ಕುಮಟಾ : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳ ಉತ್ತರಪತ್ರಿಕೆಯ ಮರುಮೌಲ್ಯಮಾಪನದಲ್ಲಿ ಏಳು ವಿದ್ಯಾರ್ಥಿಗಳಿಗೆ ಹೆಚ್ಚಿನ ಅಂಕ ಪ್ರಾಪ್ತವಾಗಿದ್ದು, ಇದರಿಂದಾಗಿ ಸಂಸ್ಥೆಗೆ ಮರುಮೌಲ್ಯಮಾಪನಕ್ಕೂ ಪೂರ್ವದ ಏಳು ರ‍್ಯಾಂಕುಗಳ ಜೊತೆಗೆ, ಇದೀಗ ರಾಜ್ಯಮಟ್ಟದಲ್ಲಿ ಇನ್ನೂ ಐದು ರ‍್ಯಾಂಕುಗಳು ಲಭ್ಯವಾಗುವ ಮೂಲಕ ರಾಜ್ಯಮಟ್ಟದ ಟಾಪ್ ೧೦ ರ ಪಟ್ಟಿಯಲ್ಲಿ ೧೨ ವಿದ್ಯಾರ್ಥಿಗಳು ಸ್ಥಾನ ಪಡೆದುಕೊಂಡಿದ್ದಾರೆ.

ವೈಷ್ಣವಿ ರಮೇಶ ನಾಯ್ಕ ಗಣಿತದಲ್ಲಿ ೧ ಅಂಕ‌ ಹೆಚ್ಚಳವಾಗಿ 625 ಕ್ಕೆ 621 ಅಂಕ ಪಡೆದು 99.36% ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್, ಭೌಮಿಕ ಹಬ್ಬು ಇಂಗ್ಲೀಷ್ ನಲ್ಲಿ 9 ಅಂಕದ ಹೆಚ್ಚಳದೊಂದಿಗೆ 621 ಅಂಕಗಳೊಂದಿಗೆ 99.36% ದೊಂದಿಗೆ ರಾಜ್ಯಕ್ಕೆ 5ನೇ ರ‍್ಯಾಂಕನ್ನು, ವೈಷ್ಣವಿ ಶಂಕರ ನಾಗೇಕರ ಇಂಗ್ಲೀಷ್ ನಲ್ಲಿ ೧, ಸಮಾಜ ವಿಜ್ಞಾನದಲ್ಲಿ 1 ಅಂಕ ಹೆಚ್ಚಳದೊಂದಿಗೆ 618 (98.88%) ಪಡೆದು 8ನೇ ರ‍್ಯಾಂಕನ್ನು, ನಂದಿನಿ ನಾರಾಯಣ ನಾಯಕ ವಿಜ್ಞಾನ ವಿಷಯದಲ್ಲಿ 2, ಇಂಗ್ಲಿಷ್ ನಲ್ಲಿ 1 ಅಂಕ ಹೆಚ್ಚಳದೊಂದಿಗೆ 618 (98.88%) ಎಂಟನೇ ಸ್ಥಾನ, ತ್ರಿಷಾ ಪ್ರಮೋದ ನಾಯ್ಕ ಕನ್ನಡದಲ್ಲಿ 2 ಅಂಕದ ಹೆಚ್ಚಳದೊಂದಿಗೆ 617(98.72%) 9ನೇ ರ‍್ಯಾಂಕನ್ನು, ಮೇಘನಾ ಚಂದ್ರಶೇಖರ ನಾಯ್ಕ ವಿಜ್ಞಾನ ವಿಷಯದಲ್ಲಿ ೨ ಅಂಕ ಹೆಚ್ಚಳದೊಂದಿಗೆ 617(98.72%) 9ನೇ ರ‍್ಯಾಂಕನ್ನು ಗಳಿಸಿಕೊಂಡಿದ್ದಾರೆ. ದೀಪ್ತಿ ದೇವಾನಂದ ನಾಯಕ ಇಂಗ್ಲಿಷ್ 3 ಹಾಗೂ ವಿಜ್ಞಾನದಲ್ಲಿ ೧ ಅಂಕ ಹೆಚ್ಚಳದೊಂದಿಗೆ 616(98.56%) ರಾಜ್ಯಮಟ್ಟದ 10 ನೇ ರ‍್ಯಾಂಕ್ ಪಡೆದಿದ್ದಾಳೆ.

RELATED ARTICLES  ತಾಲೂಕಾ ಆಸ್ಪತ್ರೆಗೆ ಶಾಸಕ ದಿನಕರ ಶೆಟ್ಟಿ ಭೇಟಿ.

ಈ ಮೂಲಕ ಒಟ್ಟೂ 12 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಥಾನ ಪಡೆದಂತಾಗಿದೆ. ಹಾಗೂ 35 ವಿದ್ಯಾರ್ಥಿಗಳು ಮರು ಮೌಲ್ಯಮಾಪನದಲ್ಲಿ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಮುಖಾಧ್ಯಾಪಕರು, ಶಿಕ್ಷಕ ವೃಂದ ಅಭಿನಂದಿಸಿದೆ.

RELATED ARTICLES  11 ವರ್ಷದ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ವ್ಯಕ್ತಿ : ಕುಮಟಾದಲ್ಲಿ ದೂರು ದಾಖಲು.