ಹೊನ್ನಾವರ : ತಾಲೂಕಿನಲ್ಲಿ ನಿನ್ನೆಯಿಂದ ಭಾರಿ ಮಳೆ ಬೀಳುತ್ತಿದ್ದು ಹೊನ್ನಾವರ ತಾಲ್ಲೂಕಿನ ಮಾಗೋಡು ಪಂಚಾಯತ ವ್ಯಾಪ್ತಿಯ ಬಾಳೆಮೆಟ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಶಾಲೆಗೆ ಆಗಿರುವ ಅನಾಹುತವನ್ನು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದೆ ರೀತಿ ಮಳೆ ಮುಂದುವರಿದರೆ ಶಾಲೆ ನಡೆಸಲು ತೊಂದರೆಯಾಗುತ್ತದೆ. ಈ ಬಗ್ಗೆ ಪಂಚಾಯತ್ ಅಧ್ಯಕ್ಷ ಶಿವರಾಮ ಹೆಗಡೆ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆಂದು ವರದಿಯಾಗಿದೆ.

RELATED ARTICLES  ಆಕಳು ತಪ್ಪಿಸಲು ಹೋಗಿ ಬಿದ್ದು ಬೈಕ್ ಸವಾರ ಸಾವು.