ಹೊನ್ನಾವರ: ತಾಲೂಕಿನ ಅಳ್ಳಂಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಇಂದು ಮುಂಜಾನೆ ಶಂಕುಸ್ಥಾಪನೆ ಮಾಡಲಾಯಿತು. ಇಲ್ಲಿಯ ಶ್ರೀ ಕ್ಷೇತ್ರ ಬಂಗಾರಮಕ್ಕಿ ಹಾಗೂ ಬೆಂಗಳೂರಿನ ಸುಧೀಕ್ಷಾ ಹೆಲ್ತ್ ಕೇರ್ ನ ಸಂಸ್ಥೆಯ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಹಾತ್ವಾಕಾಂಕ್ಷೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾನಾಡಿದ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಸದ್ಯ ಇಲ್ಲಿ 150 ಹಾಸಿಗೆ ಆಸ್ಪತ್ರೆ ಮಾಡಿ ಕ್ರಮೇಣ ಹಂತ ಹಂತವಾಗಿ ಜಾಸ್ತಿ ಹಾಸಿಗೆಯ ಆಸ್ಪತ್ರೆ ವ್ಯವಸ್ಥೆ ಮಾಡಲಾಗುವುದು ಎಂದರು.

RELATED ARTICLES  ಹಂಡೆ ಕಳ್ಳನಿಗೆ ಬಿತ್ತು ಧರ್ಮದೇಟು.

ಸುಧೀಕ್ಷಾ ಹೆಲ್ತ್ ಕೇರ್ ನ ಸಿಎಂಡಿ ಡಾ. ಸುಬ್ರಹ್ಮಣ್ಯಂ ಶರ್ಮಾ ಗೌರವರಂ‌ ಅವರು ಮಾತನಾಡಿ, ಸುವ್ಯವಸ್ಥೆಯ, ಉನ್ನತ ದರ್ಜೆಯ ಆಸ್ಪತ್ರೆಯನ್ನು ಈ ಜಿಲ್ಲೆಗೆ ಕೊಡುಗೆಯಾಗಿ ನೀಡಲಾಗುವುದು. ಜರ್ಮನಿಯಲ್ಲಿ ತಯಾರಾದ ವೈದ್ಯಕೀಯ ಪರಿಕರಗಳನ್ನು, ಯಂತ್ರಗಳನ್ನು ಈ ಆಸ್ಪತ್ರೆಯಲ್ಲಿ ಬಳಸಲಾಗುವುದು ಎಂದರು‌.

ಆಸ್ಪತ್ರೆಗೆ ಬೇಕಾಗುವ ತಜ್ಞ ವೈದ್ಯರನ್ನು ಹೇಗೆ ತರುತ್ತೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸುಬ್ರಹ್ನಣ್ಯಂ ಈಗಾಗಲೇ ಸಾವಿರಾರು ವೈದ್ಯರು ಇಲ್ಲಿ ಸೇವೆ ನೀಡಲು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯವರೇ ಆಗಿದ್ದು ಹೊರ ಪ್ರಾಂತ್ಯದಲ್ಲಿದ್ದ ತಜ್ಞ ವೈದ್ಯರು ಈ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಉತ್ಸಾಹದಲ್ಲಿದ್ದಾರೆ ಎಂದರು.

RELATED ARTICLES  ಫೇ.೧೧ ಭಾನುವಾರದಂದು ತಾಲೂಕಿನ ಕರ್ಕಿಯ  ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಹವ್ಯಕ ವಿದ್ಯಾರ್ಥಿಗಳು ಹಾಗೂ ಸಮಾಜ ಬಂಧುಗಳಿಗಾಗಿ ವಿವಿಧ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಮಾರಂಭ

ಈ ಸಂದರ್ಭದಲ್ಲಿ ಹಲವು ಗಣ್ಯರು ಪಾಲ್ಗೊಂಡರು. ಇನ್ನು ಕೆಲವೇ ಕ್ಷಣದಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಶಂಕುಸ್ಥಾಪನೆ ನಿಮಿತ್ತ ಸಾರ್ವಜ‌ನಿಕ ಸಮಾರಂಭ ನಡೆಯಲಿದೆ.