ಕುಮಟಾ : ಇಲ್ಲಿನ ನಾದಶ್ರೀ ಕಲಾ ಕೇಂದ್ರದಲ್ಲಿ ರೋಟರಿಯ 2024-25 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಡೆಯಿತು.  ನೂತನ ಅಧ್ಯಕ್ಷರಾಗಿ ಔಷಧೊದ್ಯಮಿ ಅತುಲ ವಿ ಕಾಮತ್‌, ಕಾರ್ಯದರ್ಶಿಯಾಗಿ ಸಿಎ.ವಿನಾಯಕ ಹೆಗಡೆ, ಖಜಾಂಜಿಯಾಗಿ ಪವನ ಡಿ ಶೆಟ್ಟಿ ಇತರ ಪದಾಧಿಕಾರಿಗಳೊಂದಿಗೆ ಪದ ಸ್ವೀಕಾರ ಮಾಡಿದರು. ಸಾಂಗ್ಲಿಯ ಪ್ರಖ್ಯಾತ ವೈದ್ಯರಾದ ಡಾ. ಮೋನಿಕಾ ಕುಳ್ಳೊಳ್ಳಿಯವರು ಪ್ರತಿಜ್ಞಾವಿಧಿ ಬೋಧಿಸಿ ಕುಮಟಾ ರೋಟರಿ ಕ್ಲಬ್ಬಿನ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸದಸ್ಯರ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ಅಸಿಸ್ಟಂಟ್‌ ಗವರ್ನರ್‌ ಸ್ಟಿಫನ್‌ ಫರ್ನಾಂಡಿಸ್‌ ರೋಟರಿಯ ಹೊಸ ವರ್ಷದ ಥೀಮನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಸಂಧ್ಯಾ ಹೆಗಡೆ ಪ್ರಾರ್ಥಿಸಿದರು, ಡಾ. ನಮೃತಾ ಹಾಗೂ ನಿಖಿಲ ಕ್ಷೇತ್ರಪಾಲ ಅತಿಥಿಗಳನ್ನು ಪರಿಚಯಿಸಿದರು. ರಾಮದಾಸ ಗುನಗಿಯವರು ವಾರ್ಷಿಕ ವರದಿಯನ್ನು ಪ್ರಸ್ತುತ ಪಡಿಸಿ ಎಲ್ಲರಿಗೂ ಧನ್ಯವಾದ ಸಮರ್ಪಣೆ ಮಾಡಿದರು. ನಿರ್ಗಮಿತ ಅಧ್ಯಕ್ಷ ಎನ್‌. ಆರ್‌. ಗಜು ತಮ್ಮ ಅಧಿಕಾರಾವಧಿಯ ಅನುಭವ ಹಂಚಿಕೊಂಡರು.

RELATED ARTICLES  ಹೆಗಡೆಯ ಶಾಂತಿಕಾಂಬಾ ದೇವಾಲಯದಲ್ಲಿ ಶರನ್ನವರಾತ್ರಿ ಸಂಪನ್ನ.

ನೂತನ ಅಧ್ಯಕ್ಷ ಅತುಲ ಕಾಮತರು ಜವಾಬ್ದಾರಿ ಸ್ವೀಕರಿಸಿ ಅಂತಾರಾಷ್ಟೀಯ ರೋಟರಿ ಸಂಸ್ಥೆ, ಕುಮಟಾ ರೋಟರಿ ಕ್ಲಬ್‌ನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ತಮ್ಮ ಯೋಜನೆಗಳ ಬಗ್ಗೆ ತಿಳಿಸಿ ಸರ್ವರ ಸಹಕಾರ ಕೋರಿದರು. ಬೆಳಗಾವಿಯ ಅಶೋಕ ನಾಯ್ಕರವರ ಆಶಯದಂತೆ ದಿ. ವಿಷ್ಣು ಕಾಮತರವರ ಸ್ಮರಣಾರ್ಥ ನೀಡಿದ ಪ್ರಪ್ರಥಮ “ಬೆಸ್ಟ ರೋಟರಿಯನ” ಏವಾರ್ಡನ್ನು ವಸಂತ ರಾವರವರು ದಂತ ತಜ್ಞ ಡಾ|| ದೀಪಕ ನಾಯಕರಿಗೆ ನೀಡಿ ಗೌರವಿಸಿದರು. ರೋಟರಿ ಕ್ಲಬ್ಬಿನವರು ತ್ಯಾಜ್ಯ ಪ್ಲಾಸ್ಟಿಕ್‌ ಬಾಟಲಿಗಳ ಶೇಖರಣಾ ಘಟಕಗಳನ್ನು ಕುಮಟಾ ಬಸ್‌ ನಿಲ್ದಾಣಕ್ಕೆ ಹಾಗೂ ರೇಲ್ವೆ ಸ್ಟೆಷನ್ನಿಗೆ ದಾನಿಗಳಾದ ಮಾತೋಶ್ರೀ ಸೌಹಾರ್ದ ಸಹಕಾರಿಯ ವಿನಯ ನಾಯಕ ಹಾಗೂ ವಿ ಮೇಕ್‌ ಇಂಡಸ್ಟ್ರಿಯ ವಿಶ್ವನಾಥ ನಾಯಕರ ಮುಖಾಂತರ ಹಸ್ತಾಂತರಿಸಿದರು.

