ಕುಮಟಾ : ನಿರಂತರ ಮಳೆ-ಗಾಳಿಗೆ ವಾಸ್ತವ್ಯದ ಮನೆ ನೆಲಸಮವಾಗಿ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ತಾಲೂಕಿನ ವಾಲಗಳ್ಳಿ ಗ್ರಾ.ಪಂ ವ್ಯಾಪ್ತಿಯ ಕೋಟೆಗುಡ್ಡ ಎಂಬಲ್ಲಿ ನಡೆದಿದೆ.

ಕೋಟೆಗುಡ್ಡದ ರಘು ಹಮ್ಮು ಮುಕ್ರಿ ಅವರಿಗೆ ಸೇರಿದ ಮನೆ ಸಂಪೂರ್ಣವಾಗಿ ನೆಲ ಸಮವಾಗಿದೆ. ನಿರಂತರವಾಗಿ ಮಳೆ ಸುರಿದ ಪರಿಣಾಮ ಮನೆ ಕುಸಿತವಾಗಿದ್ದು, ಮನೆಯಲ್ಲಿದ್ದ ದಿನಸಿ ಸಾಮಗ್ರಿ,ಬಟ್ಟೆ,ಪಾತ್ರೆ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಮಣ್ಣಿನ ಅಡಿಯಲ್ಲಿ ‌ಸಿಲುಕಿಕೊಂಡಿದೆ. ಮನೆಯ ಗೋಡೆ‌ ಕುಸಿದು ಬಿಳುವ ಸಮಯದಲ್ಲಿ ಮನೆಯೊಳಗೆ ಯಾರು ಇಲ್ಲದೆ‌ ಇರುವುದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

RELATED ARTICLES  ಕಾರ್ಯನಿರತ ಪತ್ರಕರ್ತರ ಸಂಘ ಕುಮಟಾದ ಆಶ್ರಯದಲ್ಲಿ ಉಪನ್ಯಾಸ ಕಾರ್ಯಕ್ರಮ ಸಂಪನ್ನ.

ಇನ್ನೂ ರಘು ಮುಕ್ರಿ ಅವರ ಮನೆಗೆ ತಾಗಿಕೊಂಡಿದ್ದ, ವಿಷ್ಣು ಹಮ್ಮು ಮುಕ್ರಿ ಅವರ ಮನೆಯ ಗೋಡೆ ಕುಸಿದು ಹಾನಿ ಉಂಟಾಗಿದೆ. ಮನೆ ಕಳೆದುಕೊಂಡ ಕುಟುಂಬಸ್ಥರಿಗೆ ಕೋಟೆಗುಡ್ಡದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ನೀಡಲಾಗಿದೆ. ಸ್ಥಳಕ್ಕೆ ಗ್ರಾ.ಪಂ ಅಧ್ಯಕ್ಷೆ ಶಾಂತಿ ಮಡಿವಾಳ, ಕಂದಾಯ ಅಧಿಕಾರಿಗಳು, ನೋಡಲ್ ಅಧಿಕಾರಿ ವಿನಾಯಕ ವೈದ್ಯ ಭೇಟಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಸಂಸದ ಅನಂತಕುಮಾರ ಹೆಗಡೆ ವಿರುದ್ದ ಪ್ರಕರಣ ದಾಖಲು.

ಸರ್ಕಾರದ ವಸತಿ ಸೌಕರ್ಯ ಪಡೆಯುಲಾಗದೇ ಸಂಕಷ್ಟದಲ್ಲಿ ಕಾಲ ಕಳೆಯುತ್ತಿರುವ ಕುಟುಂಬ ಇದೀಗ ಮನೆ ಕಳೆದುಕೊಂಡು ಮತ್ತಷ್ಟು ಆತಂಕಕ್ಕೆ ಒಳಗಾಗಿದೆ. ಈ ಬಡ ಕುಟುಂಬಕ್ಕೆ‌ ಆದಷ್ಟು ಶೀಘ್ರದಲ್ಲಿ ಪರಿಹಾರ‌ ನೀಡಬೇಕಿದೆ.