ಕುಮಟಾ : ಶ್ರೀ ರಾಮಚಂದ್ರಾಪುರ ಮಠದ ಕುಮಟಾ ಮಂಡಲದ ಎಲ್ಲಾ ವಲಯಗಳ ಸುಮಾರು 30 ಜನ ವಿದ್ಯಾರ್ಥಿಗಳಿಗೆ ವಿದ್ಯಾಸಹಾಯಧನದ ಚೆಕ್ ನ್ನು ಹಂದಿಗೋಣದ ಗಣಪತಿ ದೇವಸ್ಥಾನದಲ್ಲಿ ಯಶಸ್ವಿಯಾಗಿ ವಿತರಣೆಯನ್ನು ಮಾಡಲಾಯಿತು.

ಶಂಖನಾದ, ಗುರುವಂದನೆ, ಫಲಸಮರ್ಪಣೆ, ದೀಪ ಬೆಳಗಿಸಿ, ನಿರ್ವಘ್ನದಾಯಕನಾದ ಮಹಾಗಣಪತಿಯ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ದೇವಸ್ಥಾನದ ಮೊಕ್ತೇಸರರಾದ ಶ್ರೀ G.P ಭಾಗ್ವತ ಇವರು ಸ್ವಾಗತವನ್ನು ಮಾಡಿದರು. ಕುಮಟಾ ಮಂಡಲದ ವಿದ್ಯಾ ಪ್ರಧಾನರಾದ ಗೋಪಾಲಕೃಷ್ಣ ಹೆಗಡೆ ಇವರು ಪ್ರಸ್ಥಾವನೆ & ಅಭ್ಯಾಗತರ ಪರಿಚಯವನ್ನು ಮಾಡಿದರು.

RELATED ARTICLES  ನಾವಿದ್ದೇವೆ ಬಳಗದಿಂದ ಹನುಮನಿಗೆ ಕಣಜ ಸೇವೆ ಸಮರ್ಪಣೆ!

ಮಹಾಮಂಡಲದ ವಿದ್ಯಾ ಪ್ರಧಾನರಾದ ಶ್ರೀ S.G. ಭಟ್ಟ ಕಬ್ಬಿನಗದ್ದೆ ಇವರು ವಿದ್ಯಾರ್ಥಿಗಳ ಕುರಿತು ಹಿತವಚನವನ್ನು ನೀಡಿದರು. ಮಹಾಮಂಡಲದ ಕೃಷಿ ಪ್ರಧಾನರಾದ ಶ್ರೀ ಭಾಸ್ಕರ ಹೆಗಡೆ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕುಮಟಾ ಮಂಡಲದ ಸಂಸ್ಕಾರ ವಿಭಾಗದ ಡಾ//G.Lಹೆಗಡೆ ಇವರು ಸಭೆಯನ್ನು ಉದ್ದೇಶಿಸಿ ಸಂಸ್ಕಾರದ ಬಗ್ಗೆ&ಗುರುಪೀಠ ಹಾಗೂ ಮಠದ ಕಾರ್ಯಚಟುವಟಿಕೆಯ ಕುರಿತು ಮಾತನಾಡಿದರು.

RELATED ARTICLES  ತಾಲ್ಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜು ಚಾಂಪಿಯನ್.

ಕುಮಟಾ ಮಂಡಲದ ಅಧ್ಯಕ್ಷರಾದ ಮಂಜುನಾಥ ಭಟ್ಟ ಸುವರ್ಣಗದ್ದೆ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ನ್ನು ವಿತರಣೆಯನ್ನು ಮಾಡಲಾಯಿತು. ಗುರು ಮಠದ ಗುರಿಕ್ಕಾರರು, ಪದಾಧಿಕಾರಿಗಳು,ಊರ ಜನರು ಉಪಸ್ಥಿತರಿದ್ದರು. ನಂತರ ದೇವಸ್ಥಾನದ ಆಡಳಿತವರ್ಗಕ್ಕೆ, ಸಭಾತಿಥಿಗಳಿಗೆ, ವಿದ್ಯಾರ್ಥಿಗಳಿಗೆ, ಪಾಲಕರಿಗೆ, , ಹಂದಿಗೋಣದ ಹಾಗೂ ಪರ ಊರಿನಿಂದ ಬಂದಂತಹ ಗುರುಭಕ್ತರಿಗೆ ವಂದನೆಯನ್ನು ಮಾಡಲಾಯಿತು.