ಕುಮಟಾ : 48 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಹನ್ನೊಂದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುವ ಜೊತೆಗೆ ಜಾತಿನಿಂದನೆ ಮಾಡಿದ್ದಾನೆ ಎಂದು ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಮೀನಿನಲ್ಲಿ ಕೆಲಸ‌ಮಾಡುತ್ತಿದ್ದ 48 ವರ್ಷ ವಯೋಮಾನದ ವ್ಯಕ್ತಿ ಜಮೀನು ಕೆಲಸದಲ್ಲಿ ತೊಡಗಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಯೇ ಸನಿಹದಲ್ಲಿದ್ದ 11 ವರ್ಷದ ಬಾಲಕಿಯನ್ನು ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಇದಲ್ಲದೆ ಬಾಲಕಿ ಮೇಲೆ ಜಾತಿ ನಿಂದನೆ ನಡೆಸಿ ಆರ್ಥಿಕವಾಗಿಯೂ ಶೋಷಣೆ ಮಾಡಿದ್ದಾನೆ ಎನ್ನಲಾಗಿದೆ. ಬಾಲಕಿ ಅಸ್ವಸ್ಥತೆ ಕಂಡ ತಾಯಿ ಆಸ್ಪತ್ರೆ ದಾಖಲಿಸಿದ್ದು, ಈ ವಿಚಾರ ಬೆಳಕಿಗೆ ಬಂದಿದೆ. ನಂತರ ಕುಮಟಾ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿ, ಪೋಕ್ಸೋ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

RELATED ARTICLES  ಕುಮಟಾಕ್ಕೆ ಬಂದ ರಾಕಿಂಗ್ ಸ್ಟಾರ್ ಯಶ್.