ಶಿರಸಿ: ಶಿರಸಿ ಜಿಲ್ಲೆ ರಚನೆ ಆಗಲು ಹಾಗೂ ಶಿರಸಿ ಜಿಲ್ಲಾ ಸಮಿತಿಗೆ ಸಹಕಾರ ನೀಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರಿಗೆ ಶಿರಸಿ ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರು ಮನವಿ ನೀಡಿದರು.
ಇಲ್ಲಿನ ಕರ್ಜಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಂಜಾರ ಬುಡಕಟ್ಟು ಸಮಾವೇಶದಲ್ಲಿ ಭಾಗವಹಿಸಿದ್ದ ದೇವೆಗೌಡರಿಗೆ ಹೋರಾಟ ಪ್ರಮುಖರು ಮನವಿ ಸಲ್ಲಿಸಿ, ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡರು.
ಮೂರು ನಾಲ್ಕು ತಾಲೂಕುಗಳುಳ್ಳ ಜಿಲ್ಲೆಗಳು ಕರ್ನಾಟಕದಲ್ಲಿವೆ. ಇದೇ ಸಂದರ್ಭದಲ್ಲಿ ದಾಂಡೇಲಿ, ಗೋಕರ್ಣ ಹಾಗೂ ಬನವಾಸಿ ತಾಲೂಕುಗಳನ್ನು ಮಾಡಿದಲ್ಲಿ ಒಟ್ಟೂ 14 ತಾಲೂಕುಗಳಾಗುತ್ತದೆ. ಆಗ ಶಿರಸಿಗೆ 8 ತಾಲೂಕು ಹಾಗೂ ಕಾರವಾರಕ್ಕೆ 6 ತಾಲೂಕುಗಳು ಸೇರಿಸಿ ಎರಡು ಜಿಲ್ಲೆಗಳ ಅಸ್ತಿತ್ವ ಕರ್ನಾಟಕದ ಈ ಭಾಗದ ಅಭಿವೃದ್ಧಿಗೆ ಹೊಸ ಆಯಾಮ ಸಿಗುತ್ತದೆ. ಆದ್ದರಿಂದ ಜಿಲ್ಲಾ ಕೇಂದ್ರವಾಗಿರುವ ಶಿರಸಿ ಜಿಲ್ಲೆಯಾಗಿಸುವಲ್ಲಿ ತಾವು ಸಹಕರಿಸಿ ನಿರ್ಣಯ ತೆಗೆದುಕೊಳ್ಳಬೇಕಾಗಿ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪ್ರಮುಖರಾದ ಉಪೆಂದ್ರ ಪೈ, ಎಮ್.ಎಮ್.ಭಟ್, ಅಮೋದ್ ಶಿರಸಿಕರ್ ಮುಂತಾದವರು ಹಾಜಾರಿದ್ದರು.