ಭಾರತದಲ್ಲಿ, ಬ್ಯಾಂಕಿಂಗ್ ವೃತ್ತಿಯನ್ನು ಆರಿಸಿಕೊಳ್ಳುವ ಹೊಸಬರಿಗೆ ಮತ್ತು ಅನುಭವಿ ವೃತ್ತಿಪರರಿಗೆ ಅತ್ಯಂತ ಪ್ರತಿಷ್ಠಿತ ಉದ್ಯೋಗಗಳಲ್ಲಿ ಒಂದಾಗಿದೆ. ಬ್ಯಾಂಕ್‌ಗಳು ತನ್ನ ಉದ್ಯೋಗಿಗಳಿಗೆ ಸುಂದರವಾದ ಪ್ಯಾಕೇಜ್‌ಗಳು, ಆಕರ್ಷಕ ಸಂಬಳ, ಉದ್ಯೋಗ ಭದ್ರತೆಯ ಜೊತೆಗೆ ಇತರ ಸವಲತ್ತುಗಳನ್ನು ನೀಡುತ್ತವೆ ಎಂಬುದು ಬಹಿರಂಗ ಸತ್ಯವಾಗಿದೆ.


ಪ್ರತಿ ವರ್ಷ ದೇಶದಾದ್ಯಂತ ವಿವಿಧ ಬ್ಯಾಂಕ್‌ಗಳು ಮತ್ತು ಪರೀಕ್ಷಾ ಏಜೆನ್ಸಿಗಳು ನಡೆಸುವ ಬಹು ಬ್ಯಾಂಕ್ ಪರೀಕ್ಷೆಗಳಿವೆ.ಇಂತಹ ಕಾರಣಗಳಿಂದಾಗಿ ಬ್ಯಾಂಕ್ ಉದ್ಯೋಗಗಳನ್ನ ಪಡೆದುಕೊಳ್ಳಲು ಪೈಪೋಟಿ ಅತ್ಯಂತ ವೇಗದಲ್ಲಿ ಹೆಚ್ಚುತ್ತಿದೆ. ಆಕಾಂಕ್ಷಿಗಳು ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಮತ್ತು ಬ್ಯಾಂಕ್ ಉದ್ಯೋಗಿಯಾಗಿ ಆಯ್ಕೆಯಾಗಲು ಸರಿಯಾದ ತಯಾರಿಯನ್ನು ಹೊಂದಿರಬೇಕು ಎಂಬುದನ್ನು ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಸಂಖ್ಯೆ ಸೂಚಿಸುತ್ತದೆ. ಒಂದು ಕಾಲದಲ್ಲಿ ಕಾಮರ್ಸ್ ಪದವಿ ಓದಿದವರೂ, ಕೃಷಿ ಪದವಿ ಅಧ್ಯಯನ ಮಾಡಿದವರಿಗಷ್ಟೇ ಬ್ಯಾಂಕ್ ನಲ್ಲಿ ಉದ್ಯೋಗ ಎನ್ನುವಂತಿತ್ತು.ಆದರೆ ಇಂದು ಬದಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಯೂನಿಯನ್ ಬ್ಯಾಂಕ್ ಆಫ್ ಪ್ಯಾನ್ ಇಂಡಿಯಾ ಉಪಸ್ಥಿತಿಯನ್ನು ಹೊಂದಿರುವ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಭಾರತವಲ್ಲದೆ, ಸಾಗರೋತ್ತರ ಉಪಸ್ಥಿತಿ ಇರುವಂತಹ ಈ ಬ್ಯಾಂಕ್ ಸ್ಥಳೀಯ ಬ್ಯಾಂಕ್ ಅಧಿಕಾರಿಗಳ ಹುದ್ದೆಯ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಲೋಕಲ್ ಬ್ಯಾಂಕ್ ಆಫೀಸರ್ (ಎಲ್‌ಬಿಒ) ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಒಟ್ಟು ಬ್ಯಾಂಕ್ ಜೂನಿಯರ್ ಮ್ಯಾನೇಜ್ ಮೆಂಟ್ ಗ್ರೇಡ್ ಸ್ಟೇಲ್-1ರ ಒಟ್ಟು 1,500 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಕರ್ನಾಟಕದಲ್ಲಿ ಅತ್ಯಧಿಕ 300 ಸ್ಥಾನಗಳಿವೆ.ಇವುಗಳಲ್ಲಿ ಸಾಮಾನ್ಯ ವರ್ಗದವರಿಗೆ 122, ಆರ್ಥಿಕ ದುರ್ಬಲ ವರ್ಗದವರಿಗೆ 30, ಒಬಿಸಿ ಅಭ್ಯರ್ಥಿಗಳಿಗೆ 81, ಎಸ್‌ ಟಿ ಅಭ್ಯರ್ಥಿಗಳಿಗೆ 22 ಹಾಗೂ ಎಸ್‌ಸಿ ವರ್ಗದವರಿಗೆ 45 ಹುದಬದಲಾಗಬಹುದು.ಮೀಸಲಿಡಲಾಗಿದೆ.,ಕನ್ನಡ ಓದಲು, ಬರೆಯಲು ಹಾಗೂ ಮಾತನಾಡಲು ಬಲ್ಲ ಅಭ್ಯರ್ಥಿಗಳಿಗೆ ಇವು ಮೀಸಲಾಗಿವೆ. ಉಳಿದ ಹುದ್ದೆಗಳಿಗೂ ಆಯಾ ರಾಜ್ಯಗಳ ಭಾಷಾ ನಿಯಮ ಅನ್ವಯವಾಗಲಿದೆ.

