ಕುಮಟಾ : ವಿಧಾತ್ರಿ ಅಕಾಡೆಮಿ ಗುಣಮಟ್ಟದ ಶಿಕ್ಷಣದ ಮೂಲಕ ಪಾಲಕರಿಗೆ ಕೊಟ್ಟ ಭರವಸೆಯನ್ನು ಉಳಿಸಿಕೊಂಡು ಬಂದಿದೆ. ವಿದ್ಯಾರ್ಥಿಗಳ ಬೆನ್ನೆಲುಬಾಗಿದೆ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ದೇವಾಲಯಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ದಕ್ಷಿಣಕನ್ನಡದಲ್ಲಿಯೇ ಇದೆಯೇ ಎಂಬಂತೆ ಹಲವರು ನಡೆದುಕೊಳ್ಳುತ್ತಿದ್ದರೂ, ಗುರುರಾಜ ಶೆಟ್ಟಿ, ಮುರಳೀಧರ ಪ್ರಭುರವರಂತಹವರು ವಿಧಾತ್ರಿ ಅಕಾಡೆಮಿಯನ್ನು ಕುಮಟಾಕ್ಕೆ ತಂದ ಬಗೀರಥ ಪ್ರಯತ್ನದಿಂದ ದಕ್ಷಿಣಕನ್ನಡ, ಧಾರವಾಡ, ಹುಬ್ಬಳ್ಳಿ ಹಾಗೂ ಇತರೆಡೆಗೆ ಹೋಗುತ್ತಿದ್ದ ಮಕ್ಕಳು ಕುಮಟಾದಲ್ಲಿಯೇ ಉಳಿಯುವಂತಾಗಿದೆ. ಪ್ರಮಾಣಿಕ ಶಿಕ್ಷಣದ ಕಳಕಳಿ ಹೊಂದಿರುವ ವಿಧಾತ್ರಿಯಂತಹ ಶಿಕ್ಷಣ ಸಂಸ್ಥೆ ತನ್ನೆಡೆಗೆ ಮಕ್ಕಳನ್ನು ಸೆಳೆಯುತ್ತಿರುವುದು ಸಂತಸದ ವಿಚಾರ ಎಂದು ಖ್ಯಾತ ವಾಗ್ಮಿ ಹಾಗೂ ಸಾಹಿತಿ ಸಂದೀಪ ಭಟ್ಟ ಮೇಲಿನಗಂಟಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಭಾಭವನದಲ್ಲಿ ನಡೆದ ಸರಸ್ವತಿ ಪಿ.ಯು ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ “ಆರಂಭಮ್” ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತನಾಡಿದರು.

ಅದೃಷ್ಟ, ಪ್ರಯತ್ನ, ಬುದ್ದಿವಂತಿಕೆ, ಶಕ್ತಿ ಇದರಿಂದ ಯಶಸ್ಸು ಸಿಗುತ್ತದೆ ಎಂಬುದನ್ನು ಸೋದಾಹರಣವಾಗಿ ವಿವರಿಸಿದ ಅವರು, ವಿಧಾತ್ರಿ ಅಕಾಡೆಮಿಗೆ ಸೇರಿದವರು ಈ ನಾಲ್ಕೂ ಅಂಶಗಳ ಮೂಲಕ ಯಶಸ್ವಿಯಾಗಿ, ನಾಡಿಗೇ ಕೀರ್ತಿ ತರುವಂತಾಗಲಿ ಎಂದು ಅಭಿಪ್ರಾಯಿಸಿದರು. ನಮ್ಮ ಜಿಲ್ಲೆಯ ಸುಶಿಕ್ಷಿತ ಸಮಾಜ ಸರಸ್ವತಿ ಪಿ.ಯು ಕಾಲೇಜಿನಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಂದಿರುವುದು ಹೆಮ್ಮೆಯ ವಿಚಾರವಾಗಿದೆ ಎಂದ ಅವರು, ಹೊಸ ಹೊಸ ಕನಸುಗಳನ್ನು ಕಟ್ಟುವ ಮೂಲಕ ಜೀವನದಲ್ಲಿ ಯಶಸ್ವಿಯಾಗಬೇಕು ಎಂದರು.

RELATED ARTICLES  ಮಿಲನಕ್ಕೆ ಜಾಗ ಹುಡುಕುತ್ತಾ ಮನೆಯಂಗಳಕ್ಕೆ ಬಂದ ಉರಗಗಳು. : ಉರಗ ತಜ್ಞ ಪವನ್ ನಾಯ್ಕರಿಂದ ರಕ್ಷಣೆ : ಆ ಕ್ಷಣದ ವಿಡಿಯೋ ಇಲ್ಲಿದೆ ನೋಡಿ.

