ಮಂಗಳೂರು: ೨೦೦೭ರಿಂದ ಮಂಗಳೂರಿನಿಂದ ಪ್ರಕಟವಾಗಲು ಆರಂಭವಾದ “ಕೊಡಿಯಾಲ ಖಬರ” ಕೊಂಕಣಿ ಪಾಕ್ಷಿಕ ಪತ್ರಿಕೆಯು ಡಿಜಿಟಲ್ ಮಾಧ್ಯಮವಾಗಿ ‘ಕೊಡಿಯಾಲ ಖಬರ ಡಾಟ್ ಕಾಮ್’ ಆಗಿ ರೂಪಾಂತರಗೊಂಡು ನಾಲ್ಕು ವರ್ಷಗಳು ಕಳೆದಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು ೩೦ ಲಕ್ಷ ವಿಕ್ಷಕರು ಈ ವೆಬ್ ಸೈಟನ್ನು ವಿಕ್ಷಿಸಿದ್ದಾರೆ. ಕಳೆದ ೧೭ ವರ್ಷಗಳಲ್ಲಿ ಕೊಡಿಯಾಲ ಖಬರ ದೇಶ ವಿದೇಶದಲ್ಲಿ ಇರುವ ಕೊಂಕಣಿ ಭಾಷಿಗರಿಗೆ ಕೊಂಕಣಿ ಬಾಶೆಯಲ್ಲಿ ಸುದ್ದಿ ಹಾಗೂ ಇತರ ಲೇಖನಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಇದೆ ಬರುವ ಮೇ ೧೯, ೨೦೨೪ರಂದು ಸಂಜೆ ೪.೦೦ ಗಂಟೆಗೆ ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಕೊಡಿಯಾಲ ಖಬರ ಡಾಟ್ ಕಾಮ್ ವತಿಯಿಂದ ಸಾರಸ್ವತ ಕೊಂಕಣಿ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುವುದು.


ಹಲವಾರು ದಶಕಗಳಿಂದ ಕೊಂಕಣಿ ಭಾಷಾ ಸಾಹಿತ್ಯಕ್ಕೆ ಅದರಲ್ಲೂ ಮುಖ್ಯವಾಗಿ ಪ್ರಾಥಮಿಕ ಶಾಲೆಯಲ್ಲಿ ಕೊಂಕಣಿ ಕಲಿಕೆಗೆ ವಿಶೇಷ ಕೊಡುಗೆ ನೀಡಿರುವ ಡಾ. ಕಸ್ತೂರಿ ಮೋಹನ ಪೈ ಇವರಿಗೆ ‘ಕೊಂಕಣಿ ಸಾಹಿತ್ಯ ರತ್ನ ಪ್ರಶಸ್ತಿ’, ಸಾರಸ್ವತ ಕೊಂಕಣಿ ಸಂಘ ಸಂಸ್ಥೆಗಳಿಗೆ ವಿಶೇಷ ನಾಯಕತ್ವ ನೀಡಿ ಮಹಿಳೆಯರಲ್ಲಿ ಕೊಂಕಣಿ ಭಾಶೆ ಬಗ್ಗೆ ಜಾಗೃತಿ ಮೂಡಿಸಿದ ಶ್ರೀಮತಿ ಗೀತಾ ಸಿ. ಕಿಣಿ ಇವರಿಗೆ ‘ಕೊಂಕಣಿ ಸಂಘಟನಾ ರತ್ನ ಪ್ರಶಸ್ತಿ’, ಕೊಂಕಣಿ ಭಾಷೆ ಅಲ್ಲದೇ ಇತರ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ವಿಶೇಷ ಪೋಷಕರಾಗಿ ಸೇವೆ ಸಲ್ಲಸಿರುವ ಮಂಗಳೂರು ಕೆ. ಎಸ್. ರಾವ್ ರಸ್ತೆಯ ‘ಮೆ. ಎಸ್. ಎಲ್. ಶೇಟ್ ಜ್ಯುವೆಲ್ರ‍್ಸ್ ಎಂಡ್ ಡೈಮಂಡ್ ಹೌಸ್’ ಇವರಿಗೆ ‘ಕೊಂಕಣಿ ಪೋಷಕ ರತ್ನ ಪ್ರಶಸ್ತಿ’, ಉದ್ಯಮ ಕ್ಷೇತ್ರದಲ್ಲಿ ಅದರಲ್ಲೂ ಇನ್ಶೂರೇನ್ಸ್ ಹಾಗೂ ಹೂಡಿಕೆ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಶ್ರೀ ಕುಂಬ್ಳೆ ನರಸಿಂಹ ಪ್ರಭು ಇವರಿಗೆ ‘ಕೊಂಕಣಿ ಉದ್ಯಮ ರತ್ನ ಪ್ರಶಸ್ತಿ’ ಮತ್ತು ಯುವ ಜನತೆಯ ನಡುವೆ ಕೊಂಕಣಿ ಭಾಷೆ ಬಗ್ಗೆ ವಿಶೇಷ ಅರಿವು ಮೂಡಿಸಿರುವ ಡಾ. ಅರವಿಂದ್ ಶ್ಯಾನುಭಾಗ ಬಾಳೇರಿ, ಕುಮಟಾ ಇವರಿಗೆ ‘ಕೊಂಕಣಿ ಯುವ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಕೊಡಿಯಾಲ ಖಬರ ಡಾಟ್ ಕಾಮ್ ಇದರ ಸಂಪಾದಕ ವೆಂಕಟೇಶ ಬಾಳಿಗಾ ಮಾವಿನಕುರ್ವೆ ತಿಳಿಸಿದ್ದಾರೆ.