ಹೊಸ ಸದಸ್ಯರನ್ನು ಡಾ. ಮೋನಿಕಾ ಕುಳ್ಳೊಳ್ಳಿ ರೋಟರಿಗೆ ಬರಮಾಡಿಕೊಂಡರು. ರೋಟರಿಯ ಪ್ರತಿ ವಾರ್ಷಿಕ ಈಜು ಸ್ಪರ್ಧೆಯ ಬಗ್ಗೆ ಜಯವಿಠ್ಠಲ ಕುಬಾಲ, ಹೊಸ ಸದಸ್ಯರ ಮಾಹಿತಿ ಕಾರ್ಯಗಾರದ ಬಗ್ಗೆ ಡಾ. ನಮೃತಾ ಶ್ಯಾನಭಾಗ, “ಜನನಿಗೆ ವೃಕ್ಷ ಗೌರವ” ಅಭಿಯಾನದ ಬಗ್ಗೆ ಸುಜಾತಾ ಕಾಮತ್‌ ಹಾಗೂ ಕೈಬರಹ ಸುಧಾರಣಾ ತರಬೇತಿ ಬಗ್ಗೆ ಜೆ.ಎಸ್.ಹೆಗಡೆಯವರು ಮಾಹಿತಿ ನೀಡಿ ಶಿಕ್ಷಕಿ ಸುಮತಿ ನಾಯ್ಕರಿಗೆ ಗೌರವಿಸಿದರು.

RELATED ARTICLES  ರಸಾಯನಶಾಸ್ತ್ರ ಪುನಶ್ಚೇತನ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಪನ್ನ

           ಅಂಕೋಲಾ,ಗೋಕರ್ಣ,ಕಾರವಾರ,ಹೊನ್ನಾವರ ರೋಟರಿ ಸದಸ್ಯರು, ಮಾಜಿ ಜಿಲ್ಲಾ ರೋಟರಿ ಗವರ್ನರ ಗುರುದತ್ ಭಕ್ತಾ ಹಾಗೂ ವಿವಿಧ ಸಂಘಗಳ ಪದಾಧಿಕಾರಿಗಳು, ಧಾರ್ಮಿಕ ಮುಖಂಡರು, ಊರಿನ ಗಣ್ಯ ನಾಗರಿಕರು ಉಪಸ್ಥಿತರಿದ್ದು ನೂತನ ರೋಟರಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಜಗತ್‌ ಫಾರ್ಮರವರು ತಮ್ಮ ಉತ್ಕ್ರಷ್ಟ ಪಾನೀಯವಾದ “ಮಲ್ಮೀನಾ”ವನ್ನು ಹಾಗೂ ಸನರೈಸ್‌ ಫುಡ್ಸನವರು ರುಚಿಕರ ಬಿಸ್ಕಿಟಗಳನ್ನು ವಿತರಿಸಿದರು.

ವಿನಾಯಕ ಹೆಗಡೆ ವಂದಿಸಿದರು ಡಾ. ಶ್ರೀದೇವಿ ಭಟ್ ಹಾಗೂ ಶ್ರೇಯಾ ರಾವ್‌ ಸುಂದರವಾಗಿ ಕಾರ್ಯಕ್ರಮ ನಿರ್ವಹಿಸಿದರು.