ಕುಮಟಾ : ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಶ್ರೀಮತಿ ಶಾರದಾ ಶೆಟ್ಟಿಯವರನ್ನು ರಾಜ್ಯದ ನೂತನ ಕೆಪಿಸಿಸಿ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಶಾಸಕಿಯವರ ಕ್ಷೇತ್ರದಲ್ಲಿನ ಸಾಧನೆ ಮತ್ತು ಪಕ್ಷ ಬೆಳವಣಿಗೆಯಲ್ಲಿ ಇವರ ಕೊಡುಗೆ ಗಮನಿಸಿ ಈ ಅವಕಾಶ ಒದಗಿಬಂದಿದೆ ಎಂದು ಮೂಲಗಳು ತಿಳಿಸಿದೆ.

RELATED ARTICLES  ನಾಮಪತ್ರ ಸಲ್ಲಿಸಿದ ಶಾರದಾ ಮೋಹನ ಶೆಟ್ಟಿ: ಅಪಾರ ಬೆಂಬಲಿಗರ ಉಪಸ್ಥಿತಿ.

ಈಗಾಗಲೇ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಇವರು ಪಕ್ಷದ ವಲಯದಲ್ಲಿ ಗುರುತರ ಜವಾಬ್ಧಾರಿ ಪಡೆದಿರುವುದು ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸುವವಂತೆ ಮಾಡಿದೆ. ಇದರೊಟ್ಟಿಗೆ ಕಾಂಗ್ರೇಸ್ ಪಕ್ಷದ ಈ ನಡೆ ಕುಮಟಾ ಹೊನ್ನಾವರ ಕ್ಷೇತ್ರದ ವಿಪಕ್ಷ ಧುರೀಣರ ಹುಬ್ಬೇರಿಸುವಂತೆ ಮಾಡಿರುವುದೆ ಎಂಬುದು ಸದ್ಯ ಜನವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದೆ.

RELATED ARTICLES  ಅಪಘಾತದಲ್ಲಿ ಮಹಿಳೆ ಸಾವು.