ಕುಮಟಾ : ಇಲ್ಲಿನ ಯಕ್ಷಗಾನ ಸಂಶೋಧನಾ ಕೇಂದ್ರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರಾವಣ ಯಕ್ಷಸಂಭ್ರಮ ಅಂಗವಾಗಿ ಯಕ್ಷತ್ರಿವಳಿ ಕಾರ್ಯಕ್ರಮಗಳು ನಡೆಯಲಿವೆ. 

ಆ. ೧೦ ಶನಿವಾರದಂದು ಮೊದಲ  ಕಾರ್ಯಕ್ರಮವನ್ನು  ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾಭವನದಲ್ಲಿ ಸಂಜೆ 4 ಗಂಟೆಗೆ ಶಾಸಕ ದಿನಕರ ಶೆಟ್ಟಿ  ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಸಂಶೋಧನಾ ಕೇಂದ್ರದ ನಿರ್ದೇಶಕ ಮಂಜುನಾಥ ಭಟ್ಟ ಸುವರ್ಣಗದ್ದೆ ಇವರು ವಹಿಸಲಿದ್ದು, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ  ನಿರ್ದೇಶಕರಾದ ರವಿ ನಾಯಕ  ಭಾಗವಹಿಸಲಿದ್ದಾರೆ. 

ನಂತರ ಭಸ್ಮಾಸುರ ಮೋಹಿನಿ ಯಕ್ಷಗಾನ ಪ್ರದರ್ಶನದಲ್ಲಿ ರಾಮಕೃಷ್ಣ ಹೆಗಡೆ ಹಿಲ್ಲೂರು ಭಾಗವತರಾಗಿ, ಪರಮೇಶ್ವರ ಭಂಡಾರಿ ಕರ್ಕಿ ಮೃದಂಗವಾದಕರಾಗಿ ಮತ್ತು ಗಜಾನನ ಹೆಗಡೆ ಸಾಂತೂರು ಚಂಡೆವಾದಕರಾಗಿ  ಭಾಗವಹಿಸಲಿದ್ದಾರೆ. 

ಮುಮ್ಮೇಳ ಕಲಾವಿದರಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ನರಸಿಂಹ ಚಿಟ್ಟಾಣಿ, ಶ್ರೀಧರ ಹೆಗಡೆ ಚಪ್ಪರಮನೆ, ವಿಘ್ನೇಶ್ವರ ಹಾವಗೋಡಿ ಹಾಗೂ ಸ್ತ್ರೀವೇಷ ಕಲಾವಿದರಾದ ಸುಬ್ರಹ್ಮಣ್ಯ ಮೂರೂರು ಮತ್ತು ಶಂಕರ ಹೆಗಡೆ ನೀಲ್ಕೋಡು ಇವರುಗಳು ಪಾಲ್ಗೊಳ್ಳಲಿದ್ದಾರೆ. 

RELATED ARTICLES  ವಸತಿ ಶಾಲೆಗಳಲ್ಲಿ ಅರ್ಜಿ ಆಹ್ವಾನ

ಆ.೧೧ ರವಿವಾರ ಸಂಜೆ 5 ರಿಂದ ಕುಮಟಾ ದೀವಗಿಯ ಶ್ರೀ ರಾಮಾನಂದ ಸ್ವಾಮೀಜಿ ಮಠದಲ್ಲಿ ಕಾರ್ಯಕ್ರಮ ನಡೆಯುವುದು. ಅಂದು ಅಪರೂಪ ಆಖ್ಯಾನ ‘ತ್ರಿಪುರ ಮಥನ’ ವನ್ನು ಆಯ್ದುಕೊಳ್ಳಲಾಗಿದೆ.  ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮತ್ತು ಬ್ರಹ್ಮೂರು ಶಂಕರ ಭಟ್ ಪಾಲ್ಗೊಳ್ಳುವರು. ಮೃದಂಗ ವಾದಕರಾಗಿ ನಾಗರಾಜ ಭಂಡಾರಿ ಹಿರೇಬೈಲು  ಮತ್ತು ಚಂಡೆವಾದಕರಾಗಿ  ಗಜಾನನ ಹೆಗಡೆ ಸಾಂತೂರು ಇವರು ಭಾಗವಹಿಸಲಿದ್ದಾರೆ. 

