ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ಗೋಳಿ, ಶಿರಸಿ ಇಲ್ಲಿಯ ವಿದ್ಯಾರ್ಥಿಗಳು 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ, ತೃತೀಯ ಸ್ಥಾನ ಹಾಗೂ ಏಳನೇ ಸ್ಥಾನವನ್ನು ಕ್ರಮವಾಗಿ ಗಳಿಸಿ ರಾಜ್ಯಮಟ್ಟದಲ್ಲಿ ಸಾಧನೆಯನ್ನು ಮಾಡಿದ್ದಾರೆ.
625ಕ್ಕೆ 624 ಅಂಕಗಳನ್ನು ಗಳಿಸಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಕುಮಾರಿ ಚಿನ್ಮಯಿ ಶ್ರೀಪಾದ ಹೆಗಡೆ ದೊಡ್ಮನೆ ಇವಳು ಪಡೆದುಕೊಂಡಿದ್ದಾಳೆ. 625ಕ್ಕೆ 623 ಅಂಕಗಳನ್ನು ಕುಮಾರಿ ತೃಪ್ತಿ ರಾಮಚಂದ್ರ ಗೌಡ ಮಳಲಿ ಇವಳು ರಾಜ್ಯಕ್ಕೆ ತೃತೀಯ ಸ್ಥಾನವನ್ನು ಹಾಗೂ 625 ಕ್ಕೆ 619 ಅಂಕಗಳನ್ನು ಕುಮಾರ್ ಚೈತನ್ಯ ಗಣಪತಿ ಹೆಗಡೆ ಹೊಸ್ಮನೆ ಇವನು ಗಳಿಸಿ ರಾಜ್ಯಕ್ಕೆ 7ನೇ ಸ್ಥಾನವನ್ನು ಪಡೆದಿರುತ್ತಾನೆ. ಪರೀಕ್ಷೆಗೆ ಕುಳಿತ 32 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣ ಹೊಂದಿ ಶಾಲೆಯ ಫಲಿತಾಂಶ 87.50% ಆಗಿರುತ್ತದೆ. ಗುಣಾತ್ಮಕ ಫಲಿತಾಂಶದಲ್ಲಿ 79.82% ಅಂಕ ಗಳಿಸಿ ಎ ಗ್ರೇಡ್ ಸಾಧನೆ ಮಾಡಿರುತ್ತದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶ್ರೀ ಸಿದ್ಧಿವಿನಾಯಕ ವಿದ್ಯಾ ಪ್ರಸಾರ ಸಮಿತಿಯ ಅಧ್ಯಕ್ಷರಾದ ಶ್ರೀ ಎಂಎಲ್ಎ ಹೆಗಡೆ ಹಲಸಿಗೆ, ಉಪಾಧ್ಯಕ್ಷರಾದ ಶ್ರೀ ದಿವಾಕರ್ ಹೆಗಡೆ ಟೊಣ್ಣೇಮನೆ, ಶ್ರೀಮತಿ ಮಹಾಲಕ್ಷ್ಮಿ ಗೌಡ ಮಳಲಿ ಹಾಗೂ ಎಲ್ಲ ಸದಸ್ಯರುಗಳು, ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀ ನಾರಾಯಣ ದೈಮನೆ, ಹಾಗೂ ಎಲ್ಲ ಶಿಕ್ಷಕ ಶಿಕ್ಷಕ ತರ ಸಿಬ್ಬಂದಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.