ಕಾರವಾರ : ಎಸ್.ಪಿ ಎಂ. ನಾರಾಯಣ್ ರವರ ಹೆಸರಲ್ಲಿ ಫೇಸ್ ಬುಕ್ ನಕಲಿ ಖಾತೆ ಮಾಡಿ ಕಳ್ಳರು friend request ನೀಡಿ ಹಣ ಕೇಳಿ ವಂಚಿಸುತಿದ್ದಾರೆ.
ಸೈಬರ್ ಕಳ್ಳರು ಹಣ ವಂಚಿಸಿದ್ರು ಅಂತ ಪೊಲೀಸ್ ಠಾಣೆ ಮೆಟ್ಟಿಲೇರೋದು ಸಾಮಾನ್ಯ . ಆದ್ರೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ್ ರವರೇ ಸೈಬರ್ ಕ್ರೈಮ್ ಠಾಣೆ ಮೊರೆಹೋಗಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಎಸ್.ಪಿ ಎಂ. ನಾರಾಯಣ್ ರವರು ನನ್ನ ಹೆಸರಿನಲ್ಲಿ ನಕಲಿ ಖಾತೆ ಮಾಡಿ ಹಣ ಕೇಳುತಿದ್ದಾರೆ. ಆ ಅಕೌಂಟ್ ನಕಲಿಯಾಗಿದೆ. ಯಾರೂ ಹಣ ನೀಡಿ ವಂಚನೆಗೆ ಒಳಗಾಗಬೇಡಿ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಇದಲ್ಲದೇ ಸೈಬರ್ ಕ್ರೈಮ್ ವಿಭಾಗದಲ್ಲಿ ದೂರು ಸಹ ದಾಖಲಿಸಿದ್ದಾರೆ. ಹೀಗಾಗಿ ಯಾರೂ ಸಹ ಇಂತಹ ಫೇಕ್ ಅಕೌಂಟ್ ನಂಬಿ ಮೋಸ ಹೋಗದಿರಿ.