ಕುಮಟಾ : ಯಕ್ಷಸಿಂಚನ ಟ್ರಸ್ಟ್ ಬೆಂಗಳೂರು ಇವರು ಪ್ರತಿವರುಷ ಯಕ್ಷಗಾನದಲ್ಲಿ ಸೇವೆಯನ್ನು ಮಾಡಿದ ಮಹನೀಯರಿಗೆ ನೀಡುವ ‘ಸಾರ್ಥಕ ಸಾಧಕ’ ಪ್ರಶಸ್ತಿಯನ್ನು ಈ ಬಾರಿ ಯಕ್ಷಗಾನದಲ್ಲಿ ೪೦ ವರುಷಗಳ ಅನನ್ಯ ಸೇವೆಗಾಗಿ ಉಮೇಶ ಭಟ್ಟ ಬಾಡ ಅವರಿಗೆ ನೀಡಿ ಗೌರವಿಸಲು ನಿರ್ಧರಿಸಿದೆ. ನವೆಂಬರ್ ೧೭ರಂದು ಬೆಂಗಳೂರಿನ ಉದಯಭಾನು ಕಲಾಸಂಘದಲ್ಲಿ ನಡೆಯವ ಯಕ್ಷಸಿಂಚನದ ೧೫ನೇ ವರುಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವದು ಎಂದು ಟ್ರಸ್ಟಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ

RELATED ARTICLES  ಫೇ.೫ ರಿಂದ ಮತ್ತೆ ಪಾದಯಾತ್ರೆ : ಅನಂತಮೂರ್ತಿ ಹೆಗಡೆ.

ಉಮೇಶ್ ಭಟ್: ಕಳೆದ ನಾಲ್ಕು ದಶಕಗಳಿಂದ ಯಕ್ಷಗಾನದಲ್ಲಿ ಭಾಗವತರಾಗಿ ಯಕ್ಷ ಗುರುಗಳಾಗಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನದ ಮಹಾನ್ ತಾರೆಗಳಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ್ ರಾವ್, ಕುಮಟಾ ಗೋವಿಂದ ನಾಯ್ಕ್ ಮುಂತಾದ ಅತಿರಥ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಖ್ಯಾತಿ ಇವರದ್ದಾಗಿದೆ. ಜೊತೆಗೆ ಬೇರೆ ಬೇರೆ ವೃತ್ತಿ ಮೇಳಗಳಲ್ಲಿ ತಿರುಗಾಟವನ್ನು ಮಾಡಿದ್ದಾರೆ. ಪರಂಪರೆಯ ಭಾಗವತರಾಗಿ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.

RELATED ARTICLES  ವಸತಿ ಯೋಜನೆಯ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ಹಸ್ತಾಂತರಿಸಿದ ಶಾಸಕ ದಿನಕರ ಶೆಟ್ಟಿ
1000301295