ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿ ಕುಮಟಾದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಮಾದೇವಿ ಎಮ್ ಗೌಡರವರು 39 ವರ್ಷ ಸೇವೆ ಸಲ್ಲಿಸಿ 31-07-2024 ರಂದು ಸೇವಾ ನಿವೃತ್ತಿ ಹೊಂದಿದ್ದು ಈ ಸಂಧರ್ಭದಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಆನಂದು ಗಾಂವಕರ್, ಶಿಕ್ಷಕರ ಸಂಘದ ಕುಮಟಾ ತಾಲೂಕಾ ಅಧ್ಯಕ್ಷರೂ ರಾಜ್ಯ ಸರ್ಕಾರಿ ನೌಕರರ ಸಂಘ ಕುಮಟಾದ ಗೌರವಾಧ್ಯಕ್ಷರೂ ಆದ ರವೀಂದ್ರ ಭಟ್ಟ ಸೂರಿ, ವ್ಯವಸ್ಥಾಪಕರಾದ ವಿನಾಯಕ ಜಿ ನಾಯ್ಕ್ , ವಸತಿ ನಿಲಯದ ಅಧೀಕ್ಷಕರಾದ ಸತೀಶ ಭಟ್ಟ, ರಾಜ್ಯ ಸರ್ಕಾರಿ ನೌಕರರ ಸಂಘ ಕುಮಟಾದ ಪ್ರಭಾರಿ ಅಧ್ಯಕ್ಷರಾದ ಮಂಜುನಾಥ. ಟಿ. ನಾಯ್ಕ ಕುಮಟಾ ಖಜಾನೆಯ ವಿನಾಯಕ ಭಂಡಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ ಭಂಡಾರಿ, ಕೋಶಾಧ್ಯಕ್ಷರಾದ ಪ್ರಹ್ಲಾದ ಮಾಸ್ಕೇರಿ ಉಪಸ್ಥಿತರಿದ್ದರು.

RELATED ARTICLES  ಗೋಕರ್ಣದಲ್ಲಿ ಗಾಂಜಾ ಮಾರಾಟ : 80 ಸಾವಿರ ಮೌಲ್ಯದ ಗಾಂಜಾ ವಶ