ಕಾರವಾರ :ಸ್ವಚ್ಚತೆಯಲ್ಲಿ ದಾಖಲೆಯ ಸೇವೆ ಸಲ್ಲಿಸಿದ ಕಾರವಾರದ ಪಹರೆ ವೇದಿಕೆಗೆ ರಾಜ್ಯಮಟ್ಟದ ಮುರುಘಾ ದಸರಾ ಪ್ರಶಸ್ತಿ ಹಾಗೂ ಸನ್ಮಾನ ದೊರೆತಿದೆ.

ಚಿತ್ರದುರ್ಗದ ಮುರುಘಾ ಮಠ ಪ್ರತಿ ವರ್ಷ ಸಾಮಾಜಿಕ ಸೇವೆಗೆ ನೀಡುವ ಮುರುಘಾ ದಸರಾ ಪ್ರಶಸ್ತಿಯನ್ನ ಕಳೆದ ಮೂರು ವರ್ಷದಿಂದ ಸ್ವಚ್ಚತಾ ಕಾರ್ಯ ಮಾಡುತ್ತಾ ಬಂದಿರುವ ಪಹರೆ ವೇದಿಕೆಗೆ ನೀಡಲಾಯಿತು.

ಮಠದ ಅನುಭವ ಮಂಠಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ಪ್ರಶಸ್ತಿಯನ್ನ ಮುರುಘಾ ಮಠದ ಮುರುಘಶ್ರೀ ಹಾಗೂ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನೀಡಲಾಯಿತು.

RELATED ARTICLES  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಟಿಕೇಟ್ ಕೇಳಲು ಎಲ್ಲರೂ ಸ್ವತಂತ್ರರು : ಮಾಜಿ ಶಾಸಕಿ ಶಾರದಾ ಶೆಟ್ಟಿ

ಚಿತ್ರದುರ್ಗದ ಮುರುಘಾ ಮಠ ಕರ್ನಾಟಕದಲ್ಲಿ ಅತಿದೊಡ್ಡ ಮಠಗಳಲ್ಲಿ ಒಂದಾಗಿದ್ದು ಕರ್ನಾಟಕದಾದ್ಯಂತ ಹೀಗೆ ಸೇವಾ ವಲಯದಲ್ಲಿ ತೊಡಗಿಸಿಕೊಂಡ ಸಂಘ ಸಂಸ್ಥೆ, ಹಾಗೂ ವ್ಯಕ್ತಿಗಳನ್ನ ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸುವ ಪರಂಪರೆಯನ್ನ ನಡೆಸಿಕೊಂಡು ಬಂದಿದೆ.

ಸತತವಾಗಿ ಮೂರು ವರ್ಷಗಳಿಂದ ಕಾರವಾರ ನಗರದ ವಿವಿಧ ಭಾಗಗಳಲ್ಲಿ ಪ್ರತಿವಾರ ಸ್ವಚ್ಚತೆ ನಡೆಸಿಕೊಂಡು ಬಂದಿರುವ ಪಹರೆ ವೇದಿಕೆ ನಗರದ ಸಾರ್ವಜನಿಕರಲ್ಲಿ ಸ್ವಚ್ಚತೆಯ ಪ್ರಜ್ಞೆ ಮೂಡಿಸಲು ಸಹಕಾರಿಯಾಗಿದೆ. ಅಷ್ಟೇ ಅಲ್ಲದೇ ರಾಜ್ಯ ಮಟ್ಟದಲ್ಲಿ ಸಹ ತನ್ನ ಕಾರ್ಯದಿಂದ ಹೆಸರನ್ನ ಪಡೆದಿದೆ.

RELATED ARTICLES  ಸಾಧನೆ ತೋರಿದ ರವಿ ಹರಿಕಾಂತ

ಪಹರೆ ವೇದಿಕೆಯಂತಹ ಕಾಯಕ ಯೋಗ ಅಳವಡಿಸಿಕೊಂಡು ಬಂದಿರುವ ಸಂಘ ಸಂಸ್ಥೆ ಹೆಚ್ಚಾಗಬೇಕು, ಮತ್ತು ಪಹರೆಯ ಸೇವೆ ಶ್ರೀ ಮಠಕ್ಕೆ ಆನಂದ ತಂದಿದೆ ಎಂದು ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿದ ಮುರುಘ ಶ್ರೀಗಳು ಹರಸಿದರು.

ಪಹರೆ ವೇದಿಕೆಯ ಅಧ್ಯಕ್ಷ ನಾಗರಾಜ ನಾಯಕ ಈ ಪ್ರಶಸ್ತಿ ಸ್ವೀಕರಿಸಿದ್ದು ಈ ಸಂದರ್ಭದಲ್ಲಿ ವೇದಿಕೆ ಮೇಲೆ ಹಲವು ಧಾರ್ಮಿಕ ಗುರುಗಳು ಉಪಸ್ಥಿತರಿದ್ದರು.