ಮುಜಂಗಾವು :ಮುಜುಂಗಾವಿನಲ್ಲಿ ಕಾರ್ಯವೆಸಗುತ್ತಿರುವ ಶ್ರೀ ಭಾರತೀ ಸ್ವಾಸ್ಥ್ಯ ಮಂದಿರದ ನವೀಕರಣ ಕಾರ್ಯ ನಿರ್ವಹಿಸಲಾಗಿ ಪುನಃ ಪ್ರವೇಶೋತ್ಸವ 15.10.2017 ಬೆಳಗ್ಗೆ ಜರಗಿತು. ಬೆಳಗ್ಗೆ ಗಣಪತಿ ಹವನವನ್ನು ವೇದಮೂರ್ತಿ ಕೋಣಮ್ಮೆ ಮಹಾದೇವ ಭಟ್ಟರು ನಡೆಸಿ‌ಕೊಟ್ಟು – ಶ್ರೀ ಗುರುಗಳು ಹರಸಿ ಮಂತ್ರಾಕ್ಷತೆಯನ್ನು ಕೊಟ್ಟ ಯಾವ ಕಾರ್ಯವಾದರೂ ಸುಸೂತ್ರವಾಗಿ ನಡೆಯುವುದೆಂದೂ ಸ್ವಾಸ್ಥ್ಯ ಮಂದಿರಕ್ಕೆ ಬಂದ ರೋಗಿಗಳೆಲ್ಲಾ ಗುಣ ಮುಖರಾಗಿ ಸ್ವಾಸ್ಥ್ಯ ಗಳಿಸಲಿ, ಮಂದಿರದ ಕೀರ್ತಿ‌ ನಾಲ್ದೆಸೆಗೂ ಹರಡಲಿ – ಎಂಬುದಾಗಿ ಪ್ರಾರ್ಥಿಸಿ ಆಶೀರ್ವದಿಸಿದರು. ಕ್ರಿಯಾ ದಕ್ಷಿಣೆಯನ್ನು ಚಿಕಿತ್ಸಾಲಯಕ್ಕೆ ದೇಣಿಗೆಯಾಗಿ ನೀಡಿ ಆಶೀರ್ವದಿಸಿದರು.

RELATED ARTICLES  ಪ್ರತ್ಯೇಕ ಧರ್ಮ: ಪರಿಣತರ ಸಮಿತಿ ವಿಸರ್ಜನೆಗೆ ಆಗ್ರಹ

ಮುಳ್ಳೇರ್ಯ ಮಂಡಲ ಉಪಾಧ್ಯಕ್ಷ ಕುಮಾರ ಪೈಸಾರಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಂಡಲ ಸಹಾಯ ವಿಭಾಗ ಪ್ರಮುಖ ಡಾ|ಡಿ.ಪಿ.ಭಟ್ ಹಾಗೂ ಕುಂಬಳೆ ವಲಯದ ಅಧ್ಯಕ್ಷ ಕಾರ್ಯದರ್ಶಿ ಯವರೂ ಮಾತೃ ವಿಭಾಗ ಪ್ರಧಾನೆಯವರೂ ಹಾಜರಿದ್ದರು. ಆಡಳಿತಾ ಮಂಡಳಿಯ ಕೋಶಾಧಿಕಾರಿ ಶ್ರೀ ಯಸ್.ಯನ್.ಶರ್ಮ ಅವರು ಬೇಕಾದ ವ್ಯವಸ್ಥೆಗಳನ್ನು‌ಮಾಡಿದರು. ಈ ಸಂದರ್ಭದಲ್ಲಿ ಕುಂಬಳೆ ವಲಯದ ಶಿಷ್ಯಬಿಂದುಗಳು, ಡಾ|ಕಾರ್ತಿಕ್, ಶ್ರೀ ಭಾರತೀ ವಿದ್ಯಾಲಯ ಮುಜುಂಗಾವಿನ ಪ್ರಮುಖ ಶ್ಯಾಮ್ ಭಟ್ ದರ್ಬೆ ಮಾರ್ಗ ಇವರು ಉಪಸ್ತಿತರಿದ್ದರು.

RELATED ARTICLES  ನಿಮ್ಮ ರಾಶಿಯ ಪ್ರಕಾರ ನಿಮ್ಮ ಇಂದಿನ ದಿನ ಹೇಗಿರಲಿದೆ ಗೊತ್ತಾ? ದಿನಾಂಕ 20-10-2018 ರ ರಾಶಿ ಭವಿಷ್ಯ ಇಲ್ಲಿದೆ.

ಆಡಳಿತ ಸಮಿತಿಯ ಕಾರ್ಯದರ್ಶಿ ಇ.ಕೃಷ್ಣ ಮೋಹನ ಭಟ್ಟರು ಮುಂದಿನ ವ್ಯವಸ್ಥೆಗಳ ಬಗ್ಗೆ ಮೇನೆಜರ್ ಗಣೇಶ್ ಪ್ರಸಾದರಿಗೆ ಅಗತ್ಯ ಸಲಹೆ ಸೂಚನೆಗಳನ್ನಿತ್ತರು.