ಕಾರವಾರ : ಕಾರವಾರ ತಾಲೂಕಿನ ಹಣಕೋಣದಲ್ಲಿ ಬೆಳಂಬೆಳಿಗ್ಗೆ ಉದ್ಯಮಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆಯ ಎಲಕ್ಟ್ರಾನಿಕ್ ವಸ್ತುಗಳ ಮಾರಾಟ ಮಾಡುತಿದ್ದ ಉದ್ಯಮಿ ವಿನಾಯಕ ನಾಯ್ಕ (52) ಕೊಲೆಯಾದ ದುರ್ದೈವಿ.

RELATED ARTICLES  ಸಹಸ್ರಾರು ಜನರೊಂದಿಗೆ ಮೆರವಣಿಗೆ : ನಾಮಪತ್ರ ಸಲ್ಲಿಸಿದ ಕಾಗೇರಿ.

ಇನ್ನು ಇವರ ಪತ್ನಿ ವೈಶಾಲಿಗೆ ಗಂಭೀರ ಗಾಯವಾಗಿದ್ದು ಕಾರವಾರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಹಣಕೊಣ ದಿಂದ ಪುಣೆಗೆ ಹೊರಡಲು ಸಿದ್ದವಾಗಿದ್ದ ಇವರಿಗೆ ಐದು ಜನರ ತಂಡ ಕಾರಿನಲ್ಲಿ ಬಂದು ಹತ್ಯೆ ನಡೆಸಿ ಹೋಗಿದ್ದು ವಿನಯ್ ರವರ ಸಹೋದರಿ ಉಜ್ವಲ್ ರವರು ಕರೆ ಮಾಡಿದರೂ ಸ್ವೀಕರಿಸದ ಕಾರಣ ಕಾರವಾರದಲ್ಲಿದ್ದ ಸಹೋದರಿ ಹಣಕೋಣದ ಇವರ ಮನೆಗೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.

RELATED ARTICLES  ಭಾರತ ಟಿ20 ವಿಶ್ವ ಕಪ್ ಗೆದ್ದ ರೀತಿಯಲ್ಲಿ ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಜನರ ಮನಸ್ಸಿನ ಕಪ್ ಗೆಲ್ಲುತ್ತೇವೆ : ಎಸ್.ಪಿ