ಶಿರಸಿ: ತಾಲೂಕಿನ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ರಾಗಿಹೊಸಳ್ಳಿ ಸಮೀಪದಲ್ಲಿ ಮಂಗಳವಾರ ನಸುಕಿನಲ್ಲಿ ಧರೆ ಕುಸಿದ ಪರಿಣಾಮ ರಸ್ತೆ ಸಂಚಾರ ಬಂದಾಗಿದೆ. ಋಹತ್ ಪ್ರಮಾಣದಲ್ಲಿ ಮಣ್ಣು ರಸ್ತೆ ಮೇಲೆ ಕುಸಿದ ಪರಿಣಾಮ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಕೆಲಸದಲ್ಲಿ ನಿರತವಾಗಿರುವ ಅಧಿಕಾರಿಗಳ ಮಾಹಿತಿಯಂತೆ ಬೆಳಿಗ್ಗೆ 11 ಗಂಟೆಯೊಳಗೆ ರಸ್ತೆ ಸಂಚಾರಕ್ಕೆ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಕಳೆದ 3 ವರ್ಷಗಳ ಹಿಂದೆಯೂ ಇದೇ ಸ್ಥಳದಲ್ಲಿ ಧರೆ ಕುಸಿದ ವರದಿ ದೊರೆತಿದೆ. ಕತಗಾಲಿನಲ್ಲಿಯೂ ಸಹ ರಸ್ತೆಯಲ್ಲಿ ನೀರು ತುಂಬಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ.

RELATED ARTICLES  ಗುಡ್ಡ ಕುಸಿತ : ಕುಮಟಾ ಸಿದ್ದಾಪುರ ರಸ್ತೆ ಬಂದ್..!