Screenshot 2024 10 31 17 04 26 39 439a3fec0400f8974d35eed09a31f914

ವೇತನಶ್ರೇಣಿ: 48,480-85,920ರೂ. ಇದಲ್ಲದೆ ಬ್ಯಾಂಕ್ ಹೆಚ್ಚುವರಿಯಾಗಿ, ವಿಶೇಷ ಭತ್ಯೆ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವಸತಿ ಕ್ವಾರ್ಟರ್ಸ್/ಲೀಸ್ ಬಾಡಿಗೆ, ಬ್ಯಾಂಕಿನ ನೀತಿಯ ಪ್ರಕಾರ ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ LFC, ಮರುಪಾವತಿಯಂತಹ ಇತರ ಸೌಲಭ್ಯಗಳಿಗೆ ಅರ್ಹರಾಗಿರುತ್ತಾರೆ. ಮತ್ತು ಇತರ ಭತ್ಯೆಗಳನ್ನು ಚಾಲ್ತಿಯಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಪಾವತಿಸಲಾಗುವುದು.

ಗಮನಿಸಿ:

ಕನ್ನಡಿಗರು ಈ ಅವಕಾಶವನ್ನು ಖಂಡಿತಾ ಬಳಸಿಕೊಳ್ಳಬೇಕು. ಕಾರಣ ಐಬಿಪಿಎಸ್ ನಡೆಸುವ ಅಧಿಕಾರಿಗಳ ಹುದ್ದೆಗಳಿಗೆ ಪ್ರಿಲೀಮ್ಸ್, ಮೇನ್ಸ್ ಹಾಗೂ ಸಂದರ್ಶನ ವೆಂಬ ಮೂರು ಹಂತಗಳಿವೆ.ಆದರೆ ಇವಾಗ ಕೇವಲ ಮುಖ್ಯ ಪರೀಕ್ಷೆ ಮಾತ್ರ ನಡೆಸಲಾಗುತ್ತಿದ್ದು,ಸಂದರ್ಶನದ ಕುರಿತಾಗಿ ನಡೆಸಬಹುದಾದ ಸಾದ್ಯತೆ ನಿಚ್ಚಳವಾಗಿಲ್ಲ.ಕಾರಣ ಮುಖ್ಯ ಪರೀಕ್ಷೆ ಯಲ್ಲಿ ಪಾಸಾಗುವವರ ಸಂಖ್ಯೆಯ ಮೇಲೆ ನಿರ್ಧಾರವಾಗಲಿದೆ.ಹೀಗಾಗಿ ಈ ಒಂದು ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ.ಜೊತೆಯಲ್ಲಿ 10 ವರ್ಷಗಳ ಕಾಲ ಪದೋನ್ನತಿ ಸ್ಕೇಲ್ ಮೂರರ ವರೆಗೂ ಪಡೆದರೂ ಕರ್ನಾಟಕದಲ್ಲಿಯೆ ಇರಬಹುದು.ಇಂತಹ ಅವಕಾಶ ಸಿಗೋದು ಅಪರೂಪ.ಬಳಸಿಕೊಳ್ಳಿ.

ಖಾಲಿ ಹುದ್ದೆಗಳು ತಾತ್ಕಾಲಿಕವಾಗಿರುತ್ತವೆ ಮತ್ತು ಇದು ಬ್ಯಾಂಕಿನ ಅವಶ್ಯಕತೆಗೆ ಅನುಗುಣವಾಗಿ ಬದಲಾಗಬಹುದು.ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ವಿವಿಧ ವರ್ಗಗಳಲ್ಲಿ ಕಾಯ್ದಿರಿಸಿದ ಖಾಲಿ ಹುದ್ದೆಗಳ ಸಂಖ್ಯೆ ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ತನ್ನ ಹಕ್ಕನ್ನು ಕಾಯ್ದಿರಿಸಿಕೊಂಡಿದೆ.ಅಂದರೆ ಕರ್ನಾಟಕದಲ್ಲಿ 300 ಹುದ್ದೆಗಳು ಅಂತಾ ಹೇಳಿರೋದು ಬದಲಾಗಬಹುದು.ಕಾಯ್ದಿರಿಸಿದ ಹುದ್ದೆಗಳು ಬದಲಾಗುವ ಸಾದ್ಯತೆಗಳಿವೆ.

ಅರ್ಜಿ ಶುಲ್ಕ : ಸಾಮಾನ್ಯ, ಒಬಿಸಿ ಹಾಗೂ ಇತರೆ ಅಭ್ಯರ್ಥಿಗಳಿಗೆ: ₹850. ಪ.ಜಾ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಹಾಗೂ ಮಾಜಿ ಯೋಧರಿಗೆ ₹175. ನೋಂದಣಿ ನಂತರ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕ/ಇಂಟಿಮೇಷನ್ ಶುಲ್ಕ,/ ಬ್ಯಾಂಕ್ ವಹಿವಾಟು ಶುಲ್ಕಗಳನ್ನು ಅಭ್ಯರ್ಥಿಯು ಭರಿಸಬೇಕಾಗುತ್ತದೆ.

RELATED ARTICLES  ಹೊನ್ನಾವರ ತಾಲೂಕಿನಲ್ಲಿ ನಾಳೆ ಶಾಲೆಗಳಿಗೆ ರಜೆ.

ವಯೋಮಿತಿ: 01.10.2024 ಕ್ಕೆ ಕನಿಷ್ಠ 20 ವರ್ಷ ಹಾಗೂ ಗರಿಷ್ಡ 30 ವರ್ಷಗಳಿಗಿಂತ ಹೆಚ್ಚಿರಬಾರದು. ಸರ್ಕಾರದ ನಿಯಮಾನುಸಾರ ಎಸ್.ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳಷ್ಟು ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಶೈಕ್ಷಣಿಕ ಅರ್ಹತೆ: (13.11.2024ಕ್ಕೆ ಅನ್ವಯಿಸುವಂತೆ) ಕಲೆ, ವಾಣಿಜ್ಯ, ವಿಜ್ಞಾನ ಅಥವಾ ಇನ್ನಾವುದೇ ವಿಷಯಗಳಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಸಲ್ಲಿಸಬಹುದು.

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕ:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: ಅಕ್ಟೋಬರ್ 24, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 13, 2024
ಆನ್‌ಲೈನ್‌ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ದಾವಣಗೆರೆ, ಧಾರವಾಡ/ಹುಬ್ಬಳ್ಳಿ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಉಡುಪಿ.
ನೇಮಕಾತಿ ಪ್ರಕ್ರಿಯೆ:
ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ / ಗುಂಪು ಚರ್ಚೆ (ನಡೆಸಿದರೆ) / ಅಪ್ಲಿಕೇಶನ್‌ಗಳ ಸ್ಕ್ರೀನಿಂಗ್ ಮತ್ತು /ಅಥವಾ ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರಬಹುದು. ಅಧಿಸೂಚಿತ ಪೋಸ್ಟ್‌ಗಳಿಗೆ ಅರ್ಹ ಅಭ್ಯರ್ಥಿಗಳ ಸಂಖ್ಯೆಯನ್ನು ಅವಲಂಬಿಸಿ ಆಯ್ಕೆ ಮಾಡಲು ಈ ಎಲ್ಲಾ ಅಥವಾ ಯಾವುದೇ ವಿಧಾನಗಳು ಎಂದು ನಿರ್ಧರಿಸಲು ಬ್ಯಾಂಕ್ ಸಂಪೂರ್ಣ ಹಕ್ಕನ್ನು ಹೊಂದಿದೆ.

