Home BHATKAL ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಭಟ್ಕಳದ ಕಾಲೇಜು ವಾರ್ಷಿಕೋತ್ಸವ ಮತ್ತು ಪದವಿ ದಿನಾಚರಣೆ...

ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಭಟ್ಕಳದ ಕಾಲೇಜು ವಾರ್ಷಿಕೋತ್ಸವ ಮತ್ತು ಪದವಿ ದಿನಾಚರಣೆ ಸಂಪನ್ನ.

ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಭಟ್ಕಳ ಇದರ 44 ನೇ ಕಾಲೇಜು ವಾರ್ಷಿಕೋತ್ಸವ ಮತ್ತು 40 ನೇ ಪದವಿ ದಿನಾಚರಣೆ ರವಿವಾರದಂದು ನಡೆಯಿತು. ಈ ಕಾಲೇಜು 44 ವರ್ಷಗಳಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು. ಎ.ಐ ಎಂ.ಎಲ್ ಡಾಟಾ ಸೈನ್ಸ್, ರೋಬಿಟಿಕ್ ಸೇರಿದಂತೆ ಹೊಸ ಹೊಸ ಶಾಖೆಗಳಿಂದ ಕಂಗೊಳಿಸುತ್ತಿದೆ. ಅದೇ ರೀತಿ ಪ್ರತಿಷ್ಠಿತ ಕಂಪನಿಗಳನ್ನು ತಮ್ಮತ್ತ ಆಕರ್ಷಿಸುವಂತೆ ಮಾಡಿದ್ದು, ಪ್ಲೇಸ್ ಮೆಂಟ್, ಕ್ಯಾ0ಪಸ್ ಸೌಲಭ್ಯ ಹೊಂದಿದ್ದು. ಈ ಕಾಲೇಜು ಜಿಲ್ಲೆಯಲ್ಲಿಯೇ ಉತ್ತಮ ರೀತಿಯಲ್ಲಿ ಮುನ್ನಡೆದುಕೊಂಡು ಹೋಗುತ್ತಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿದರು. ಅದೇ ರೀತಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೂ ಇದೆ ವೇಳೆ ಬಹುಮಾನ ವಿತರಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಅತಿಥಿಗಳು ಮಾತನಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಮುಂದಿನ ಅವರ ಭವಿಷ್ಯದ ಬಗ್ಗೆ ಉತ್ತಮವಾದ ರೀತಿಯಲ್ಲಿ ಕಿವಿ ಮಾತು ಹೇಳಿದರು. ಅಂತಿಮವಾಗಿ ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥ ಡಾ :ಅನ್ವರ್ ಸಾತಿಕ್. ಜೆ.ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ವಂದನಾರ್ಪಣೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಅಂಜುಮನ್ ಉಪಾಧ್ಯಕ್ಷ
ಮೇಜರ್ ಡಾ. ಮೊಹಮ್ಮದ್ ಜುಬೇರ್ ಕೋಲಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಂ.ಐ. ಟಿ ಮಣಿಪಾಲದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ನಿರ್ದೇಶಕ ಹಾಗೂ ಹಿರಿಯ ಪ್ರಾಧ್ಯಾಪಕ ಡಾ.ವಿ ರಾಮಚಂದ್ರ ಮೂರ್ತಿ ಇದ್ದರು.

ಭಟ್ಕಳ ಎ.ಎಚ್.ಎಂ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಶಾಕ್ ಶಾಬಂದ್ರಿ, ಭಟ್ಕಳ
ಎಐಟಿಎಂ ಕಾರ್ಯದರ್ಶಿ ಮೊಹಿದ್ದೀನ್ ರುಕ್ನಾದ್ದೀನ್,ಅಬ್ದುಲ್ ಹಸೀಬ್ ಕಾಡ್ಲಿ,
ತನ್ವೀರ್ ಕಾಸರಗೋಡ, ಅಂಜುಮನ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಕೆ.ಫಜಲುರ್ ರೆಹಮಾನ್,ರಿಜಿಸ್ಟ್ರಾರ್ ಪ್ರೊ.ಜಾಹಿದ್ ಖರೂರಿ,ಡಾ ಅನಂತಮೂರ್ತಿ ಶಾಸ್ತ್ರಿ ಮಾಧ್ಯಮ ಸಂಯೋಜಕ ಪ್ರೊ.ಸುಬ್ರಹ್ಮಣ್ಯ ಗಜಾನನ ಭಾಗವತ್, ಶ್ರೀ ಶೈಲ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು