ಕಾರವಾರ : ಕಾರು ಹಾಗೂ ಬಸ್ ನಡುವೆ ಡಿಕ್ಕಿ ಸಂಭವಿಸಿ ಕಾರನಲ್ಲಿದ್ದ ಇಬ್ಬರೂ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೈತ್ಕೂಲ್ ಬಳಿ ಸಂಭವಿಸಿದೆ‌.

ಗೋವಾ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ ಸ್ವಿಫ್ಟ್ ಕಾರು ಹಾಗೂ ಕೆಎಸ್ ಆರ್ ಟಿಸಿ ಬಸ್ ನಡುವೆ ನಡೆದ ಅಪಘಾತದಲ್ಲಿ ಕಾರನಲ್ಲಿ ಇದ್ದ ಇಬ್ಬರಿಗೆ ಗಂಭೀರ ಪೆಟ್ಟಾಗಿದೆ.

RELATED ARTICLES  ಯಲಕೊಟ್ಟಿಗೆ ಶಾಲೆಯಲ್ಲಿ ಕೊಡುಗೆ ಸ್ವೀಕಾರ ಕಾರ್ಯಕ್ರಮ

ಕಾರ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ನಡೆದಿದೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಕಾರವಾರ ಟೌನ್ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಪಂ.ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಹಾಗೂ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಡಿಸೆಂಬರ್ 1ಕ್ಕೆ