ಇನ್ನೊಂದಿಷ್ಟು ಮಾಹಿತಿ…

ಖಾಲಿ ಹುದ್ದೆಗಳ ಸಂಖ್ಯೆಯು ತಾತ್ಕಾಲಿಕವಾಗಿದೆ ಮತ್ತು ಬ್ಯಾಂಕಿನ ನೈಜ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾಗಬಹುದು.
ಅಭ್ಯರ್ಥಿಗಳು ಒಂದು ರಾಜ್ಯದ ಖಾಲಿ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. ಒಂದು ರಾಜ್ಯದ ಖಾಲಿ ಹುದ್ದೆಯ ವಿರುದ್ಧ ಅರ್ಜಿ ಸಲ್ಲಿಸುವ ಅಭ್ಯರ್ಥಿ ಬೇರೆ ಯಾವುದೇ ರಾಜ್ಯದ ಖಾಲಿ ಹುದ್ದೆಯ ವಿರುದ್ಧ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ರಾಜ್ಯವಾರು ಮೆರಿಟ್ ಪಟ್ಟಿಯನ್ನು ರಚಿಸಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳನ್ನು ಅವರ ಸೇವೆಯ ಮೊದಲ 10 ವರ್ಷಗಳವರೆಗೆ ಆಯ್ಕೆ ಮಾಡಿದ ರಾಜ್ಯದೊಳಗೆ ಪೋಸ್ಟ್ ಮಾಡಲಾಗುತ್ತದೆ. ಒಮ್ಮೆ SMGS IV ಗ್ರೇಡ್‌ಗೆ ಬಡ್ತಿ ಹೊಂದಿದಲ್ಲಿ ಮಾತ್ರ, ಬೇರೆ ಕಡೆಗೆ ವರ್ಗ.
ಅಭ್ಯರ್ಥಿಗಳು ರಾಜ್ಯದ ನಿಗದಿತ ಸ್ಥಳೀಯ ಭಾಷೆಯಲ್ಲಿ (ರಾಜ್ಯವಾರು ಪ್ರಕಾರ) ಪ್ರವೀಣರಾಗಿರಬೇಕು (ಓದುವುದು, ಬರೆಯುವುದು ಮತ್ತು ಮಾತನಾಡುವುದು)
ಸೇವಾ ಹಿರಿತನಕ್ಕೆ ಪೂರ್ವ ಅನುಭವವನ್ನು ಪರಿಗಣಿಸಲಾಗುವುದಿಲ್ಲ.
ಬ್ಯಾಂಕ್‌ಗಳು/ಎನ್‌ಬಿಎಫ್‌ಸಿಗಳು/ಹಣಕಾಸು ಸಂಸ್ಥೆಗಳು ಸೇರಿದಂತೆ ಯಾವುದೇ ಸಾಲ ನೀಡುವ ವ್ಯವಸ್ಥೆಯ ಅಡಿಯಲ್ಲಿ ಮರುಪಾವತಿಯಲ್ಲಿ ಡೀಫಾಲ್ಟ್ /ಕ್ರೆಡಿಟ್ ಕಾರ್ಡ್ ಬಾಕಿಗಳು ಮಾಡಿದ ಅಭ್ಯರ್ಥಿಗಳು ಆಫರ್‌ನ ಪತ್ರವನ್ನು ನೀಡುವ ದಿನಾಂಕದವರೆಗೆ ಅವುಗಳ ಬಾಕಿಯನ್ನು ಕ್ರಮಬದ್ಧಗೊಳಿಸಿಲ್ಲ / ಮರುಪಾವತಿ ಮಾಡಿಲ್ಲದಿದ್ದರೆ ಬ್ಯಾಂಕ್ ನೇಮಕಾತಿಗೆ ಅರ್ಹತೆ ಹೊಂದಿರುವುದಿಲ್ಲ. ಹುದ್ದೆಗೆ ಸೇರ್ಪಡೆಗೊಳ್ಳುವ ದಿನಾಂಕದ ಮೊದಲು CIBIL ಸ್ಥಿತಿ ನವೀಕರಿಸಬೇಕು ಅಥವಾ CIBIL ನಲ್ಲಿ ಪ್ರತಿಕೂಲವಾಗಿ ಪ್ರತಿಬಿಂಬಿತವಾಗಿರುವ ಖಾತೆಗಳಿಗೆ ಸಂಬಂಧಿಸಿದಂತೆ ಯಾವುದೇ ಬಾಕಿ ಉಳಿದಿಲ್ಲ ಎಂದು ಸಾಲದಾತರಿಂದ ನಿರಾಪೇಕ್ಷಣಾ ಪತ್ರ (NOC)ಗಳನ್ನು ಪಡೆಯಬೇಕು. ವಿಫಲವಾದರೆ ಆಫರ್ ಪತ್ರವನ್ನು ಹಿಂಪಡೆಯಲಾಗುತ್ತದೆ /ರದ್ದುಗೊಳಿಸಲಾಗುತ್ತದೆ.
ಅಭ್ಯರ್ಥಿಗಳು ಮೊದಲು ಬ್ಯಾಂಕ್‌ನ ವೆಬ್‌ಸೈಟ್ www.unionbankofindia.co.in ಗೆ ಹೋಗಿ ಮತ್ತು ‘ನೇಮಕಾತಿ’ ಪುಟವನ್ನು ಕ್ಲಿಕ್ ಮಾಡಿ.
ನಂತರ ವೃತ್ತಿ ಅವಲೋಕನ ಪುಟವನ್ನು ತೆರೆಯಿರಿ, “ಪ್ರಸ್ತುತ ನೇಮಕಾತಿಯನ್ನು ವೀಕ್ಷಿಸಲು ಕ್ಲಿಕ್ ಮಾಡಿ “ಸ್ಥಳೀಯ ಬ್ಯಾಂಕ್ ಅಧಿಕಾರಿಯ ನೇಮಕಾತಿ” ಲಿಂಕ್ ತೆರೆಯಿರಿ(2025-26)” ಮತ್ತು ನಂತರ ಆನ್‌ಲೈನ್ ಅರ್ಜಿ ನಮೂನೆಯನ್ನು ತೆರೆಯಲು “ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಆಯ್ಕೆಯನ್ನು ಕ್ಲಿಕ್ ಮಾಡಿ.
(ii)ಅರ್ಜಿಯನ್ನು ನೋಂದಾಯಿಸಲು, “ಹೊಸ ನೋಂದಣಿಗಾಗಿ ಇಲ್ಲಿ ಕ್ಲಿಕ್ ಮಾಡಿ” ಟ್ಯಾಬ್ ಅನ್ನು ಆಯ್ಕೆ ಮಾಡಿ ಮತ್ತು ಹೆಸರು, ಸಂಪರ್ಕ ವಿವರಗಳು ಮತ್ತು ಇಮೇಲ್-ಐಡಿ ಅನ್ನು ನಮೂದಿಸಿ.ತಾತ್ಕಾಲಿಕ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಸಿಸ್ಟಮ್‌ನಿಂದ ರಚಿಸಲಾಗುತ್ತದೆ ಮತ್ತು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ತಾತ್ಕಾಲಿಕ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಗಮನಿಸಿ.ತಾತ್ಕಾಲಿಕ ನೋಂದಣಿ ಸಂಖ್ಯೆಯನ್ನು ನೀವು ಸೂಚಿಸುವ ಇಮೇಲ್ ಮತ್ತು SMS ಮೂಲಕ ಕೂಡ ಕಳುಹಿಸಲಾಗುವುದು.

