Home Uttara Kannada ಹೊನ್ನಾವರದ ಉಪ್ಪೋಣಿ, ಬಳ್ಕೂರಿನಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಶಾಖೆಗಳು ಪ್ರಾರಂಭ.

ಹೊನ್ನಾವರದ ಉಪ್ಪೋಣಿ, ಬಳ್ಕೂರಿನಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಶಾಖೆಗಳು ಪ್ರಾರಂಭ.

ಹೊನ್ನಾವರ: ತಾಲೂಕಿನ ಉಪ್ಪೋಣಿಯಲ್ಲಿ ಕೆ.ಡಿ.ಸಿ.ಸಿ ಬ್ಯಾಂಕ್ ಶಿರಸಿಯ 66 ನೇ ಶಾಖೆಗೆ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾದ ಮೋಹನ್ ದಾಸ್ ನಾಯಕ್ ವಿದ್ಯುಕ್ತವಾಗಿ ಚಾಲನೆ ನೀಡಿದರು.

ನಂತರ ಮಾತನಾಡಿ ಕೆಡಿಸಿಸಿ ಬ್ಯಾಂಕ್ ರೈತರಿಗೆ, ಕೂಲಿಕಾರ್ಮಿಕರಿಗೆ, ಬಡ, ಮಧ್ಯಮ ವರ್ಗದವರಿಗೆ ಸಾಲಸೌಲಭ್ಯ ನೀಡುತ್ತಾ ಬಂದಿದೆ. ಜಿಲ್ಲೆಯ ಸಹಕಾರಿ ರಂಗದಲ್ಲಿ ಕ್ರಾಂತಿ ಮೂಡಿಸಿದೆ. ಸಾಗುವಳಿ ಭೂಮಿಕಾರರ ನೆಲೆಯಾದ ಈ ಜಿಲ್ಲೆಯಲ್ಲಿ 21 ಹೊಸ ಬ್ರ್ಯಾಂಚ್ ಗಳಿಗೆ ಅನುಮತಿ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಬ್ಯಾಂಕ್ ಮತ್ತಷ್ಟು ಎಳ್ಗೆ ಹೊಂದಿ ಇನ್ನಷ್ಟು ಸೇವೆ ನೀಡಲು ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

IMG 20240731 WA0013

ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, 104 ವರ್ಷಗಳ ಇತಿಹಾಸವುಳ್ಳ ಜಿಲ್ಲೆಯ ಜನತೆಯ ಮನೆಮಾತಾಗಿರುವ ಕೆಡಿಸಿಸಿ ಬ್ಯಾಂಕ್ ನಿರಂತರವಾಗಿ ಲಾಭಗಳಿಸುತ್ತಾ ಸಹಕಾರಿ ಕ್ಷೇತ್ರದಲ್ಲಿ ಇತಿಹಾಸ ರಚಿಸಿದೆ ಎನ್ನುವುದಕ್ಕೆ ಹೆಮ್ಮೆ ಎನಿಸುತ್ತಿದೆ. ರಾಷ್ಟ್ರೀಕೃತ ಬ್ಯಾಂಕನಲ್ಲಿ ಸಿಬ್ಬಂದಿಗಳಿಂದ ಸರಿಯಾದ ಸಹಕಾರ ಸಿಗುವುದಿಲ್ಲ. ಹಲವು ಅಧಿಕಾರಿಗಳಿಗೆ ಸ್ಥಳಿಯ ಭಾಷೆಯೇ ಬರುವುದಿಲ್ಲ. ಹಾಗಾಗಿ ಗ್ರಾಹಕರು ತುಂಬಾ ಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಲಿದೆ. ಆದರೆ ನಮ್ಮ ಬ್ಯಾಂಕಿನಲ್ಲಿ ಸ್ಥಳೀಯರೇ ಹೆಚ್ಚಿನ ಸಿಬ್ಬಂದಿಗಳಿದ್ದು, ಅವರಿಗೆ ಗ್ರಾಹಕರ ಕಷ್ಟ ಸುಖಗಳ ಅರಿವಿದ್ದು ಸದಾ ಸಹಕಾರ ನೀಡುತ್ತಾರೆ. ಅತಿಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರಿಗೆ ತ್ವರಿತಗತಿಯ ಸೇವೆ ನೀಡಲು ಸಿದ್ದರಿದ್ದೇವೆ ಎಂದರು.

ಮಾಜಿ ನಿರ್ದೆಶಕರಾದ ಪಿ.ಎಸ್ ಭಟ್ ಉಪ್ಪೂಣಿ, ಮಾಜಿ ಜಿ.ಪಂ.ಅಧ್ಯಕ್ಷ ಆರ್.ಎಸ್. ರಾಯ್ಕರ್, ಪಿ.ಎಲ್.ಡಿ ಅಧ್ಯಕ್ಷ ವಿ.ಎನ್.ಭಟ್ ಕೆಡಿಸಿಸಿ ಬ್ಯಾಂಕ್ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಕೆಡಿಸಿಸಿ ಬ್ಯಾಂಕ್ ಶಿರಸಿ ಪ್ರಧಾನ ಶಾಖೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕು ನಡೆದು ಬಂದಹಾದಿ ಹಾಗೂ ಸಾಧನೆ ಕುರಿತು ವಿವರಿಸಿದರು.ಇಂದು ಕೆಡಿಸಿಸಿ ಬ್ಯಾಂಕ್ ನಾಲ್ಕುಸಾವಿರ ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಗ್ರಾಹಕರು ಸಾಲ ಪಡೆದು ತಮ್ಮ ಎಳ್ಗೆ ಜತೆ ಬ್ಯಾಂಕಿನ ಎಳ್ಗೆಗು ಕಾರಣಿಭೂತವಾಗಿದ್ದಾರೆ ಎಂದರು.

ವೇದಿಕೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿಶ್ವನಾಥ ಭಟ್ , ಕಟ್ಟಡ ಮಾಲೀಕರಾದ ಡಾ.ಎಮ್.ಎಸ್ ಪಂಡಿತ, ಗ್ರಾ.ಪಂ. ಅಧ್ಯಕ್ಷೆ ಸುನೀತಾ ಹೆಗಡೆ, ಗಣೇಶ ನಾಯ್ಕ, ಮಂಜುನಾಥ ನಾಯ್ಕ, ಯೊಗೀಶ ರಾಯ್ಕರ್, ಟಿ.ಎನ್.ಭಟ್, ಪಿ.ಟಿ ನಾಯ್ಕ, ವಿನೋದ ನಾಯ್ಕ ಮಾವಿನಹೊಳೆ ಮತ್ತಿತರಿದ್ದರು. ಉಪ್ಪೋಣಿ ಶಾಖೆಯ ಪ್ರಭಾರ ಮ್ಯಾನೇಜರ್ ನಾಗರತ್ನ ಭಟ್ ಸ್ವಾಗತಿಸಿದರು. ಅರೇಅಂಗಡಿ ಶಾಖೆಯ ಮ್ಯಾನೇಜರ್ ನಾಗರಾಜ ಕಾಸ್ಕಂಡ ನಿರ್ವಹಿಸಿದರು. ಗಿರೀಶ ಮಾಡಗೇರಿ ವಂದಿಸಿದರು. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೂತನ ಶಾಖೆ ಉದ್ಘಾಟನೆ ನಡೆಸಲಾಯಿತು.

Show quoted text