ಕುಮಟಾ : ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಅಬ್ಬರದ ಮಳೆ ಸುರಿಯುತಿದ್ದು ಕುಮಟಾ , ಶಿರಸಿ ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿರುವ ಪರಿಣಾಮ ರಾಷ್ಟ್ರೀಯ ಹೆದ್ದಾರಿ 766E ನ ಕುಮಟಾ ಶಿರಸಿ ಮಾರ್ಗದಲ್ಲಿ ಕತಗಾಲಿನ ಬಳಿ ಚಂಡಿಕಾ ಹೊಳೆಯೊಂದು ತುಂಬಿ ಸಂಚಾರ ಬಂದ್ ಆಗಿದೆ.
ಪ್ರತಿ ವರ್ಷದಂತೆ ಚಂಡಿಕಾ ನದಿಯ ನೀರು ರಸ್ತೆಗೆ ಬರುವ ಕಾರಣದಿಂದ ಕತಗಾಲ್ ಭಾಗದಲ್ಲಿ ಸಂಪೂರ್ಣ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.
ಇನ್ನು ಇದೇ ಮಾರ್ಗದಲ್ಲಿ ಸಂಚರಿಸುತ್ತಿರುವ ಶಿವಕುಮಾರ್ ಬಸ್ ನೀರಿನ ಮದ್ಯೆ ಸಿಲುಕಿಕೊಂಡಿದ್ದು ಪ್ರಯಾಣಿಕರು ಬಚಾವ್ ಆಗಿದ್ದಾರೆ. ಇನ್ನು ಕುಮಟಾ ಭಾಗದ ಬರ್ಗಿಯಲ್ಲಿ ಮಳೆಯಿಂದಾಗಿ ಗುಡ್ಡದಿಂದ ಹರಿದುಬಂದ ನೀರು ರಾಷ್ಟ್ರೀಯ ಹೆದ್ದಾರಿ 66 ಪಕ್ಕದಲ್ಲಿರುವ ತಗ್ಗು ಪ್ರದೇಶಕ್ಕೆ ನೀರು ಹೊಕ್ಕಿದ್ದು ಬರ್ಗಿ ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ.