ಭಟ್ಕಳ: 85 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಭಟ್ಕಳ ಎಜ್ಯುಕೇಶನ್ ಟ್ರಸ್ಟ್’ನ 8 ವಿದ್ಯಾ ಸಂಸ್ಥೆಗಳಲ್ಲಿ ಒಂದು, ಪ್ರತಿಷ್ಠಿತ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು. ಕರ್ನಾಟಕ ಸರ್ಕಾರದ ಮಾನ್ಯತೆಯೊಂದಿಗೆ, ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟ BCA – BCom – BBA – BA ಕೋರ್ಸುಗಳನ್ನು ಹೊಂದಿದೆ. ಪ್ರತಿವರ್ಷ ನೂರಾರು ಉದ್ಯೋಗಾರ್ಹ ಪದವೀಧರರನ್ನು ರೂಪಿಸುತ್ತಿರುವ ಸಂಸ್ಥೆಯು, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಾಶಸ್ತ್ಯ ನೀಡುತ್ತಿದೆ. ಉದ್ಯೋಗ ನೀಡುವ ಧ್ಯೇಯವನ್ನಿಟ್ಟು ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಿರುವ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ, ಕ್ಯಾಂಪಸ್ ಸಂದರ್ಶನಕ್ಕೆ ಹೆಸರುವಾಸಿಯಾಗಿದೆ. Wipro, Infosys, TCS, Fidelity, 24×7.ai, Genpact, Growth Falcon ಮುಂತಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರತಿವರ್ಷ ಹಲವಾರು ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ.
Government Scholarship ಜೊತೆಯಲ್ಲಿ Wipro’s Santoor, TATA Capitals, HDFC, Jindal Foundation, GGKRF ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿಂದ ಲಕ್ಷಾಂತರ ರುಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳು ಪಡೆಯುತ್ತಿರುವರು. ICT Academy, M.R.Pai Foundation, ExcelR Academy, CI Academy, Vreach Academy, WKC ಮುಂತಾದ ಹತ್ತು ಹಲವಾರು Training Unit ಮೂಲಕ ವಿದ್ಯಾರ್ಥಿಗಳ ಭವಿಷ್ಯ ಆಧಾರಿತ ತರಬೇತಿಯನ್ನು ನೀಡಲಾಗುತ್ತಿದೆ. Deshpande Foundation ಸಂಸ್ಥೆಯೊಂದಿಗೆ MoU ಮುಂದುವರೆದಿದ್ದು, ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗವಂತ-ಕೌಶಲ್ಯವಂತರನ್ನಾಗಿಸುತ್ತಿದೆ.
CA-CS ತರಬೇತಿ:
B.Com, BBA ಪದವಿಯ ಜೊತೆಯಲ್ಲಿ CA, CS ಕಲಿಯುವ ಅವಕಾಶ ಈ ಕಾಲೇಜಿನಲ್ಲಿದ್ದು, ಈಗಾಗಲೇ ಹಲವಾರು ವಿದ್ಯಾರ್ಥಿಗಳು CA Foundation, CSEET ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿ: ಕಳೆದ ಹಲವಾರು ವರ್ಷಗಳಿಂದ ವಿಶ್ವವಿದ್ಯಾಲಯ ಮಟ್ಟದ Rank ಅನ್ನು ಗಳಿಸುವ ಮೂಲಕ SGS College ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿ ಯಾಗಿದೆ.
University Blue – Sports: ಕಾಲೇಜು ಶಿಕ್ಷಣದೊಂದಿಗೆ ಪಠ್ಯೇತರ ಹಾಗೂ ಕ್ರೀಡೆಗಳಲ್ಲಿ ಪ್ರೋತ್ಸಾಹ ನೀಡುತ್ತಿದ್ದು ಹಲವಾರು ವಿದ್ಯಾರ್ಥಿಗಳು ಯುನಿವರ್ಸಿಟಿ Blue ಆಗಿ ಹೊರಹೊಮ್ಮಿದ್ದಾರೆ. University ಮಟ್ಟದ Sports, Athletics, Games, Cultural Activities ಗಳಲ್ಲಿ ರಾಜ್ಯ ,ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟ ದಲ್ಲಿ ಭಾಗವಹಿಸಿ ವಿವಿಧ ಹಂತಗಳಲ್ಲಿ ಪ್ರತಿನಿಧಿಸಿರುತ್ತಾರೆ.
Skilled Future Talents ನ್ನು ಈ ಸಮಾಜಕ್ಕೆ ನೀಡುವ ಉದ್ದೇಶದಿಂದ AI-Hub(Artificial Intelligence) ಪ್ರಾರಂಭಿಸಿದ್ದು, ವಿದ್ಯಾರ್ಥಿಗಳಿಗೆ ಈ ದಿಶೆಯಲ್ಲಿ ವಿಶೇಷ ತರಬೇತಿಯನ್ನು ಕಾಲೇಜು ನೀಡುತ್ತಿದೆ.
ವಿಶೇಷ ತರಬೇತಿ:
ಪದವಿಯ ಜೊತೆಯಲ್ಲಿ Banking, FinTech, Digital Commerce, e-Business ಕಲಿಯುವ ಅವಕಾಶ ಈಗ ಕಾಲೇಜಿನಲ್ಲಿದೆ.
ವಿದ್ಯಾರ್ಥಿಗಳ & ನಾಗರೀಕರ ಅಪೇಕ್ಷೆ ಮೇರೆಗೆ ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಸಂಯೋಜನೆಯೊಂದಿಗೆ, ಕಂಪ್ಯೂಟರ್ ತರಬೇತಿ ಒಳಗೊಂಡಂತೆ ಹಲವು ಸೌಲಭ್ಯದೊಂದಿಗೆ ಬಿಎ ಕೋರ್ಸ್ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಸರ್ಕಾರಿ ಉದ್ಯೋಗಾವಕಾಶವನ್ನು ಪಡೆಯಲು ಸಹಕಾರಿಯಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶನ ನೀಡಲಾಗುತ್ತಿದ್ದು, ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪದವಿ ಪಡೆದು ಬಹುರಾಷ್ಟ್ರೀಯ ಕಂಪನಿ, ಬ್ಯಾಂಕಿಂಗ್, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆದು ತಮ್ಮ ಬಾಳನ್ನು ಬೆಳಗಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಕಾಲೇಜಿನಲ್ಲಿ NSS, Youth Red Cross, Rotaract Club, Unnat Bharat Abhiyan, Saptasvara, Samriddhi ಮುಂತಾದ Unit ಗಳನ್ನು ಪ್ರಾರಂಭಿಸಲಾಗಿದೆ.
Features:
ಮೆರಿಟ್ ಆಧಾರಿತ ಶಿಕ್ಷಣ ಶುಲ್ಕ.
Fees ತುಂಬಲು Installment ವ್ಯವಸ್ಥೆ.
ಅರ್ಹ ಅನುಭವಿ ನುರಿತ ಶಿಕ್ಷಕರಿಂದ ಬೋಧನೆ.
ಉದ್ಯೋಗ ಕೇಂದ್ರಿತ ಕೌಶಲ್ಯ ತರಬೇತಿ.
ಹೊಸ ತಂತ್ರಜ್ಞಾನವನ್ನೊಳಗೊಂಡ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್.
ತಂತ್ರಜ್ಞಾನ ಆಧಾರಿತ ಬೋಧನೆ ಮತ್ತು ಕಲಿಕೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
www.sgsbhatkal.in 8971071471, 8971098090