ಮುಮ್ಮೇಳದಲ್ಲಿ ಡಾ. ಜಿ.ಎಲ್.ಹೆಗಡೆ, ಸುಬ್ರಹ್ಮಣ್ಯ ಚಿಟ್ಟಾಣಿ, ಅಶೋಕ ಭಟ್ ಸಿದ್ದಾಪುರ, ಈಶ್ವರ ನಾಯ್ಕ ಮಂಕಿ, ಗುರುಪ್ರಸಾದ ಭಟ್, ನಾಗೇಶ ಕುಳಿಮನೆ  ಮತ್ತು ಸ್ತ್ರೀವೇಷ ಕಲಾವಿದರಾಗಿ ಸುಬ್ರಹ್ಮಣ್ಯ ಮೂರೂರು ಹಾಗೂ ರಮಾಕಾಂತ ಮೂರೂರು ಇವರುಗಳು ಭಾಗವಹಿಸಲಿದ್ದಾರೆ. 

RELATED ARTICLES  ಆಯುಷ್ಮಾನ್ ಭಾರತ, ಆರೋಗ್ಯ ಕರ್ನಾಟಕ ಕಾರ್ಡ ಮಾಡಿಸಿಕೊಳ್ಳಲು ಕುಮಟಾದ ಆರ್ಯದುರ್ಗಾ ಎಂಟರ್ ಪ್ರೈಸಸ್ ನಲ್ಲಿ ಸಾಮಾನ್ಯ ಸೇವಾ ಕೇಂದ್ರ ಪ್ರಾರಂಭ

ಆ. ೧೮ ರವಿವಾರ ಸಂಜೆ 4.30 ರಿಂದ ಕುಮಟಾದ ಹವ್ಯಕ ಸಭಾ ಭವನದಲ್ಲಿ ನಡೆಯಲಿದೆ. ‘ಪ್ರಹ್ಲಾದ ಚರಿತ್ರೆ’ ಯಕ್ಷಗಾನದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮೂರೂರು, ಮೃದಂಗ ವಾದಕರಾಗಿ ಗಜಾನನ ಭಂಡಾರಿ ಬೋಳ್ಗೆರೆ ಮತ್ತು ಚೆಂಡೆ ವಾದನದಲ್ಲಿ ಗಜಾನನ ಹೆಗಡೆ ಸಾಂತೂರು ಭಾಗವಹಿಸುವರು. 

ಮುಮ್ಮೇಳ ಕಲಾವಿದರಾಗಿ ತೋಟಿಮನೆ ಗಣಪತಿ ಹೆಗಡೆ, ಮಹಾಬಲೇಶ್ವರ ಭಟ್ ಇಟಗಿ, ವಿಘ್ನೇಶ್ವರ ಹಾವಗೋಡಿ ,ನಾಗೇಂದ್ರ ಮೂರೂರು ಮತ್ತು ಕುಮಾರಿ ಪ್ರಣಮ್ಯ ಇವರುಗಳು ಪಾಲ್ಗೊಳ್ಳಲಿದ್ದಾರೆ.  ಸ್ತ್ರೀ ವೇಷ ಕಲಾವಿದರಾಗಿ ಯಲಗುಪ್ಪ ಸುಬ್ರಹ್ಮಣ್ಯ ಹೆಗಡೆ ಭಾಗವಹಿಸುವರು. 

ಅಪರೂಪದ ಈ ಎಲ್ಲಾ ಯಕ್ಷೋತ್ಸವ  ಕಾರ್ಯಕ್ರಮಗಳಿಗೆ ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಕೋರಿದ್ದಾರೆ .