ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ
ಮಾನಸ ಗಂಗೋತ್ರಿಯ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡುವಂತೆ ವಿಶ್ವವಿದ್ಯಾಲಯವನ್ನು ಆಗ್ರಹಿಸಲು
ಮಾನ್ಯ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಉಪನ್ಯಾಸಕ ಕಾಗಾಲ ಚಿದಾನಂದ ಭಂಡಾರಿಯವರು ದೂರವಾಣಿ ಮುಖಾಂತರ ಸಂಪರ್ಕಿಸಿ ವಿನಂತಿಸಿಕೊಂಡಿದ್ದರು.

ತಕ್ಷಣವೇ ಸಂಬಂಧಿಸಿದ ಅವರು ವ್ಯವಸ್ಥೆಯ ಬಳಿ ಮಾತನಾಡುವುದಾಗಿ ತಿಳಿಸಿ, ನಾಳೆ ಶನಿವಾರ ದಿನಾಂಕ 20/0724ಮತ್ತು ಸೋಮವಾರ  ದಿನಾಂಕ 22/07/24ಎರಡು ದಿನ ಪರೀಕ್ಷೆಗಳು ನಿಗದಿ ಆಗಿದ್ದು
ಉತ್ತರಕನ್ನಡ  ಜಿಲ್ಲೆಯ ಶಿರಸಿ ಹಾಗು ಕಾರವಾರ ಪರೀಕ್ಷಾ ಕೇಂದ್ರ ಆಗಿದ್ದು ಈ ಎರಡೂ ಕೇಂದ್ರಗಳಿಗೆ ಸಂಪರ್ಕಿಸುವ ರಸ್ತೆಗಳು ಪ್ರಾಕೃತಿಕ ವಿಕೋಪಕ್ಕೆ ಶಿಖಾರಿ ಆಗಿರುವುದರಿಂದ ಪರೀಕ್ಷಾರ್ಥಿಗಳಿಗೆ ಪರೀಕ್ಷಾಕೇಂದ್ರ ತಲುಪುವುದೇ ಹರಸಾಹಸವಾಗಿರುವ ಕಾರಣ ಈಗಾಗಲೇ ಕೆಲ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಲಾಗದೆ ಅಸಹಾಯಕರಾಗಿ ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ಜಿಲ್ಲೆಯ ಪದವೀಧರ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರಾರ್ಥವಾಗಿ ಪರಿಸ್ಥಿತಿ ತಹಬದಿಗೆ ಬರುವ ತನಕ ಸಂಬಧಿಸಿದ ಪರೀಕ್ಷೆಗಳನ್ನು ಮುಂದುಡೂವಂತೆ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES  ಬೀದಿ ನಾಯಿಗಳ ಭಯದಿಂದ ತಪ್ಪಿಸಿಕೊಳ್ಳಲು ನಾಯಿಗಳನ್ನೇ ಅಟ್ಟಾಡಿಸಿ ಹೊಡೆದ ಭಟ್ಕಳದ ಗ್ರಾಮಸ್ಥರು!