ಕುಮಟಾ: ಭಗ್ನ ಪ್ರೇಮಿ ಯುವಕನೊಬ್ಬ ತನ್ನ ಪ್ರೀತಿ ನಿರಾಕರಿಸಿದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಪಟ್ಟಣದ ಮಣಕಿ ಮೈದಾನದ ಬಳಿ ಬುಧವಾರ ನಡೆದಿದೆ. ದುಂಡಕುಳಿಯ ಆಟೋಚಾಲಕ ವೃತ್ತಿಯ ಸಂತೋಷ ಪಾಂಡುರಂಗ ಅಂಬಿಗ(27) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಆರೋಪಿ ತಾಲೂಕಿನ ಹೆಗಡೆ ಚಿಟ್ಟಿಕಂಬಿಯ ನಿವಾಸಿ ವಾಟರ್ ಸರ್ವಿಸ್ ಕೆಲಸ ಮಾಡುವ ರಾಜೇಶ ರಮೇಶ ಅಂಬಿಗ(27) ಎಂದು ಗುರುತಿಸಲಾಗಿದೆ.

RELATED ARTICLES  ಹೆದ್ದಾರಿ ಪಕ್ಕದಲ್ಲಿ ಕಂದಕಕ್ಕೆ ಇಳಿದ ಕಾರು

ಆರೋಪಿ ರಾಜೇಶ ಅಂಬಿಗ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದು ಇತ್ತೀಚೆಗೆ ರಾಜೇಶನ ನಡವಳಿಕೆ ಸರಿಯಾಗಿಲ್ಲದಿದ್ದರಿಂದ ಯುವತಿ ರಾಜೇಶನಿಂದ ದೂರ ಸರಿದಿದ್ದಳು. ನಂತರ ಯುವತಿಯು ಸಂತೋಷ ಅಂಬಿಗನನ್ನು ಪ್ರೀತಿಸಿದ್ದು ಮದುವೆಯಾಗಲು ಇಚ್ಛಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ ರಾಜೇಶ ಅಂಬಿಗ ಮಣಕಿ ಮೈದಾನಕ್ಕೆ ಸಂತೋಷ ಅಂಬಿಗನನ್ನು ಕರೆಸಿಕೊಂಡು ತಾನು ಪ್ರೀತಿಸಿದ್ದ ಯುವತಿಯನ್ನು ಮದುವೆಯಾಗದಂತೆ ಕೊಲೆ ಬೆದರಿಕೆ ಹಾಕಿ, ಖಾರದ ಪುಡಿ ಎರಚಿ ಚಾಕುವಿನಿಂದ ಕುತ್ತಿಗೆಯ ಮೇಲೆ ತಿವಿದು ಹಲ್ಲೆ ಮಾಡಿದ್ದಾನೆ. ಅಲ್ಲಿಂದ ಹೇಗೋ ತಪ್ಪಿಸಿಕೊಂಡಿದ್ದ ತೀವ್ರ ಗಾಯಗೊಂಡ ಸಂತೋಷನನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಕೋಡ್ಕಣಿಯ ಸುಬ್ರಹ್ಮಣ್ಯ ನಾರಾಯಣ ಅಂಬಿಗ ದೂರಿನನ್ವಯ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.

RELATED ARTICLES  ಜಿಲ್ಲಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ಇಲಾಖಾ ಕ್ರೀಡಾಕೂಟ ಸಂಪನ್ನ.