ಶಿರಸಿ : ವ್ಯಕ್ತಿಯೊಬ್ಬರು ಕಾಣೆಯಾದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಗಾಂಧಿನಗರದ ಹುಲಿಯಪ್ಪನಗುಡ್ಡದ ಶಿವರಾಯ ಹನುಮಂತಪ್ಪ ದೇಸಾಯಿ (42) ಕಾಣೆಯಾದ ವ್ಯಕ್ತಿಯಾಗಿದ್ದಾರೆ. ಇವರು. ಮೇ 15 ರಂದು ತನ್ನ ಮಗನನ್ನು ಬೈಕ್‌ನಿಂದ ನಗರದ ಡೈವರ್‌ಕಟ್ಟೆಯ ಬಳಿ ಇಳಿಸಿ, ಇಲ್ಲಿಯೇ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು, ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ ಎಂದು ಪತ್ನಿ ನಾಗರತ್ನ ಶಿವರಾಯ ದೇಸಾಯಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.