ಯಲ್ಲಾಪುರ: ನಿಲ್ಲಿಸಿದ್ದ ಬೊಲೆರೊ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಬಗೇರಿ ಬಳಿ ನಡೆದಿದೆ. ಕಾಳಮ್ಮನಗರದ ಇಮಾಮ್ ಖಾಸೀಂ ಮೆಹಬೂಬಲಿ ಮುಲ್ಲಾನವರ ಗಾಯಗೊಂಡ ಸವಾರ. ಈತ ಯಲ್ಲಾಪುರದಿಂದ ಅಂಕೋಲಾ ಕಡೆಗೆ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಸಬಗೇರಿ ಬಳಿ ಮನೆಯ ಎದುರು ನಿಲ್ಲಿಸಿಟ್ಟಿದ್ದ ಬುಲೆರೊಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ಜಖಂಗೊಂಡಿದ್ದು, ಬೈಕ್ ಸವಾರ ಗಾಯಗೊಂಡಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ಯುಟ್ಯೂಬ್‌ನಲ್ಲಿ ಪ್ರಸಾರವಾದ ಜಾಹೀರಾತು ನಂಬಿ 7 ಲಕ್ಷ ಕಳೆದುಕೊಂಡ.