RELATED ARTICLES  ಫೇ.೨೫ ರಂದು ಯುವಾ ಬ್ರಿಗೇಡ್ ಕುಮಟಾ ವತಿಯಿಂದ 'ಅಘನಾಶಿನಿ ಆರತಿ' ಕಾರ್ಯಕ್ರಮ

ಈ ಕಾರ್ಯಕ್ರಮದಲ್ಲಿ ಕನಾರ್ಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಸ್ಟಾನಿ ಅಲ್ವಾರಿಸ್ ಇವರು ಮುಖ್ಯ ಅತಿಥಿಗಳಾಗಿ ಅಗಮಿಸಲಿದ್ದು, ಟಾಟಾ ರಿಫ್ರೇಕ್ಟರಿಸ್ ಇದರ ನಿವೃತ್ತ ಆಡಳಿತ ನಿರ್ದೇಶಕ ಶ್ರೀ ಸಿ. ಡಿ. ಕಾಮತ ಮತ್ತು ಜಿ. ಎಸ್. ಬಿ. ಮಹೀಳಾ ವೃಂದ ಮಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ನಯನಾ ರಾವ್ ಗೌರವಾನ್ವಿತ ಅಥಿತಿಗಳಾಗಿರುತ್ತಾರೆ. ಇದೇ ಸಂದರ್ಭದಲ್ಲಿ ಇತ್ತಿಚೆಗೆ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಕೊಂಕಣಿ ಭಾಶೆಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ ಕೆನರಾ ಹೈಸ್ಕೂಲ್ ಡೊಂಗರಕೇರಿ ಇಲ್ಲಿಯ ವಿದ್ಯಾರ್ಥಿಗಳಾದ ಶ್ರದ್ಧಾ ಕೆ. ಶೇಟ್ ಮತ್ತು ಕು. ನಮೃತಾ ಜಿ. ನಾಯಕ ಅವರನ್ನೂ ಗೌರವಿಸಲಾಗುವುದು ಎಂದು ಸಹ ಸಂಪಾದಕಿ ವಿದ್ಯಾ ಬಾಳಿಗಾ ತಿಳಿಸಿದ್ದಾರೆ.

RELATED ARTICLES  29ರಂದು ಪಂ. ಷಡಕ್ಷರಿ ಗವಾಯಿ ಪುಣ್ಯಸ್ಮರಣೆ, ಪ್ರಶಸ್ತಿ ಪ್ರದಾನ