ಕಾರವಾರ : ಸಮುದ್ರದ ಅಲೆಗೆ ಕಸದ ರಾಶಿ ತೇಲಿ ಬರುವುದು ಸಾಮಾನ್ಯ. ಆದರೆ ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ 30ಕ್ಕೂ ಹೆಚ್ಚು ನಿರೋಧ ಪ್ಯಾಕೇಟ್‌ಗಳು ಕಂಡು ಬಂದಿದೆ. ರವೀಂದ್ರನಾಥ ಟ್ಯಾಗೋರ್ ಕಡಲತೀರದ ಫುಡ್‌ಕೋರ್ಟ್ ಹಿಂಭಾಗದ ಒಂದೇ ಸ್ಥಳದಲ್ಲಿ ಈ ನಿರೋಧ ಪ್ಯಾಕೆಟ್‌ಗಳು ಬಿದ್ದಿವೆ. ಗುಲಾಬಿ ಬಣ್ಣದ ಈ ಪ್ಯಾಕೇಟಿನ ಮೇಲೆ ಭಾರತ ಸರಕಾರ ಎಂದು ನಮೂದಿಸಿದೆ. ಸಮುದ್ರ ಅಲೆಗಳಿಂದ ದಡಕ್ಕೆ ಬಂದು ಸೇರಿರಬಹುದು ಅಥವಾ ಕಡಲ ತೀರದ ಬಳಿಯ ಮೈದಾನದಿಂದ ಹರಿದು ಬರುವ ನೀರು ಸಮುದ್ರ ಸೇರುವ ಕಡೆ ನೈಸರ್ಗಿಕವಾಗಿ ನಾಲೆಯೊಂದು ಸೃಷ್ಟಿಯಾಗಿದ್ದು ಅಲ್ಲಿಂದಲೇ ನೀರಿನೊಂದಿಗೆ ಕಸ ಸಮುದ್ರ ಸೇರುತ್ತಿದೆ.
ನಿರೋದ್ ಪ್ಯಾಕೆಟ್‌ಗಳು ಕೂಡ ಅದೇ ರೀತಿ ತೇಲಿ ಬಂದಿರಬಹುದು ಹೇಳಲಾಗುತ್ತಿದೆ. ಆದರೆ ಸರಕಾರಿ ಆಸ್ಪತ್ರೆಯಲ್ಲಿ ಸಿಗುವ ನಿರೋಧ ಪ್ಯಾಕೇಟ್ ಗಳು ಕಡಲತೀರದಲ್ಲಿ ಬಿದಿರುವುದು ಜನರಲ್ಲಿ ಅಚರಿ ಮೂಡಿಸಿದೆ.