಿ ಕುಮಟಾ ಅಲ್ಲದೇ ವಿನೂತನವಾಗಿ ಆರಂಭಗೊಂಡಿರುವ ಶಿರಸಿ ಹಾಗೂ ಹೊನ್ನಾವರದಲ್ಲಿಯೂ ತನ್ನ ವ್ಯಾಪಾರ, ವಹಿವಾಟ ವಿಸ್ತರಿಸಿಕೊಂಡಿದೆ. ಇದೀಗ ಹೊನ್ನಾವರದಲ್ಲಿ ಬೃಹತ್ ಶೋರೂಂಮ್ ಉದ್ಘಾಟನೆಯಾಗುತ್ತಿದೆ.
ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಕಾಲಕಾಲಕ್ಕೆ ಹಳೇ ಇಲೆಕ್ಟ್ರಾನಿಕ್ಸ್ ವಸ್ತುಗಳ ಬದಲಿಗೆ ಹೊಸ ವಸ್ತುಗಳನ್ನು ನೀಡುವ ಯೋಜನೆಯ ಮೂಲಕ ಗ್ರಾಹಕರನ್ನು ಶ್ರೀಕಾಂತ್ ಭಟ್ಟ ಹಾಗೂ ವಸಂತ್ ಭಟ್ಟ ಹಾಗೂ ಜಯಂತ ಭಟ್ಟ ಸಂತೃಪ್ತ ಸೇವೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಷ್ಟೇ ಅಲ್ಲದೆ ಬಂದಿರುವ ಗ್ರಾಹಕರನ್ನು ಪ್ರೀತಿಯಿಂದ ಮಾತನಾಡಿಸಿ ಅವರನ್ನು ಬೀಳ್ಕೊಡುವ ವರೆಗಿನ ಪ್ರೀತಿಗೆ ಸಂಸ್ಥೆ ಹೆಸರಾಗಿದೆ.