ನೆನಪಿಡಿ:

RELATED ARTICLES  ತುಮಕೂರು ಜಿಲ್ಲಾ ಪಂಚಾಯಿತಿಯು ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಮಾನವ ಸಂಪನ್ಮೂಲ ಸೇವೆಗೆ ಹೊರಗುತ್ತಿಗೆ ಮೂಲಕ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಮತ್ತು/ಅಥವಾ ಅವರ ಜಾತಿಯು ಕೇಂದ್ರ ಪಟ್ಟಿಯಲ್ಲಿ ಸ್ಥಾನ ಪಡೆಯದಿದ್ದರೆ ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಆನ್‌ಲೈನ್ ಅರ್ಜಿ ನಮೂನೆಯಲ್ಲಿ ತಮ್ಮ ವರ್ಗವನ್ನು ಸಾಮಾನ್ಯ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಭಾರತ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಲೇಯರ್ (Non cremy layer) ಷರತ್ತಿನೊಂದಿಗೆ OBC ಪ್ರಮಾಣಪತ್ರವನ್ನು ಹೊಂದಿರಬೇಕು.

ಮುಖ್ಯ ಪರೀಕ್ಷೆ ಪ್ರಶ್ನೆಪತ್ರಿಕೆ ಹೀಗಿದೆ:

ವಿಭಾಗ
ಪ್ರಶ್ನೆ ಸಂಖ್ಯೆ
/ ಅಂಕ
ಅವಧಿ

ಇಂಗ್ಲಿಷ್‌ ಭಾಷೆ
35/40
40 ನಿಮಿಷಗಳು
ಡೇಟಾ ಅನಾಲಿಸಿಸ್‌ ಆಂಡ್‌ ಇಂಟರ್‌ಪ್ರಿಟೇಷನ್‌
60/35
45 ನಿಮಿಷಗಳು
ರೀಸನಿಂಗ್‌ ಆಂಡ್‌ ಕಂಪ್ಯೂಟರ್‌ ಆಪ್ಟಿಟ್ಯೂಡ್‌
60/45
60 ನಿಮಿಷಗಳು
ಸಾಮಾನ್ಯ ಜ್ಞಾನ/ ಆರ್ಥಿಕ ಅರಿವು General/Economy/ Banking
Awareness
40/40
35 ನಿಮಿಷಗಳು

