Home State News ದೇವಸ್ಥಾನದಲ್ಲಿ ದಲಿತ ಅರ್ಚಕರನ್ನು ನಾವೂ ನೇಮಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ದೇವಸ್ಥಾನದಲ್ಲಿ ದಲಿತ ಅರ್ಚಕರನ್ನು ನಾವೂ ನೇಮಿಸುತ್ತೇವೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಕೇರಳ ಸರ್ಕಾರ ದೇವಸ್ಥಾನಗಳಲ್ಲಿ ದಲಿತ ಅರ್ಚಕರನ್ನು ನೇಮಿಸಿರುವ ರೀತಿ ರಾಜ್ಯದ ದೇವಾಲಯಗಳಲ್ಲೂ ದಲಿತ ಅರ್ಚಕರನ್ನು ನೇಮಿಸುವ ಕುರಿತು ಸಿಎಂ ಸಿದ್ದರಾಮಯ್ಯ ಒಲವು ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಮುಜರಾಯಿ ದೇವಾಲಯಗಳಲ್ಲಿ ದಲಿತ ಅರ್ಚಕರನ್ನು ನೇಮಿಸಲು ಯಾವುದೇ ವಿರೋಧವಿಲ್ಲ. ಅದನ್ನು ನಾವು ಮಾಡಿಯೇ ತೀರುತ್ತೇವೆ ಎಂದಿದ್ದಾರೆ.

 

ಮುಜರಾಯಿ ಇಲಾಖೆಯ ಅಡಿ ಸುಮಾರು 35 ಸಾವಿರ ದೇವಸ್ಥಾನಗಳಿದ್ದು, ಇದರಡಿ ಬರುವ ವಿವಿಧ ದೇವಸ್ಥಾನಗಳಲ್ಲಿ ಆರು ಮಂದಿ ದಲಿತರು ಸೇರಿದಂತೆ 36 ಮಂದಿ ಬ್ರಾಹ್ಮಣೇತರ ಅರ್ಚಕರನ್ನು ನೇಮಿಸಲು ಕೇರಳ ಸರ್ಕಾರ ಆದೇಶಿಸಿತ್ತು. ಅದೇ ರೀತಿ ಕರ್ನಾಟಕದಲ್ಲೂ ಜಾರಿಗೆ ತರಲು ಸಿಎಂ ಮುಂದಾಗಿದ್ದಾರೆ.