Home KUMTA ಪ್ರತಿಭಾ ಕಾರಂಜಿಯಲ್ಲಿ ಒಟ್ಟೂ 23 ಬಹುಮಾನ ಪಡೆದ ಸರಸ್ವತಿ ವಿದ್ಯಾಕೇಂದ್ರ.

ಪ್ರತಿಭಾ ಕಾರಂಜಿಯಲ್ಲಿ ಒಟ್ಟೂ 23 ಬಹುಮಾನ ಪಡೆದ ಸರಸ್ವತಿ ವಿದ್ಯಾಕೇಂದ್ರ.

  • ಪ್ರತಿಭಾ ಕಾರಂಜಿಯಲ್ಲಿ ಒಟ್ಟೂ 23 ಬಹುಮಾನ ಪಡೆದ ಸರಸ್ವತಿ ವಿದ್ಯಾಕೇಂದ್ರ.
  • 25 ಸ್ಪರ್ಧೆಗಳಲ್ಲಿ 18 ಪ್ರಥಮ, 4 ದ್ವಿತೀಯ, 1 ತೃತೀಯ ಬಹುಮಾನ.
ಕುಮಟಾ : ತಾಲೂಕಿನ ಹಂದಿಗೋಣ ಸರಕಾರಿ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಪಟ್ಟಣದ ಸರಸ್ವತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ, 25 ಸ್ಪರ್ಧೆಗಳಲ್ಲಿ 23 ರಲ್ಲಿ ಬಹುಮಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಒಂದರಿಂದ ನಾಲ್ಕನೇ ತರಗತಿ (ಕಿರಿಯ) ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಇಂಗ್ಲೀಷ್ ಕಂಠಪಾಠ ರಕ್ಷಾ ಆರ್ ನಾಯ್ಕ, ಧಾರ್ಮಿಕ ಪಟ್ಟಣ ಮತ್ತು ಸಂಸ್ಕೃತ ಧಾರ್ಮಿಕ ಪಠಣ ಅದಿತಿ ವಿ. ಭಟ್, ದೇಶಭಕ್ತಿ ಗೀತೆ ಅನನ್ಯ ಆರ್. ಬಾಳಗಿ , ಛದ್ಮವೇಷ ಆಜ್ಞಾ ಎಸ್. ಮಾರ್ಷಲಕರ್, ಕಥೆ ಹೇಳುವುದು ದೀಪಿಕಾ ಮಹೇಶ್ ಭಟ್, ಚಿತ್ರಕಲೆ ಮಿಥಾಲಿ ಮಂಜುನಾಥ ನಾಯ್ಕ, ಕ್ಲೇ ಮಾಡಲಿಂಗ್ ಪ್ರಣತ್ ಲೋಕೇಶ್ ಹಳೆಮಠ, ಭಕ್ತಿಗೀತೆ ಸುಮನ ಎಸ್. ಭಟ್, ಆಶುಭಾಷಣ ದೀಪಿಕಾ ಮಹೇಶ ಭಟ್ಟ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ.
ಇನ್ನು ಐದರಿಂದ ಏಳನೇ ತರಗತಿಯ (ಹಿರಿಯ) ವಿಭಾಗದಲ್ಲಿ ಹಿಂದಿ ಕಂಠಪಾಠ ಎಮ್.  ಆರ್. ಬಿಂದು, ಧಾರ್ಮಿಕ ಪಠಣ ಸಂಸ್ಕೃತ ಪ್ರಣವ್ ಗಣೇಶ ಅಡಿ, ಧಾರ್ಮಿಕ ಪಠಣ ಅರೇಬಿಕ್ ಸೃತಿ ಆರ್. ನಾಯ್ಕ, ಕಥೆ ಹೇಳುವುದು ಸಗನ್ ಕೆರೆಮನೆ, ಚಿತ್ರಕಲೆ ಅಮಿತಕುಮಾರ್ ಜಿ. ನಾಯ್ಕ, ಅಭಿನಯ ಗೀತೆ ಇಶಾ ಭಂಡಾರಿ, ಕ್ಲೇ ಮಾಡಲಿಂಗ್ ಸೃಜನ್ ಅಶ್ವಿನಿ ನಾಯ್ಕ, ಭಕ್ತಿಗೀತೆ ವೃಂದಾ ಕಿಣಿ, ಮಿಮಿಕ್ರಿ ಶ್ರವಣ ಎಚ್. ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇನ್ನು ಇಂಗ್ಲಿಷ್ ಪಾಠ ಮತ್ತು ದೇಶಭಕ್ತಿಗೀತೆಯಲ್ಲಿ ಆರಾಧ್ಯ ಭಾಗ್ವತ್, ಆಶುಭಾಷಣ ವೈಷ್ಣವಿ ಗುನಗಾ, ಕವನ ವಾಚನ ಓಂಕಾರ್ ಭಾಗ್ವತ್ ದ್ವಿತೀಯ ಬಹುಮಾನ ಪಡೆದಿದ್ದಾರೆ. ಕನ್ನಡ ಕಂಠಪಾಠದಲ್ಲಿ ವೈಷ್ಣವಿ ಬಾಂದಿ ತೃತೀಯ ಸ್ಥಾನ ಪಡೆದಿರುತ್ತಾಳೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯ ಸದಸ್ಯರು, ಮಾರ್ಗದರ್ಶಕರು, ಅಂಗ ಸಂಸ್ಥೆಗಳ ಮುಖ್ಯಶಿಕ್ಷಕರುಗಳು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಶುಭಹಾರೈಸಿದ್ದಾರೆ.