ಒಟ್ಟು ವಸ್ತುನಿಷ್ಟ ಪರೀಕ್ಷೆ
155/200
180 ನಿಮಿಷಗಳು
ಇಂಗ್ಲಿಷ್‌ ಭಾಷೆ (ಪತ್ರ ಬರವಣಿಗೆ ಮತ್ತು ಪ್ರಬಂಧ)
2/25
30 ನಿಮಿಷಗಳು
ಒಟ್ಟು
157/ 225
210 ನಿಮಿಷಗಳು

ಇಂಗ್ಲೀಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುತ್ತದೆ. ಮುಖ್ಯ ಪರೀಕ್ಷೆ ಮುಗಿಯುತ್ತಿದ್ದಂತೆ ಇಂಗ್ಲಿಷ್ ಭಾಷೆಗೆ (Letter Writing & Essay- with two questions) ಸಂಬಂಧಿಸಿದಂತೆ 25 ಅಂಕಗಳಿಗೆ ಡಿಸ್ಸ್ಕ್ರಿಟಿವ್ ಟೆಸ್ಟ್ ನಡೆಸಲಾಗುತ್ತದೆ. ಅವಧಿ 30 ನಿಮಿಷಗಳು. ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿಯೇ ಉತ್ತರ ಬರೆಯಬೇಕು. ಇಂಗ್ಲಿಷ್ ಭಾಷೆಯ ವಿವರಣಾತ್ಮಕ ಪೇಪರ್ (ಪತ್ರ ಬರವಣಿಗೆ ಮತ್ತು ಪ್ರಬಂಧ) ಅನ್ನು ಸ್ವಯಂಚಾಲಿತ ಸ್ಕೋರಿಂಗ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ. ಬರವಣಿಗೆಯ ಪ್ರಾವೀಣ್ಯಕ್ಕೆ ಸಂಬಂಧಿಸಿದಂತೆ ವೈಶಿಷ್ಟಗಳನ್ನು ಗುರುತಿಸುವುದು ಇದರ ಕಾರ್ಯ ವಿಧಾನವಾಗಿದೆ.

ಆಂಗ್ಲ ಭಾಷೆಯಲ್ಲಿ ಹಾಗೂ ಬರವಣಿಗೆಯಲ್ಲಿ ಪರೀಕ್ಷೆ ಬರೆಯುವವರ ಪ್ರಾವೀಣ್ಯವನ್ನು ವಸ್ತುನಿಷ್ಠ ರೀತಿಯಲ್ಲಿ ಮೌಲ್ಯಮಾಪನ ಮಾಡುವ ವಿಶಿಷ್ಟ ವಿಧಾನವಾಗಿದೆ.

ಋಣಾತ್ಮಕ ಮೌಲ್ಯಮಾಪನ ಇದೆ:

ಆನ್‌ಲೈನ್ ಪರೀಕ್ಷೆಯ ವಸ್ತುನಿಷ್ಠ ಮಾದರಿಯ ಪರೀಕ್ಷೆಗಳಾಗಿದ್ದು ಋಣಾತ್ಮಕ ಮೌಲ್ಯಮಾಪನ ಇದೆ. ತಪ್ಪು ಉತ್ತರ ಗುರುತಿಸಿದಲ್ಲಿ, ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ. ಪ್ರಶ್ನೆ ಖಾಲಿ ಬಿಟ್ಟರೆ, ಯಾವುದೇ ಅಂಕ ಕಳೆಯುವುದಿಲ್ಲ.

