ಶಿರಸಿ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಟಿಎಸ್ಎಸ್ ಪ್ರಕರಣಕ್ಕೆ ಹೈಕೋರ್ಟ್ ಬಿಗ್ ಟ್ವಿಸ್ಟ್ ನೀಡಿದ್ದು, ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಿ ಡಿಆರ್ ಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಬೆಳಗಾವಿ ಜೆಆರ್ ನ್ಯಾಯಾಲಯ ಈ ಹಿಂದೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆಯ ಕೆಲ ಶೇರು ಸದಸ್ಯರು ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು. ಗುರುವಾರ ಸುದೀರ್ಘ ಮೂರೂವರೆ ಘಂಟೆಗಳ ಕಾಲ ವಾದ-ಪ್ರತಿವಾದಗಳನ್ನು ಆಲಿಸಿದ ಧಾರವಾಡದ ಉಚ್ಛ ನ್ಯಾಯಾಲಯ, ಬೆಳಗಾವಿ ಜೆಆರ್ ನೀಡಿದ್ದ ತಡೆಯಾಜ್ಞೆಗೆ ತಡೆ ನೀಡಿದ್ದು, ಆ ಮೂಲಕ ಉತ್ತರ ಕನ್ನಡ ಜಿಲ್ಲಾ ಡಿಆರ್ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ ಎಂದು ಸುದ್ದಿಯಾಗಿದೆ.
ಸಹಕಾರಿ ಸಂಘಗಳ ಕಾಯ್ದೆಯ ಕೆಲ ಕಾನೂನು ಉಲ್ಲಂಘಿಸುವುದರ ಮೂಲಕ ಅಧಿಕಾರಕ್ಕೇರಿದ್ದಾರೆ ಎಂದು ಆರೋಪಿಸಲಾಗಿರುವ ಗೋಪಾಲಕೃಷ್ಣ ವೈದ್ಯ ಮತ್ತೀಘಟ್ಟ ನೇತೃತ್ವದ ಹೊಸ ಆಡಳಿತ ಮಂಡಳಿಗೆ ಇದು ಹಿನ್ನಡೆಯಾಗಿದ್ದು, ಇದೇ ತಿಂಗಳದಲ್ಲಿಯೇ ವಿಚಾರಣಾ ದಿನಾಂಕವನ್ನು ನೀಡಿ ಹೈಕೋರ್ಟ್ ಆದೇಶ ನೀಡಿದೆ ಎನ್ನಲಾಗಿದೆ.