ಬೆಂಗಳೂರು : ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವಾಗ ಅನೇಕ ರೀತಿಯ ಒತ್ತಡಗಳು ಎದುರಾಗುತ್ತವೆ. ಆ ಒತ್ತಡದಲ್ಲಿ ನಾವು ಸಿಲುಕಿದರೆ ಗುರಿ ತಲುಪುವುದು ಕಷ್ಟ. ಹಾಗಾಗಿ ಒತ್ತಡಕ್ಕೆ ಒಳಗಾಗದೆ ಸಾಧಿಸಲು, ತಮ್ಮ ಪ್ರಯತ್ನದ ಕುರಿತು ಗಮನಹರಿಸಬೇಕೇ ಹೊರತು, ಅದರ ಫಲದ ಕುರಿತಲ್ಲ ಎಂದು ಶ್ವಾಸಕೋಶ ತಜ್ಞ, ರಾಜೀವ್ ಗಾಂಧಿ ಇನ್ಸ್ಟ್ಯೂಟ್ ಆಫ್ ಚೆಸ್ಟ್ ಡಿಸೀಸ್ ಮಾಜಿ ಸಂಸ್ಥಾಪಕ ನಿರ್ದೇಶಕ ಡಾ.ಶಶಿಧರ್ ಬುಗ್ಗಿ ಹೇಳಿದರು.

ಅವರು ಕೋಣನಕುಂಟೆಯ ಪ್ರೆಸ್ಟಿಜ್ ಶ್ರೀಹರಿ ಖೊಡೆ ಸೆಂಟರ್ ಲಿ ಬನ್ನೇರಘಟ್ಟ ಬೇಸ್ ಪಿಯು ಕಾಲೇಜ್ ಟ್ರಾನ್ಸೆಂಡ್ ಬೇಸ್ ಕಾಲೇಜಿನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ಧ, ‘ಆರಂಭ್-24’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

RELATED ARTICLES  ದೇವೇಗೌಡರ ನಿವಾಸದಲ್ಲಿ ಹೆಚ್.ಡಿ.ರೇವಣ್ಣ ಅರೆಸ್ಟ್..!

ಸಾಧಿಸಲು ಪ್ರಯತ್ನ ಬೇಕು‌. ಅನೇಕರು ಪ್ರಯತ್ನ ಪಡುತ್ತಾರೆ. ಆದರೆ ಅದರಲ್ಲಿ ನಿರಂತರತೆ ಇರುವುದಿಲ್ಲ. ಹಾಗಾಗಿ ಗುರಿಯನ್ನು ಅವರು ತಲುಪುವುದಿಲ್ಲ‌ ಎಂದ ಅವರು ಸಾಧನೆಯ ಜೊತೆಗೆ ಆರೋಗ್ಯದ ಕುರಿತು ಮಕ್ಕಳು ಗಮನ ಹರಿಸಬೇಕು‌. ಆರೋಗ್ಯವಿದ್ದರೆ, ಜೀವನ. ಜೀವನವಿದ್ದರೆ ಸಾಧನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ನುಡಿದರು.

ಟ್ರಾನ್ಸೆಂಡ್ ಗ್ರೂಪ್ ಆಫ್ ಇನ್ಸಿಟ್ಯೂಷನ್ ನ ಸಂಸ್ಥಾಪಕಾಧ್ಯಕ್ಷ ಸಿದ್ಧಾರ್ಥ ಕೆಟಿ ಸಾಧಿಸಲು ಇರಬೇಕಾದ ಲಕ್ಷಣಗಳನ್ನು ತಿಳಿಸಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಬೇಸ್ ಸಂಸ್ಥೆಯ ಸಿ.ಇ.ಒ ಅನಂತ‌ ಕುಲಕರ್ಣಿ ಸಭೆಯ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸಲಹೆ‌ ನೀಡಿದರು.

RELATED ARTICLES  ನಾಸಾದ ಫ಼್ಯೂಚರ್ ಇನ್ವೆಸ್ಟಿಗೇಟರ್’ ಪ್ರಶಸ್ತಿಗೆ ಆಯ್ಕೆಯಾದ ದಿನೇಶ ಹೆಗಡೆ

ಬನ್ನೇರಘಟ್ಟ ಬೇಸ್ ಕಾಲೇಜು ಪ್ರಿನ್ಸಿಪಾಲ್ ಆರ್ ಪಿ ಉಮಾಶಂಕರ್ ಸ್ವಾಗತಿಸಿದರು‌. ಟ್ರಾನ್ಸೆಂಡ್ ಕಾಲೇಜ್ ಪ್ರಿನ್ಸಿಪಾಲ್ ರವಿಕಿರಣ್ ವಂದಿಸಿದರು. ಕಾಲೇಜು ಶೈಕ್ಷಣಿಕ ಮುಖ್ಯಸ್ಥ ಆದಿಲ್ ಖಾನ್ ಪ್ರಾಸ್ತಾವಿಕ ಭಾಷಣ ಮಾಡಿದರು‌. ಫಾಝಿಲಾ ಸುಲ್ತಾನಾ ನಿರೂಪಿಸಿದರು.

ಸಿಇಟಿ, ಜೆಇಇ, ನೀಟ್ ಮುಂತಾದ ಪರೀಕ್ಷದಗಳಲ್ಲಿ ರ್ಯಾಂಕ್ ಪಡೆದ‌ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅದ್ಭುತ ನೃತ್ಯವನ್ನು ಪ್ರದರ್ಶಿಸಿದರು. ವಿದ್ಯಾರ್ಥಿ ಓಜಸ್ವಿ ಮತ್ತು ತಂಡ ಪ್ರಾರ್ಥನಾ ಗೀತೆಯನ್ನು ಹಾಡಿದರೆ, ಸ್ತುತಿ‌ ಮತ್ತು ತಂಡ ಸ್ವಾಗತನೃತ್ಯವನ್ನು ಪ್ರದರ್ಶಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ ಸೇರಿದ ನವ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಕಲಾನಿಧಿ ನೃತ್ಯ ಮಂದಿರ ತಂಡದಿಂದ ಅದ್ಭುತ ನೃತ್ಯಪ್ರದರ್ಶನ ನಡೆಯಿತು.