ಕುಮಟಾ ಸಿದ್ದಾಪುರ ಕರ್ನಾಟಕ ಸಾರಿಗೆ ನಿಗಮದ ಬಸ್ಸು ಸಿದ್ದಾಪುರ ದಿಂದ ಅಪರಾಹ್ನ 4 ಗಂಟೆಗೆ ಬಿಡುತ್ತಿದ್ದದ್ದು ದಿನಾಂಕ 17 ಜೂನ್ 2024 ರಿಂದ ಸಮಯ ಬದಲಾಯಿಸಿ 4-30 ಕ್ಕೆ ಬಿಡುತ್ತಿರುವ ಪರಿಣಾಮ ಸಿದ್ಧಾಪುರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಶಿಕ್ಷಕರು ಪ್ರತಿನಿತ್ಯ ಈ ಬಸ್ ಮೂಲಕ ಪ್ರಯಾಣಿಸುತ್ತಿದ್ದು ಅರ್ಧ ಗಂಟೆ ತಡವಾದ ಪರಿಣಾಮ ಕುಮಟಾ ತಲುಪಲು7-15 ಆಗುತ್ತಿದ್ದು ಮಹಿಳಾ ಸಿಬ್ಬಂದಿಗಳಿಗೆ ಇದರಿಂದ ಅನಾನುಕೂಲ ಆಗುತ್ತಿದ್ದು. ಇದೇ ಬಸ್ ನಂಬಿಕೊಂಡು ಅಂಕೋಲಾ ಹೊನ್ನಾವರ ಗೋಕರ್ಣವೇ ಮೊದಲಾದ ಓಡಾಡುವವರಿಗೆ ಈಗ ಮನೆಗೆ ತಲುಪಲು ರಾತ್ರಿ ಆಗುತ್ತಿರುವ ಕಾರಣ ಈ ಸಮಸ್ಯೆಗೆ ಕುಮಟಾ ಹೊನ್ನಾವರ ಶಾಸಕರಾದ ದಿನಕರ ಶೆಟ್ಟಿಯವರು ಸ್ಪಂದಿಸಿ ಈ ಮೊದಲಿನಂತೆ 4-00ಗಂಟೆಗೆ ಬಿಡಲು ನಿಗಮಕ್ಕೆ ಸೂಚಿಸಿ ನೌಕರ ವರ್ಗಕ್ಕೆ ಅನುಕೂಲ ಮಾಡಿಕೊಡುವರೆಂಬ ಭರವಸೆ ಹೊಂದಿ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲು ಸಂತ್ರಸ್ತ ನೌಕರರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ

RELATED ARTICLES  ಭಟ್ಕಳ: ಪದವಿ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