ಹುದ್ದೆಗಳಿಗೆ ಆಯ್ಕೆ ಮಾಡುವಾಗ ಆನ್‌ಲೈನ್ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದಿರಬೇಕು. ಪ್ರತಿ ಅಭ್ಯರ್ಥಿಯು ಆನ್‌ಲೈನ್ ಪರೀಕ್ಷೆಯ ಪ್ರತಿ ವಿಭಾಗದಲ್ಲಿಯೂ ಕನಿಷ್ಠ ಸ್ಕೋರ್ ಪಡೆಯಬೇಕಾಗುತ್ತದೆ. ಹಾಗೂ ಒಟ್ಟಾರೆ ಕನಿಷ್ಟ ಅಂಕ ಕೂಡ ಪಡೆಯಬೇಕಾದ ಅನಿವಾರ್ಯತೆ ಇದೆ. ಪ್ರತಿ ರಾಜ್ಯದಲ್ಲಿರುವ ಖಾಲಿ ಹುದ್ದೆಗಳನ್ನು ಆಧರಿಸಿ, ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ತಯಾರಿಸಲಾಗುತ್ತದೆ. ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಷ್ಟೇ ಮೆರಿಟ್ ಪಟ್ಟಿಗೆ ಪರಿಗಣಿಸಲಾಗುತ್ತದೆ. ಈ ಕಾರಣಕ್ಕಾಗಿ ಹೆಚ್ಚಿನ ಅಂಕಗಳಿಸುವತ್ತ ಅಭ್ಯರ್ಥಿಗಳು ಗಮನ ನೀಡಬೇಕಾಗುತ್ತದೆ.

ನೆನಪಿಡಿ:ಕನ್ನಡದಲ್ಲಿ ಪರೀಕ್ಷೆ ನಡೆಯೊಲ್ಲ.

ಪ್ರೊಬೇಷನ್‌ ಅವಧಿ:
ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕಿಗೆ ಸೇರಿದ ದಿನಾಂಕದಿಂದ 2 ವರ್ಷಗಳ ಸಕ್ರಿಯ ಸೇವೆಯ ಅವಧಿಗೆ ಪ್ರೊಬೇಷನ್‌ನಲ್ಲಿರುತ್ತಾರೆ.

ಸೇವಾ ಪರಿಹಾರ ಬಾಂಡ್:
ಆಯ್ಕೆಯಾದ ಅಭ್ಯರ್ಥಿಗಳು ಕನಿಷ್ಠ 3 ವರ್ಷಗಳ ಅವಧಿಗೆ ಬ್ಯಾಂಕ್‌ಗೆ ಸೇವೆ ಸಲ್ಲಿಸಲು ಸೇವಾ ನಷ್ಟ ಪರಿಹಾರ ಬಾಂಡ್ ಅನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ಮತ್ತು ಅವನು/ಅವಳು 3 ವರ್ಷಗಳ ಸಕ್ರಿಯ ಸೇವೆಯನ್ನು ಪೂರ್ಣಗೊಳಿಸುವ ಮೊದಲು ಬ್ಯಾಂಕ್ ಬಿಟ್ಟು ಹೋಗುವ ಸಂದರ್ಭದಲ್ಲಿ ಬ್ಯಾಂಕ್‌ಗೆ ರೂ.2,00,000.00 (ರೂ. ಎರಡು ಲಕ್ಷ ಮಾತ್ರ) ಸರ್ಕಾರದ ನಿಯಮಗಳ ಪ್ರಕಾರ ಅನ್ವಯವಾಗುವ ತೆರಿಗೆಗಳನ್ನು ಪಾವತಿಸ ಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ವೆಬ್ ಲಿಂಕ್ ಹಾಗೂ ಅಧಿಸೂಚನೆಗೆ: www.unionbankofindia.co.in

K R Balachandra

ಆರ್ ಕೆ ಬಾಲಚಂದ್ರ. ಲೇಖಕರು, ಬ್ಯಾಂಕಿಂಗ್ ಮತ್ತು ವ್ಯಕ್ತಿತ್ವ ವಿಕಸನ ಹಾಗೂ ಸಾಪ್ಟ್ ಸ್ಕಿಲ್ ತರಬೇತುದಾರರು ಹಾಗೂ ವೃತ್ತಿ ಮಾರ್ಗದರ್ಶಕರು, ಬೆಂಗಳೂರು.