ಭಾರತೀಯ ಹವಮಾನ ಇಲಾಖೆ (IMD), ಬೆಂಗಳೂರು ರವರು ಉತ್ತರ ಕನ್ನಡ ಜಿಲ್ಲೆಯಲ್ಲಿ ದಿನಾಂಕ: 02.08.2024 ರ ಮಧ್ಯಾಹ್ನ 1:00 ಗಂಟೆಯಿಂದ ದಿನಾಂಕ: 03-08-2024 ರ ಬೆಳಿಗ್ಗೆ 08-30 ರವರೆಗೆ ಭಾರಿ ಮಳೆಯಾಗುವ ಸೂಚನೆ (ಆರೇಂಜ್ ಅಲರ್ಟ್)ನ್ನು ಉಲ್ಲೇಖ (1) ರನ್ವಯ ನೀಡಿರುತ್ತದೆ. ಜಿಲ್ಲೆಯ ಉಪ ನಿರ್ದೇಶಕರು ಶಾ.ಶಿ.ಇ ಕಾರವಾರ/ಶಿರಸಿ ಹಾಗೂ ಸಹಾಯ ಆಯುಕ್ತರರು ಹಳ್ಳಕೊಳ್ಳಗಳು ಭಾರಿ ಮಳೆಯಿಂದ ತುಂಬಿದ್ದು ಶಾಲಾ ಮಕ್ಕಳಿಗೆ ಶಾಲೆಗೆ ತೆರಳಲು ಅನಾನುಕೂಲವಾಗುವುದರ ಜೊತೆಗೆ ಅವಘಡಗಳು ಸಂಭವಿಸುವ ಸಾಧ್ಯತೆಯ ಬಗ್ಗೆ ವಿವರಿಸಿರುತ್ತಾರೆ.

RELATED ARTICLES  ಚಿತ್ರಕಲೆಯಲ್ಲಿ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಸಾಧನೆ.

ಜಿಲ್ಲೆಯ ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಶಾಲಾ ಮಕ್ಕಳ ಹಿತದೃಷ್ಟಿಯಿಂದ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಕಲಂ 34(ಎಮ್) ರಡಿ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ರವರಿಗೆ ಪ್ರದತ್ತವಾದ ಅಧಿಕಾರದ ಮೇರೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಜೋಯಿಡಾ, ದಾಂಡೇಲಿ, ಶಿರಸಿ, ಸಿದ್ದಾಪುರ ತಾಲ್ಲೂಕಿನಾದ್ಯಂತ ಎಲ್ಲಾ ಸರ್ಕಾರಿ, ಸರ್ಕಾರಿ ಅನುದಾನಿತ, ಅನುದಾನರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ, ಪದವಿ ಪೂರ್ವ, ಐ.ಟಿ.ಐ ಹಾಗೂ ಡಿಪ್ಲೋಮಾ ಕಾಲೇಜುಗಳಿಗೆ ದಿನಾಂಕ: 03-08-2024 ರಂದು ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

RELATED ARTICLES  ಸುಟ್ಟು ಕರಕಲಾಯ್ತು ಬೋಟ್..!