ಕುಮಟಾ : ಇಲ್ಲಿನ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಬಿ.ಕೆ ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಧಾತ್ರಿ ಅಕಾಡೆಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿಯವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

RELATED ARTICLES  ಗೂಡಂಗಡಿಗೆ ನುಗ್ಗಿದ ಲಾರಿ - ಸಿನಿಮೀಯ ರೀತಿಯಲ್ಲಿ ಪಾರಾದ ಜನರು.

ವಾಣಿಜ್ಯ ವಿಭಾಗದ ಉಪನ್ಯಾಸಕಿ ಯೋಗ ಪಟು ಜ್ಯೋತಿ ಭಟ್ಕೆರೆಯವರು ಯೋಗಶಾಸ್ತ್ರದ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಕಾರ್ತಿಕ ಕಾರಂತ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿನಿಯರಾದ ಶ್ರೇಯಾ ಹೆಗಡೆ‌ ಮತ್ತು‌ ದಿಶಾ ಪ್ರಭು ಪ್ರಾರ್ಥಿಸಿದರು. ಸಂಜವ್ ಡಿಸೋಜ ವಂದನಾರ್ಪಣೆ ಗೈದರು.

RELATED ARTICLES  ಕುಮಟಾದ ಸೌರಭಕ್ಕೆ ಶ್ರೀಕಾಂತ ಭಟ್ಟ ಸಾರಥ್ಯ : ಅರುಣ ಹೆಗಡೆ ಪ್ರಧಾನ ಕಾರ್ಯದರ್ಶಿ

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಸಾಮೂಹಿಕ ಯೋಗಾಸನ ಕೈಗೊಂಡರು. ಪ್ರಾಚಾರ್ಯ ಕಿರಣ ಭಟ್ಟ, ಉಪಪ್ರಾಚಾರ್ಯೆ ಸುಜಾತಾ ಹೆಗಡೆ ಹಾಗೂ ಉಪನ್ಯಾಸಕ ವೃದಂದವರು ಉಪಸ್ಥಿತರಿದ್ದರು.