ನಮ್ಮ ನಮ್ಮ ಕೆಲಸ ಮಾಡಲು ಹೊರಟಾಗ ಅಪವಾದಗಳು ಬರುವುದು ಸಹಜ, ಅದರಿಂದ ನಾವು ವಿಚಲಿತರಾಗಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು ಸಾಧನೆಯ ಹಿಂದೆ ಹೋಗುವ ಮೂಲಕ ಯಾವುದೇ ಅಡೆತಡೆಗಳನ್ನು ಗೆಲ್ಲುವಂತಾಗಬೇಕು. ಸಂಸ್ಥೆಯ ನಿಯಮಗಳನ್ನು ಪಾಲನೆಮಾಡಬೇಕೆಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸುವಂತಾಗಬೇಕು. ಮಕ್ಕಳು ಸ್ವಯಂ ಪ್ರಜ್ಞೆ ಬೆಳೆಸಿಕೊಳ್ಳಬೇಕು ಆ ಮೂಲಕ ಸಂಸ್ಥೆಯ ಕೀರ್ತಿಯನ್ನೂ ಹೆಚ್ಚಿಸುವಂತಾಗಬೇಕು ಎನ್ನುತ್ತಾ, ವಿಧಾತ್ರಿ ಅಕಾಡೆಮಿ ಎಸ್.ಎಸ್. ಎಲ್.ಸಿ ಯಲ್ಲಿ ಪಾಸ್ ಕ್ಲಾಸ್ ಆದವರನ್ನೂ ಸಂಸ್ಥೆಗೆ ಸೇರಿಸಿಕೊಂಡು ಸಾಧಕರಾಗಿ ಸಮಾಜಕ್ಕೆ‌ನೀಡಿದ್ದು ಹೆಮ್ಮೆಯ ವಿಚಾರ ಎಂದು ಕಾರ್ಯ ಶ್ಲಾಘನೆ ಮಾಡಿದರು.

RELATED ARTICLES  ಕುಮಟಾದಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ..!

ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಸಂಸ್ಥೆಯನ್ನು ಪರಿಚಯಿಸಿ ಮಾತನಾಡಿ, ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಜೊತೆಗೆ ವಿಧಾತ್ರಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸರಸ್ವತಿ ಪಿ.ಯು ಕಾಲೇಜು ಆರನೇ ವರ್ಷಕ್ಕೆ ಮುನ್ನಡೆದಿದೆ. ರಾಜ್ಯಮಟ್ಟದ ರ್ಯಾಂಕ್ ಜೊತೆಗೆ ಜಿಲ್ಲಾ‌ಮಟ್ಟದಲ್ಲಿ‌ 100% ಸಾಧನೆ ಮಾಡುತ್ತಿರುವ ಉತ್ತರಕನ್ನಡದ ಏಕೈಕ ಸಂಸ್ಥೆ ನಮ್ಮದು ಎಂಬುದು ನಮ್ಮ ಹೆಮ್ಮೆ ಎಂದರು. ಹೊಸ‌ ಮಕ್ಕಳನ್ನು ದಾಖಲಿಸುವ ಸಂದರ್ಭದಲ್ಲಿ ನಾವು ನೀಡಿದ ಎಲ್ಲಾ ಭರವಸೆಯನ್ನೂ ಈಡೇರಿಸಲು ಬದ್ಧರಾಗಿದ್ದೇವೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನಮ್ಮ ಸಾಧನೆ ಅತ್ಯುತ್ತಮವಾಗಿ ಬರುವುದರಲ್ಲಿ ನಮ್ಮ ಉಪನ್ಯಾಸಕರ ತಂಡದ ಕೊಡುಗೆ ಪ್ರಮುಖವಾದುದು. ವಿದ್ಯಾರ್ಥಿಗಳು ಉಪನ್ಯಾಸಕರ ವೃಂದಕ್ಕೆ ಸಂಪೂರ್ಣ ಶರಣಾದರೆ ನಿಮ್ಮ ಭವಿಷ್ಯ ಬೆಳಗುವ ಕಾಯಕದಲ್ಲಿ ನಾವು ತೊಡಗಿಕೊಳ್ಳುತ್ತೇವೆ ಎನ್ನುತ್ತಾ, ಎಲ್ಲಾ ಉಪನ್ಯಾಸಕರನ್ನೂ, ಸಂಸ್ಥೆಯ ಸಿಬ್ಬಂದಿಗಳನ್ನು ಪರಿಚಯಿಸಿದರು. ಪರಿಚಯಿಸಿದರು.

ಪ್ರಾಂಶುಪಾಲ ಕಿರಣ ಭಟ್ಟ ವಾರ್ಷಿಕ ಯೋಜನೆಯನ್ನು ತೆರೆದಿಟ್ಟರು. ಅಕ್ಷಯ ಅಕ್ಷಯ ಹೆಗಡೆ ಸ್ವಾಗತಿಸಿದರು. ಪದ್ಮನಾಭ ಪ್ರಭು ವಂದಿಸಿದರು. ದೀಕ್ಷಿತಾ ಕುಮಟೇಕರ್, ಲತಾ ಮೇಸ್ತಾ, ನಿಶಾ ಬ್ರಿಟೊ ನಿರೂಪಿಸಿದರು.