ಸಿದ್ದಾಪುರ: ಸಿದ್ದಾಪುರ ಸಾಗರ ರಾಜ್ಯ ಹೆದ್ದಾರಿಯ ಅರೆಂದೂರು ಸಮೀಪ ಸಾರಿಗೆ ಬಸ್ ಹಾಗೂ ಪಿಕ್ಅಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಪಿಕ್ಅಪ್ ವಾಹನ ಚಾಲಕನಿಗೆ ತೀವ್ರತರನಾದ ಗಾಯಗಳಾದ ಘಟನೆ ಸಂಭವಿಸಿದೆ. ಶಿರಸಿಯಿಂದ ಸಾಗರಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಹಾಗೂ ಸಾಗರ ಕಡೆಯಿಂದ ಸಿದ್ದಾಪುರ ಕಡೆಗೆ ಪಿಕ್ಅಪ್ ವಾಹನ ಬರುತ್ತಿತ್ತು ಎನ್ನಲಾಗಿದ್ದು, ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ. ಪಿಕ್ಅಪ್ ವಾಹನ ಸಾಗರದ್ದೆಂದು ಹೇಳಲಾಗಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಗಣಪತಿ ದೇವಸ್ಥಾನದ ಗಂಟೆ, ಹುಂಡಿ, ಬೆಳ್ಳಿ ಕವಚ ಕಳವು : ಈಶ್ವರ ದೇವಾಲಯಕ್ಕೂ ಕನ್ನ ಹಾಕಿದ ಕಳ್ಳರು.