ಗ್ರಾಹಕರಿಗೆ ಅನನ್ಯವಾದ ಸೇವೆಯಿಂದ ಎಲ್ಲೆಡೆ ವಿಶ್ವಾಸಮಾನ್ಯತೆ ಗಳಿಸಿರುವ ಜಿಲ್ಲೆಯ ಗ್ರಹೋಪಕರಣ ಹಾಗೂ ಪೀಠೋಪಕರಣಗಳ ಬೃಹತ್ ಮಳಿಗೆಯಾಗಿರುವ ಇಲ್ಲಿನ ತರಂಗ ಇಲೆಕ್ಟ್ರಾನಿಕ್ಸ ಹಾಗೂ ಫರ್ನಿಚರ್ ಸಂಸ್ಥೆಯ ಹೊನ್ನಾವರದ ಶಾಖಾ ಮಳಿಗೆಯು ನೂತನ ವಿಶಾಲ, ಸುಸಜ್ಜಿತ ಮಳಿಗೆಗೆ ಗುರುವಾರ ವಿಧ್ಯುಕ್ತವಾಗಿ ಸ್ಥಳಾಂತರಗೊಂಡಿತು.
ಹೊನ್ನಾವರ ಪಟ್ಟಣದ ಬ್ಯಾಂಕ್‌ರಸ್ತೆಯ ವಿನಾಯಕ ಛೇಂಬರ್ಸ ಕಟ್ಟಡದಲ್ಲಿ ತರಂಗ ಇಲೆಕ್ಟ್ರಾನಿಕ್ಸ್ ಬೃಹತ್ ಶೋರೂಂ ಶುಭಾರಂಭಗೊಂಡಿದ್ದು, ಬೆಂಗಳೂರಿನಲ್ಲಿರುವ ನಿವೃತ್ತ ಇಂಜಿನಿಯರ್ ಕಾಮೇಶ್ವರ ಟಿ. ಭಟ್ಟ ತುಂಬ್ಲೇಮಠ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿ, ಇಷ್ಟು ವರ್ಷಗಳ ಕಾಲ ತರಂಗ ಇಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ಅತ್ಯಂತ ಉತ್ತಮವಾಗಿ ನಡೆಸಿಕೊಂಡು ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ಒದಗಿಸಿದಂತೆಯೇ ಮುಂಬರುವ ದಿನಗಳಲ್ಲಿಯೂ ಅದೇ ರೀತಿಯ ಸೇವೆ ಸಲ್ಲಿಸುವಂತಾಗಲಿ. ಸಂಸ್ಥೆಯು ಇನ್ನಷ್ಟು ಬೆಳೆದು ಇನ್ನೂ ಹೆಚ್ಚಿನ ಮಳಿಗೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿ ಹೊನ್ನಾವರ ಎಂ.ಪಿ.ಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ಕಳೆದ ೨೫ ವರ್ಷಗಳಿಂದ ನಾನು ಸಹ ತರಂಗ ಇಲೆಕ್ಟ್ರಾನಿಕ್ಸನ ಸಂತೃಪ್ತ ಗ್ರಾಹಕನಾಗಿದ್ದು, ಈ ಸಂಸ್ಥೆಯ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸಂಸ್ಥೆಯ ಮುಖ್ಯಸ್ಥರಾದ ತುಂಬ್ಲೇಮಠ ಕುಟುಂಬದ ಶ್ರೀಕಾಂತ ಭಟ್ಟ ಮಾತನಾಡಿ, ತರಂಗ ಇಲೆಕ್ಟ್ರಾನಿಕ್ಸ ನ ಮಾತೃಸಂಸ್ಥೆ ದಿ.ಕೆ.ಟಿ.ಭಟ್ಟ ಪ್ರವರ್ತಿತ ಶ್ರೀ ಗಜಾನನ ರೇಡಿಯೋ ಮತ್ತು ಇಲೆಕ್ಟ್ರಿಕಲ್ಸ ೧೯೬೮ಪ್ರಾರಂಭವಾಗಿ ಅಸಂಖ್ಯ ಜನಮಣ್ಣನೆ ಗಳಿಸಿ ಬೆಳೆದಿತ್ತು. ನಂತರ ೧೯೮೮ ರಲ್ಲಿ ಕುಮಟಾದಲ್ಲಿ ಪ್ರಾರಂಭವಾದ ಹೊಸ ಹೆಸರಿನೊಂದಿಗೆ ನಮ್ಮ ತರಂಗ ಇಲೆಕ್ಟ್ರಾನಿಕ್ಸ ಸಂಸ್ಥೆಯು ಆರಂಭಗೊಂಡು ಕೆಲ ವರ್ಷಗಳಿಂದ ಶಿರಸಿ ಹಾಗೂ ಹೊನ್ನಾವರಗಳಲ್ಲೂ ಯಶಸ್ವಿಯಾಗಿ ವಿಸ್ತರಿಸಿದೆ. ಇದೀಗ ನಮ್ಮ ಹೊನ್ನಾವರದ ಮಳಿಗೆಯನ್ನು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ನೂತನ ಸುಸಜ್ಜಿತ ವಿಶಾಲ ಕಟ್ಟಡಕ್ಕೆ ಸ್ಥಳಾಂತರಿಸಿದ್ದೇವೆ. ಎಂದಿನಂತೆ ನಮ್ಮ ನೆಚ್ಚಿನ ಗ್ರಾಹಕರು ಮುಕ್ತವಾಗಿ ಬಂದು ತಮ್ಮ ಆಯ್ಕೆಗೆ ತಕ್ಕಂತೆ ಸಂತೃಪ್ತಿಯಿಂದ ವಿಶ್ವಾಸಪೂರ್ಣ ವ್ಯವಹಾರ ಅನನ್ಯವಾದ ಸೇವೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಅತಿಥಿಗಳಾಗಿ ಉದ್ಯಮಿ ಜಗದೀಶ ಟಿ. ಪೈ, ಉದ್ಯಮಿ ರಾಜೇಶ ವಿ. ಸಾಳೇಹಿತ್ತಲ, ಉದ್ಯಮಿ ಮಂಜುನಾಥ ಶೇಟ ಪಾಲ್ಗೊಂಡು ಶುಭ ಹಾರೈಸಿದರು. ತರಂಗ ಇಲೆಕ್ಟ್ರಾನಿಕ್ಸ ಮತ್ತು ಫರ್ನಿಚರ್‍ಸ ಸಂಸ್ಥೆಯ ಜಯಶ್ರೀ ಭಟ್ಟ, ವಸಂತ ಭಟ್ಟ, ಜಯಂತ ಭಟ್ಟ ಹಾಗೂ ಕುಟುಂಬದವರು, ಹಿತೈಶಿಗಳು, ಗ್ರಾಹಕರು, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.