ಉತ್ತರಕನ್ನಡ ಜಿಲ್ಲಾ ಭಂಡಾರಿ ಸಮಾಜೋನ್ನತಿ ಸಂಘ ಶಾಖೆ ಕುಮಟಾದ ವತಿಯಿಂದ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನದಂದು ಸಂಪ್ರದಾಯದಂತೆ ಕುಮಟಾ ತಾಲೂಕಿನ ಪ್ರತಿಭಾವಂತ ಪ್ರೌಢಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಗೆ ಕೊಡಮಾಡುವ ಶಿಷ್ಯ ವೇತನಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯ ಪ್ರತಿಯು ದಿ ಯೋಧಾ ಕೋ ಆಪರೇಟಿವ್ ಸೊಸೈಟಿ ಕುಮಟಾದ ಕಛೇರಿಯಲ್ಲಿ ಲಭ್ಯವಿದ್ದು ಅದನ್ನು ಪಡೆದು ಅವಶ್ಯಕ ಮಾಹಿತಿಯನ್ನು ಭರ್ತಿ ಮಾಡಿ ವಿದ್ಯಾರ್ಥಿಗಳು ತಾವು ವ್ಯಾಸಂಗ ಮಾಡುತ್ತಿರುವ ಶಾಲೆಯ/ ಕಾಲೇಜಿನ ಮುಖ್ಯಸ್ಥರ ಸಹಿ ಪಡೆದು ಅಂಕ ಪಟ್ಟಿಯ ನಕಲು ಪ್ರತಿಯೊಂದಿಗೆ ಅರ್ಜಿಯನ್ನು 31 ಅಗಷ್ಟ 2024 ರ ಒಳಗೆ ಯೋಧಾ ಕೋ ಆಪರೇಟಿವ್ ಸೊಸೈಟಿ ಕುಮಟಾದ ಕಚೇರಿಗೆ ತಲುಪಿಸುವುದು.

RELATED ARTICLES  ಯಕ್ಷಗಾನ ತರಬೇತಿ 'ಯಕ್ಷಸಂಸ್ಕಾರ' ಇಂದು ಉದ್ಘಾಟನೆ


ಕಳೆದ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿ ಪಾಸಾದ ಮೊದಲ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರ ಇದ್ದ ಕಾರಣ 85% ಕ್ಕಿಂತಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳು ವಿಶೇಷ ಪುರಸ್ಕಾರಕ್ಕಾಗಿ ತಮ್ಮ ಅಂಕ ಪಟ್ಟಿಯ ಪ್ರತಿಯನ್ನು ಯೋಧಾc ಕೋ ಆಪರೇಟಿವ್ ಸೊಸೈಟಿ ಕುಮಟಾ ಇದರ ಕಚೇರಿಗೆ ತಲುಪಿಸಬೇಕೆಂದು ತಾಲೂಕಾ ಅಧ್ಯಕ್ಷರಾದ ಎಸ್. ಆರ್. ಬೀರಕೋಡಿ ತಿಳಿಸಿರುತ್ತಾರೆ.

RELATED ARTICLES  SSLC ಪಾಸಾದವರಿಗೆ ಉದ್ಯೋಗಾವಕಾಶ