ಭಟ್ಕಳ ; ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು, ಯಕ್ಷರಕ್ಷೆ ಮುರ್ಡೇಶ್ವರ, ಲಯನ್ಸ ಕ್ಲಬ್ ಮುರ್ಡೇಶ್ವರ, ಮಹಿಷಮರ್ಧೀನಿ ಯಕ್ಷಗಾನ ಮಂಡಳಿ ಗೋಳಿಕುಂಬ್ರಿಯ ಸಹಯೋಗದಲ್ಲಿ ಯಕ್ಷರಂಗದ ಸಾರ್ವಕಾಲಿಕ ನಟಸಾರ್ವಭೌಮ, ಪದ್ಮಶ್ರೀ ಪುರಸ್ಕøತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸಂಸ್ಮರಣಾರ್ಥ ಚಿಟ್ಟಾಣಿ ನುಡಿನಮನ ಕಾರ್ಯಕ್ರಮವು ಇದೇ ಬರುವ 22ನೇ ತಾರೀಖಿನ ರವಿವಾರದಂದು ಸಂಜೆ 4 ಗಂಟೆಗೆ ಮುರ್ಡೇಶ್ವರದ ಬಲ್ಸೆಯಲ್ಲಿರುವ ರಾಘವೇಶ್ವರ ಭಾರತೀ ಹವ್ಯಕ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅರವಿಂದ ಕರ್ಕಿಕೋಡಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕರಾದ ಡಾ.ಜಿ.ಎಲ್.ಹೆಗಡೆ, ಕುಮಟಾ ಆಗಮಿಸಲಿದ್ದಾರೆ.

RELATED ARTICLES  ಜಾನುವಾರುಗಳ ಕಳ್ಳ ಸಾಗಾಣಿಕೆ : 8 ಜಾನುವಾರು ಪೊಲೀಸ್ ವಶಕ್ಕೆ.

 

ಯಕ್ಷರಕ್ಷೆಯ ಅಧ್ಯಕ್ಷ ಡಾ.ಐಆರ್.ಭಟ್, ಲಯನ್ಲ ಕ್ಲಬ್ ಅಧ್ಯಕ್ಷ ಮಂಜುನಾಥ ನಾಯ್ಕ, ಮಹಿಷಮರ್ಧಿನಿ ಯಕ್ಷಗಾನ ಮಂಡಳಿಯ ಮುಖ್ಯಸ್ಥರಾದ ನಾಗರಾಜ ಮಧ್ಯಸ್ಥ ಹಾಗೂ ಮದ್ದಳೆಯ ಮೋಡಿಗಾರ ದಿ.ದುರ್ಗಪ್ಪ ಗುಡಿಗಾರರ ಧರ್ಮಪತ್ನಿ ಶ್ರೀಮತಿ ಶಾರದಾ ದುರ್ಗಪ್ಪ ಗುಡಿಗಾರರವರ ಗೌರವ ಉಪಸ್ಥಿತಿ ಇರಲಿದೆ. ಈ ಕಾರ್ಯಕ್ರಮಕ್ಕೆ ಚಿಟ್ಟಾಣಿ ಅಭಿಮಾನಿಗಳು ಹಾಗೂ ಯಕ್ಷಗಾನ ಪ್ರೇಮಿಗಳು ಆಗಮಿಸಿ ತಮ್ಮ ನಮನಗಳನ್ನು ಸಲ್ಲಿಸಬೇಕಾಗಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಉಕ್ರೇನ್ ನಿಂದ ದೆಹಲಿ ತಲುಪಿಸ ಉತ್ತರಕನ್ನಡದ ವಿದ್ಯಾರ್ಥಿನಿ ಸ್ನೇಹಾ.