ಕಾರವಾರ : ನಾಳೆ ಎಂದಿನಂತೆ ಶಾಲಾ ಕಾಲೇಜು ಪುನರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ,ಜಿಲ್ಲಾಡಳಿತ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಆಗಾಗ ಶಾಲಾ ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡುತ್ತಾ ಬಂದಿದೆ. ಈ ನಡುವೆ ದಿನಾಂಕ 05 – 08 – 2024 ರ ಸೋಮವಾರವು ಶಾಲೆಗೆ ರಜೆ ಎಂಬ ಆದೇಶ ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

RELATED ARTICLES  ನುಡಿಹಬ್ಬಕ್ಕೆ ದಶಮಾನೋತ್ಸವ ಸಂಭ್ರಮ : ಕುಮಟಾದಲ್ಲಿ ಮಾಹಿತಿ ನೀಡಿದ ಪ್ರಮುಖರು.

ದಿನಾಂಕ 02- 08 – 24 ರ ದಿನದಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಹೊರಡಿಸಿದ್ದ ರಜೆ ಆದೇಶ ಪ್ರತಿಯನ್ನು, ಅದಾರೋ ಕಿಡಿಗೇಡಿಗಳು, ಕೆಳಗಡೆ ಕೊಂಚ ಬದಲಾವಣೆ ಮಾಡಿ ದಿನಾಂಕ 5 – 08 – 24 ರಂದು ರಜೆಯೆಂದು ಸುಳ್ಳು ಸಂದೇಶ ಹರಿ ಬಿಟ್ಟಿರುವ ಸಾಧ್ಯತೆ ಕೇಳಿ ಬಂದಿದೆ.

RELATED ARTICLES  ಎರಡು ಬೈಕ್ ಗಳ ನಡುವೆ ಅಪಘಾತ : ಓರ್ವ ಸಾವು

ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ದೊರೆತ ಅಧಿಕೃತ ಮಾಹಿತಿಯಂತೆ, ನಾಳೆ ದಿನ ಅಂದರೆ 05 – 08 – 2024 ರಂದು ಶಾಲಾ-ಕಾಲೇಜುಗಳು ಪುನರಾರಂಭವಾಗಲಿದ್ದು, ಸಂಬಂಧಿಸಿದವರು ಸುಳ್ಳು ಸುದ್ದಿ ಮತ್ತು ಊಹಾಪೋಹಗಳಿಗೆ ಕಿವಿಗೊಡಬಾರದು ಎನ್ನಲಾಗಿದೆ.