ಶಿರಸಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ತಾವು ನಾಸ್ಥಿಕರಾಗಿದ್ದರು. ಆದರೆ ಈಗ ಅಧಿಕಾರ ಬಂದ ನಂತರದಲ್ಲಿ ಅವರು ಆಸ್ಥಿಕರಾಗಿದ್ದಾರೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ ಟೀಕಿಸಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದ ಮೊದಲು ನಾಸ್ತಿಕರೆಂದು ಹೇಳಿಕೊಂಡು ಓಡಾಡುತ್ತಿದ್ದರು. ಆದರೆ ಇತ್ತೀಚೆಗೆ ಆಸ್ಥಿಕರಾಗುತ್ತಿದ್ದಾರೆ. ಶನಿವಾರ ಕೋಲಾರದ ಮುಳಬಾಗಿಲನಲ್ಲಿ ವಿಘ್ನೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಕಾರ್ಯಕ್ರಮ ನಡೆಸಿ ನಾವೇ ಮುಂದೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಆದರೆ ಅಂತಿಮವಾಗಿ ರಾಜ್ಯದ ಜನತೆ ತೀರ್ಮಾನಿಸಲ್ಲಿದ್ದಾರೆ ಎಂದರು.

ನಮ್ಮ ಪಕ್ಷ ಮೊದಲು ಅಪ್ಪ ಮಕ್ಕಳ ಪಕ್ಷ ಎಂಬ ಆರೋಪ ಇತ್ತು. ಆದರೆ ಪರಿಶಿಷ್ಠ ಮತ್ತು ಹಿಂದುಳಿದ ನಾಯಕರು ನಮ್ಮ ಪಕ್ಷದಲ್ಲಿದ್ದಾರೆ. ನಮ್ಮದು ಸಾಮೂಹಿಕ ನಾಯಕತ್ವದ ಪಕ್ಷವಾಗಿದೆ. ಪ್ರಾದೇಶಿಕ ಪಕ್ಷದಿಂದ ನೆರೆಯ ರಾಜ್ಯಗಳಲ್ಲಿ ಆದಂತಹ ಅಭಿವೃದ್ದಿ ನಮ್ಮ ರಾಜ್ಯದಲ್ಲೂ ಆಗಬೇಕಾಗಿರುವುದರಿಂದ ಪ್ರಾದೇಶಿಕ ಪಕ್ಷ ನಮ್ಮ ರಾಜ್ಯದಲ್ಲೂ ಅಧಿಕಾರಕ್ಕೆ ಬರಬೇಕಿದೆ. ರಾಜ್ಯದ ಹಿತದೃಷ್ಠಿಯಿಂದ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದು ಅವಶ್ಯ ಇದೆ. ಈ ಹಿನ್ನಲೆಯಲ್ಲಿ ಪಕ್ಷ ಸಂಘಟಿಸುವುದು ಅವಶ್ಯಕವಾಗಿದೆ ಎಂದರು. ಉತ್ತರ ಕನ್ನಡ, ಉಡುಪಿ, ಮಂಗಳೂರು ಜಿಲ್ಲೆಯಲ್ಲಿ ಇನ್ನು ಮುಂದೆ ಪಕ್ಷ ಸಂಘಟನೆಗೆ ಸಂಚರಿಸುತ್ತೇನೆ. ಈ ಭಾಗದಲ್ಲಿ ಮಧು ಬಂಗಾರಪ್ಪ ಹೆಚ್ಚು ಸಂಚಾರ ಮಾಡುತ್ತಿದ್ದಾರೆ. ಮಾಜಿ ಮುಖ್ಯಂತ್ರಿ ಬಂಗಾರಪ್ಪ ಪ್ರಭಾವ ಈ ಭಾಗದಲ್ಲಿ ಹೆಚ್ಚಿರುವುದರಿಂದ ಮಧು ಈ ಕಡೆ ಹೆಚ್ಚು ಓಡಾಡಿ ಮಾರ್ಗದರ್ಶನ ಮಾಡುತ್ತಿದ್ದಾರೆ. ನವೆಂಬರ 1 ರಿಂದ ಕುಮಾರಸ್ವಾಮಿ ಕೂಡ ಇಡೀ ರಾಜ್ಯ ಪ್ರವಾಸ ಮಾಡಲ್ಲಿದ್ದಾರೆ. ನಾನೂ ಕೂಡಾ ಪ್ರತಿ ಕ್ಷೇತ್ರಕ್ಕೆ ಭೇಟಿ ನೀಡಿ ಸಂಘಟನೆ ಮಾಡುತ್ತೇನೆ ಎಂದರು.

RELATED ARTICLES  ಯಲ್ಲಾಪುರದ ಕಾಳಮ್ಮ ನಗರ ಟಿಪ್ಪೂ ನಗರವಾಗಿದೆ! ಗೂಗಲ್ ಮ್ಯಾಪ್ ತೆರೆದಿಟ್ಟ ಸತ್ಯವೇನು ಗೊತ್ತ?

ಈ ವೇಳೆ ಜೆಡಿಎಸ್ ಜಿಲ್ಲಾದ್ಯಕ್ಷ ಬಿ.ಆರ್.ನಾಯ್ಕ, ಸೊರಬಾ ಶಾಸಕ ಮಧು ಬಂಗಾರಪ್ಪ, ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ನಾಯ್ಕ, ಜೆಡಿಎಸ್ ಮುಖಂಡರಾದ ಶಶಿಭೂಷಣ ಹೆಗಡೆ, ಎ. ರವೀಂದ್ರ ನಾಯ್ಕ, ರಾಜೇಶ್ವರಿ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

RELATED ARTICLES  ಕಾಗೇರಿ ಅವರ ಮಾರ್ಗದರ್ಶನದಲ್ಲಿ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ‌ : ಮುಖ್ಯಮಂತ್ರಿ